DK Shivakumar: ಎಚ್.ಡಿ ಕುಮಾರಸ್ವಾಮಿ ಅವರಿಗಂತೂ ಒಳ್ಳೆ ಲಾಟರಿ ಎಂದ ಡಿ.ಕೆ ಶಿವಕುಮಾರ್, ಯಾವ ವಿಷಯಕ್ಕೆ
DK Shivakumar: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರಿಗಂತೂ ಒಳ್ಳೆ ಲಾಟರಿ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಯಾವ ಕಾರಣಕ್ಕೆ ಎಚ್.ಡಿ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಡಿ.ಕೆ ಶಿವಕುಮಾರ್ ಅವರು ಈ ರೀತಿ ಹೇಳಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬಿಡದಿ ಟೌನ್ ಶಿಪ್ ಯೋಜನೆಯಿಂದ ಕುಮಾರಸ್ವಾಮಿ ಅವರಿಗೆ ಒಳ್ಳೆ ಲಾಟರಿಯೇ ಬರಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಈ ವಿಚಾರವಾಗಿ ಮಾತನಾಡಿರುವ ಅವರು, ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಪುಟ ಅನುಮೋದನೆ ನೀಡಿರುವ ವಿಷಯದ ಬಗ್ಗೆ ಮಾತನಾಡಿದ್ದಾರೆ. ತುಂಗಭದ್ರಾ ಗೇಟ್ ಅಳವಡಿಕೆ ವಿಚಾರವಾಗಿ ಟೀಕೆ ಮಾಡುತ್ತಿದ್ದರು. ಆದರೆ ಈಗ ಅದು ಏನಾಗಿದೆ. ನಾವು ಟೀಕೆ ಮೀರಿ ಕೆಲಸ ಮಾಡಿದ್ದೇವೆ ಅದು ಈಗ ಎಲ್ಲರಿಗೂ ಗೊತ್ತಾಗಿದೆ ಎಂದಿದ್ದಾರೆ.

DK Shivakumar: ಎಚ್.ಡಿ ಕುಮಾರಸ್ವಾಮಿಗೆ ಒಳ್ಳೆಯ ಲಾಟರಿ
ಇನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಒಳ್ಳೆಯ ಲಾಟರಿ ಸಿಗಲಿದೆ ಅಂತ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕುಮಾರಸ್ವಾಮಿ ಅವರು ಈಗ ನಾನೇ ಮಾಡಿದ್ದು 8 ಸಾವಿರ ಅಡಿ ಕೊಡುತ್ತೇನೆ ಅಂತ ದೆಹಲಿಯಲ್ಲಿ ಕುಳಿತುಕೊಂಡು ಈಗ ಹೇಳುತ್ತಿದ್ದಾರೆ. ಅವರ ಕ್ಷೇತ್ರವಾಗಿರುವ ಕಾರಣಕ್ಕೆ ಡಿನೋಟಿಫೈ ಮಾಡಬೇಕಿತ್ತು. ಅವರದ್ದೇ ಜಮೀನು ಇದೆಯಲ್ಲವೇ. ಈಗ ಹಣ ಪಡೆಯಲಿ ನೋಡೋಣ. ದುಡ್ಡು ಬೇಡ ಎಂದು ಕೊಟ್ಟು ಬಿಡಲಿ. ಅವರು ಎಷ್ಟಕ್ಕೆ ತೆಗೆದುಕೊಂಡಿದ್ದರು ಎಂದೆಲ್ಲ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮುಂದುವರಿದು ಈಗ ಎಷ್ಟಕ್ಕೆ ಜಾಗ / ಭೂಮಿ ಹೋಗುತ್ತದೆ ಎಂದು ಗೊತ್ತಿಲ್ಲವೇ ಅವರ ಸೇಲ್ ಡೀಡ್ ತೆಗೆದು ನೋಡಿ. ಈಗ ಒಳ್ಳೆ ಲಾಟರಿ ಬರುತ್ತಿದೆ ಕುಮಾರಸ್ವಾಮಿ ಅವರಿಗೆ. ಯಾರಿಗೋ ಅವರು ಜಿಪಿಎ ನೀಡಿದ್ದರು. ನನಗೆ ಹಣ ನೀಡಿ ಎಂದು ಅವರು ಹೇಳಿದ್ದಾರೆ.
ಏನಾದರೂ ಹೆಚ್ಚು ಕಡಿಮೆ ಆಗುತ್ತದೆ ಅಂತ ನಾನು ಭೂಮಿ ಮಾಲೀಕರಿಗೆ ನೀಡಿ ಎಂದು ನಾನೇ ಹೇಳಿದ್ದೇನೆ ಅಂತಲೂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಭೂ ಮಾಲೀಕರು ನನ್ನ ಮೇಲೆ ವಿಶ್ವಾಸ ಇರಿಸಿ. ನಿಮ್ಮ ಭೂಮಿ ಉಳಿಸಿಕೊಳ್ಳಿ. ನಿಮಗೆ ಸಾಕಷ್ಟು ಲಾಭ ಸಿಗಲಿದೆ. ರೈತರು ಹೋರಾಟ ಮಾಡುತ್ತಾರೆ. ವಿಪಕ್ಷಗಳು ಎತ್ತಿ ಕಟ್ಟಿದ್ದಾರೆ ಏನು ಮಾಡುವುದು. ಟೀಕೆ ಟಿಪ್ಪಣಿ ಇರುವುದೇ ಏನು ಮಾಡುವುದು ಎಂದಿದ್ದಾರೆ.












Click it and Unblock the Notifications