ಮಘಾ ನಕ್ಷತ್ರದ ಮೂರನೇ ಪಾದದಲ್ಲಿ ಕೇತು ಸಂಕ್ರಮಣ: 4 ರಾಶಿಯವರಿಗೆ ಶುಭ ಫಲ, ಅನಿರೀಕ್ಷಿತ ಧನ ಲಾಭ

ಕೇತು ಸಂಕ್ರಮಣ ಮೇ 29, ​​2026 ರ ಶುಕ್ರವಾರ ಬೆಳಿಗ್ಗೆ 10:16ಕ್ಕೆ ನಡೆಯಲಿದೆ. ಈ ದಿನ ಕೇತು ಮಘ ನಕ್ಷತ್ರದ ಮೂರನೇ ಪಾದಕ್ಕೆ ಕಾಲಿಡುತ್ತಿದ್ದಾನೆ. ಸ್ಪಷ್ಟ ಕೇತು ಜೂನ್ 30, 2026 ರವರೆಗೆ ಮಘಾ ನಕ್ಷತ್ರದ ಮೂರನೇ ಪಾದದಲ್ಲಿಯೇ ಸಂಚಾರ ನಡೆಸುತ್ತಾನೆ. ಜ್ಯೋತಿಷ್ಯದ ಪ್ರಕಾರ, ಮಘ ನಕ್ಷತ್ರದ ಮೂರನೇ ಪಾದದ ಅಧಿಪತಿ ಬುಧ. ಸ್ಪಷ್ಟ ಕೇತುವಿನ ಈ ಸಂಚಾರವು ನಾಲ್ಕು ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ.

ಕೇತು ಸಂಕ್ರಮಣದಿಂದ ಈ ರಾಶಿಗಳಿಗೆ ಧನಲಾಭ:

ವೃಷಭ ರಾಶಿ:

ಮಘಾ ನಕ್ಷತ್ರದ ಮೂರನೇ ಸ್ಥಾನದ ಮೂಲಕ ಕೇತುವಿನ ಸಂಚಾರವು ವೃಷಭ ರಾಶಿಯವರಿಗೆ ಶುಭ ಫಲ ನೀಡಲಿದೆ. ಹೊಸ ಉದ್ಯೋಗಾವಕಾಶಗಳು ತೆರೆದುಕೊಳ್ಳುವುದು. ಉದ್ಯಮಿಗಳು ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶ ಬರಬಹುದು. ಆರ್ಥಿಕ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.

Ketu Transit

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಕೇತುವಿನ ಈ ಸಂಚಾರವು ಪ್ರಯೋಜನಕಾರಿಯಾಗಿರಲಿದೆ.ಆರ್ಥಿಕ ಸ್ಥಿತಿ ಸದೃಢವಾಗಿರುವುದು. ವೃತ್ತಿಜೀವನದಲ್ಲಿ ತ್ವರಿತ ಪ್ರಗತಿ ಕಂಡುಬರುತ್ತದೆ. ಕಲೆ ಮತ್ತು ಸೃಜನಶೀಲ ಅನ್ವೇಷಣೆಗಳತ್ತ ಒಲವು ಹೆಚ್ಚಾಗುವುದು. ವ್ಯವಹಾರದಲ್ಲಿ ಮಾಡುವ ಹೂಡಿಕೆಗಳು ದೊಡ್ಡ ಮಟ್ಟದ ಲಾಭವನ್ನು ತರಬಹುದು. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುವುದು.

ಗುರುವಿನ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಪ್ರೇಮ ಜೀವನದಲ್ಲಿ ಸಿಗುವುದು ಯಶಸ್ಸು, ವೃದ್ಧಿಯಾಗುವುದು ಸಂಪತ್ತು
ಗುರುವಿನ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಪ್ರೇಮ ಜೀವನದಲ್ಲಿ ಸಿಗುವುದು ಯಶಸ್ಸು, ವೃದ್ಧಿಯಾಗುವುದು ಸಂಪತ್ತು

ಧನು ರಾಶಿ:

ಕೇತುವಿನ ಸಂಚಾರವು ಧನು ರಾಶಿಯವರ ಭಾಗ್ಯದ ಬಾಗಿಲು ತೆರೆಯುವುದು. ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಅದೃಷ್ಟ ನಿಮ್ಮ ಕಡೆ ಇರುವುದು. ಪೂರ್ಣವಾಗದೆ ಬಾಕಿ ಉಳಿದಿರುವ ಕೆಲಸ ಪೂರ್ಣವಾಗುವುದು. ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವ ಮೂಲಕ ಧನಲಾಭವಾಗುವುದು. ಹೊಸ ಪ್ರಯತ್ನಗಳಿಗೆ ಸ್ನೇಹಿತರ ಬೆಂಬಲ ಸಿಗುತ್ತದೆ.

ಗುರು ಸಂಕ್ರಮಣದಿಂದ ಹಂಸ ಮಹಾಪುರಷ ರಾಜಯೋಗ : ನಾಲ್ಕು ರಾಶಿಯವರಿಗೆ ಒಲಿಯುವುದು ಅದೃಷ್ಟ
ಗುರು ಸಂಕ್ರಮಣದಿಂದ ಹಂಸ ಮಹಾಪುರಷ ರಾಜಯೋಗ : ನಾಲ್ಕು ರಾಶಿಯವರಿಗೆ ಒಲಿಯುವುದು ಅದೃಷ್ಟ

ಮಕರ ರಾಶಿ:

ಕೇತುವಿನ ಸಂಚಾರವು ಮಕರ ರಾಶಿಯವರ ಕೆಲಸ ಕಾರ್ಯಗಳಲ್ಲಿ ಯಶಸ್ಸು ತರುವುದು. ಉದ್ಯೋಗದಲ್ಲಿ ಕೆಲವು ಏರಿಳಿತಗಳು ಎದುರಾಗಬಹುದಾದರೂ, ಸಮಸ್ಯೆಗೆ ಪರಿಹಾರ ಕೂಡಾ ಸಿಗುವುದು. ವ್ಯವಹಾರದಲ್ಲಿ ಗಮನಾರ್ಹ ಲಾಭವಾಗುವುದು. ಹೂಡಿಕೆಗಳಲ್ಲಿ ಉತ್ತಮ ಲಾಭ ಸಿಗುವುದು.ಹೊಸ ಕಾರು ಖರೀದಿಸುವ ಯೋಗವಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+