ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್‌ನಿಂದ ಗುಣಮುಖರಾದ ಬಳಿಕ ಮಕ್ಕಳನ್ನು ಕಾಡುವ ತೊಂದರೆಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09: ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಕೊರೊನಾ ಸೋಂಕಿಗೆ ತುತ್ತಾಗಿರುವ ಮಕ್ಕಳ ಸಂಖ್ಯೆ ಕಡಿಮೆ.

ಆದರೂ ಕೊರೊನಾ ಸೋಂಕಿಗೆ ತುತ್ತಾದವರು ಸೋಂಕಿನಿಂದ ಗುಣಮುಖರಾದ ಬಳಿಕವೂ ಕಾಡುವ ಸಾಕಷ್ಟು ತೊಂದರೆಯಿಂದ ವೈದ್ಯರು ಕೂಡ ಹೈರಾಣಾಗಿದ್ದಾರೆ.

ಕೊರೊನಾ ಚೇತರಿಕೆಯ ನಂತರದ ಪ್ರಕರಣಗಳು ಮಕ್ಕಳಲ್ಲಿ ವಿರಳವಾಗಿದ್ದರೂ, ಮಕ್ಕಳು ಹೊರ ಹೋಗಿ ಬೇರೆಯವರೊಂದಿಗೆ ಬೆರೆತಾಗ ಈ ಸಂಖ್ಯೆ ಹೆಚ್ಚಾಗುತ್ತದೆ. ಕೆಲವು ಮಕ್ಕಳು, ವಿಶೇಷವಾಗಿ ಹದಿಹರೆಯದವರು, ಚೇತರಿಕೆಯ ನಂತರ ಉಸಿರಾಟದ ತೊಂದರೆ ಮತ್ತು ಆಯಾಸ ಎಂದು ಹೇಳುತ್ತಿರುತ್ತಾರೆ.

ಬೆಂಗಳೂರಿನಲ್ಲಿ ಸತತ ಮೂರನೇ ದಿನ 5 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆ ಬೆಂಗಳೂರಿನಲ್ಲಿ ಸತತ ಮೂರನೇ ದಿನ 5 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆ

ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮಣಿಪಾಲ ಆಸ್ಪತ್ರೆಯ ಡಾ ಜಗದೀಶ್ ಚಿನ್ನಪ್ಪ ಹೇಳುತ್ತಾರೆ.

ಉರಿಯೂತ ಸಮಸ್ಯೆ

ಉರಿಯೂತ ಸಮಸ್ಯೆ

ಸ್ವಲ್ಪ ದಿಗಳ ಹಿಂದೆ ನಗರ ಆಸ್ಟರ್ ಸಿಎಂಐ ಆಸ್ಪತ್ರೆಗೆ 9 ವರ್ಷದ ಮಗುವನ್ನು ಚಿಕಿತ್ಸೆಗೆಂದು ಕರೆತರಲಾಗಿತ್ತು.ಉರಿಯೂತ ಸಮಸ್ಯೆ ಎಂದು ಹೇಳಿಕೊಂಡು ಕಳೆದ ಮಂಗಳವಾರ ಪೋಷಕರು ಕರೆದುಕೊಂಡು ಬಂದಿದ್ದರು. ಈ ಮಗು ಕೊವಿಡ್-19ನಿಂದ ಗುಣಮುಖ ಹೊಂದಿ 45 ದಿನಗಳಾಗಿದ್ದವು.

ಕೊವಿಡ್‌ನಿಂದ ಗುಣಮುಖರಾದ ಬಳಿಕವೂ ಕಾಡುವ ರೋಗಗಳು

ಕೊವಿಡ್‌ನಿಂದ ಗುಣಮುಖರಾದ ಬಳಿಕವೂ ಕಾಡುವ ರೋಗಗಳು

ಕೊವಿಡ್ ಬಂದು ಗುಣವಾಗಿ 30ರಿಂದ 45 ದಿನಗಳಾದ ನಂತರ ಮಕ್ಕಳಲ್ಲಿ ಎಂಐಎಸ್ ಆಟಿಕಲ್ ಕವಾಸಕಿ ರೋಗ, ಟಾಕ್ಸಿಕ್ ಸಿಂಡ್ರೋಮ್ ನಿಂದ ಬಳಲುತ್ತಿರುವುದನ್ನು ನೋಡುತ್ತೇವೆ. ಎಂಐಎಸ್ ವೈರಸ್ ಗೆ ತೀವ್ರ ಉರಿಯೂತದ ಸಮಸ್ಯೆಯಾಗಿದೆ.
ಕೊವಿಡ್ ನಿಂದ ಗುಣಮುಖ ಹೊಂದಿದ 30ರಿಂದ 45 ದಿನಗಳು ಕಳೆದ ನಂತರ ಈ ರೋಗಲಕ್ಷಣ ಏಕೆ ಕಾಣಿಸುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಏಸ್ಟರ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಶ್ರೀಕಾಂತ್ ಜೆ ಟಿ ಹೇಳುತ್ತಾರೆ.

ಕಣ್ಣು ಕೆಂಪಗಾಗುವುದು, ಕೈಕಾಲು ಊತ

ಕಣ್ಣು ಕೆಂಪಗಾಗುವುದು, ಕೈಕಾಲು ಊತ

ಅಧಿಕ ಜ್ವರ, ಮುಖದಲ್ಲಿ ಬದಲಾವಣೆ, ಕೆಂಪು ಕಣ್ಣು ಮತ್ತು ತುಟಿಗಳು, ಕೈ ಮತ್ತು ಕಾಲುಗಳು ಊದುವುದು, ಹೊಟ್ಟೆಯ ತೊಂದರೆಗಳು, ಹೊಟ್ಟೆ ನೋವು, ವಾಂತಿ, ಉಸಿರಾಟದ ತೊಂದರೆ ಮಕ್ಕಳಿಗೆ ಕಾಣಿಸಿದರೆ ತಕ್ಷಣ ಪೋಷಕರು ವೈದ್ಯರ ಬಳಿಗೆ ಹೋಗಬೇಕು. ಮಕ್ಕಳಲ್ಲಿ ಕಡಿಮೆ ರಕ್ತದೊತ್ತಡ, ರಕ್ತ ಸರಾಗವಾಗಿ ದೇಹದಲ್ಲಿ ಹರಿಯುವಿಕೆಯಲ್ಲಿ ತೊಂದರೆ, ಕೈ ಕಾಲು ಮರಗಟ್ಟಿದಂತಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯೆ ಡಾ ಸುಪ್ರಜಾ ಚಂದ್ರಶೇಖರ್ ಹೇಳುತ್ತಾರೆ.

ಹೊಟ್ಟೆನೋವು, ಜ್ವರದ ಸಮಸ್ಯೆ

ಹೊಟ್ಟೆನೋವು, ಜ್ವರದ ಸಮಸ್ಯೆ

ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರ್ರಲ್ ಆಸ್ಪತ್ರೆಗೆ 12 ವರ್ಷದ ಬಾಲಕ ತೀವ್ರ ಹೊಟ್ಟೆನೋವು, ಜ್ವರ, ಉರಿಯೂತ ಸಮಸ್ಯೆ, ಎದೆನೋವು ಎಂದು ಹೇಳಿಕೊಂಡು ಬಂದಿದ್ದ. ಕೊವಿಡ್-19ಗೆ ಸಂಬಂಧಪಟ್ಟಂತೆ ರೋಗಲಕ್ಷಣವಿದೆ ಎಂದು ವೈದ್ಯರು ಭಾವಿಸಿ ಪರೀಕ್ಷೆ ನಡೆಸಿದರು. ಪರೀಕ್ಷೆ ಮಾಡಿದಾಗ ಸಾರ್ಸ್-ಕೋವ್-2 ರೋಗಲಕ್ಷಣ ಪತ್ತೆಯಾಗಲಿಲ್ಲ. ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಿದಾಗ ಕೊರೊನಾ ದೃಢಪಟ್ಟು ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಿ ವಾರದ ಬಳಿಕ ಗುಣಮುಖವಾಯಿತು.

Recommended Video

Rain Alert : ರಾಜ್ಯದಂತ ಭಾರಿ ಮಳೆ ಸಾಧ್ಯತೆ | Oneindia Kannada

English summary
In yet another discovery about the way in which Covid-19 affects children, doctors in Bengaluru are finding that they sometimes develop certain symptoms nearly a month after they recover from the disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X