• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕ್ಕಳಲ್ಲಿ ಹೆಚ್ಚುತ್ತಿದೆ ನ್ಯುಮೋನಿಯಾ, ಪೋಷಕರಲ್ಲಿ ಮಡುಗಟ್ಟಿದ ಆತಂಕ

|
Google Oneindia Kannada News

ಬೆಂಗಳೂರು, ನವೆಂಬರ್ 13:ಒಂದೆಡೆ ದೇಶಾದ್ಯಂತ ಕೊರೊನಾ ಭಯವಾದರೆ ಇನ್ನೊಂದೆಡೆ ಮಕ್ಕಳಲ್ಲಿ ಹೆಚ್ಚುತ್ತಿರುವ ನ್ಯುಮೋನಿಯಾ ಪ್ರಕರಣಗಳಿಂದಾಗಿ ಪೋಷಕರು ಕಂಗಾಲಾಗಿದ್ದಾರೆ.

ಲಸಿಕೆ ಕುರಿತು ಪೋಷಕರಲ್ಲಿ ಅರಿವಿನ ಕೊರತೆಗಳಿದ್ದು, ಇದರಿಂದಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ನ್ಯುಮೋನಿಯಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಮಕ್ಕಳನ್ನು ಉತ್ತಮವಾಗಿ ರಕ್ಷಣೆ ಮಾಡುವ ಕುರಿತು ನವೀನ ಲಸಿಕೆ ತಂತ್ರಗಳ ಬಗ್ಗೆ ಚರ್ಚಿಸುತ್ತಿದ್ದರೆ, ಶುಕ್ರವಾರ ಬಿಬಿಎಪಿ ವಿಶೇಷ ಆಯುಕ್ತ (ಆರೋಗ್ಯ) ಬೆಂಗಳೂರಿನಲ್ಲಿ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ ಕಾರ್ಯಕ್ರಮಕ್ಕೆ (ಪಿಸಿವಿ) ಚಾಲನೆ ನೀಡಿದರು.

ಈ ಲಸಿಕೆಯು ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ನ್ಯುಮೋಕೊಕಸ್‌ನಿಂದ ಉಂಟಾಗುವ ಇತರ ಗಂಭೀರ ಬ್ಯಾಕ್ಟೀರಿಯಾದ ಸೋಂಕುಗಳು ತಗುಲದಂತೆ ತಡೆಗಟ್ಟಬಹುದು ಎಂದು ಹೇಳಿದ್ದಾರೆ.

5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಲಸಿಕೆ ವಿತರಣೆ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಚಿಕ್ಕ ಮಕ್ಕಳು, ಹಿರಿಯ ನಾಗರೀಕರು ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವವರು ಈ ಲಸಿಕೆ ಪಡೆಯಬಹುದು. ಈ ಹಿನ್ನೆಲೆಯಲ್ಲಿ ನ್ಯಾಮೋಕೊಕಲ್ ಕಾಂಜುಗೇಟ್ ಲಸಿಕಾಕರಣಕ್ಕೆ ವ್ಯಾಪಕ ಪ್ರಚಾರ ನೀಡಲಾಗುತ್ತದೆ ಎಂದರು.

ಪ್ರತೀ ವರ್ಷ ನಗರದಲ್ಲಿ 1.2 ಲಕ್ಶ ಜನನಗಳು ವರದಿಯಾಗುತ್ತಿವೆ. ಮಕ್ಕಳಲ್ಲಿ ನ್ಯೂಮೋನಿಯಾ ಮತ್ತು ಮೆದುಳಿನ ಜ್ವರವನ್ನು ತಡೆಯುವ ಉದ್ದೇಶದಿಂದ ಲಸಿಕೆ ವಿತರಿಸಲಾಗುತ್ತಿದೆ. ನಗರದ ಪ್ರದೇಶಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಲಸಿಕೆಗಾಗಿ ಹಣವಂತರು, ಗಣ್ಯರು ಸಾವಿರಾರು ರುಪಾಯಿ ಪಾವತಿಸುತ್ತಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ನ್ಯುಮೋನಿಯಾ ಲಕ್ಷಣಗಳು
-ಕಡಿಮೆ ರಕ್ತದ ಒತ್ತಡ ಅಥವಾ ಲೋ ಬಿಪ
-ಹೃದಯದ ಬಡಿತ ತುಂಬಾ ಹೆಚ್ಚಾಗಿರುವುದ
-ವೇಗವಾಗಿ ಉಸಿರಾಡುವುದ
-ಜ್ವರ
-ಚಳಿ ಇಲ್ಲದಿದ್ದರೂ ಮೈ ಕೈ ನಡುಗುವುದ
-ವಿಪರೀತ ಮಾನಸಿಕ ಗೊಂದ
-ಹೊಟ್ಟೆ ಕೆಟ್ಟು ಹೋಗುವುದು ( ವಾಕರಿಕೆ, ವಾಂತಿ ಮತ್ತು ಭೇದಿ
-ವಿಪರೀತ ತಲೆನೋವು ಕಾಡುವುದ
-ಮೈ ಬೆವರುವುದ
-ಕಫ ಉತ್ಪತ್ತಿ ಮಾಡುವ ಕೆಮ್ಮ
-ಹೊಟ್ಟೆ ಹಸಿವು ಇಲ್ಲದಂತಾಗಿ, ದೇಹಕ್ಕೆ ಹೆಚ್ಚಿನ ಆಯಾಸ ಉಂಟಾಗುವುದ
-ಕೆಮ್ಮಿದಾಗ ಎದೆ ನೋವು ಬರುವುದು

ನ್ಯೂಮೋನಿಯ ಸಮಸ್ಯೆಗೆ ಗುರಿಯಾದ ಕೆಲವು ವ್ಯಕ್ತಿಗಳಲ್ಲಿ ಅವರ ಶ್ವಾಸಕೋಶದಲ್ಲಿ ಹೆಚ್ಚಿನ ಪ್ರಮಾಣದ ಕೀವು ತುಂಬಿಕೊಂಡಂತೆ ಕಾಣುತ್ತದೆ. ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬ್ಯಾಕ್ಟೀರಿಯಾಗಳು ರಕ್ತದ ಹರಿವಿನಲ್ಲಿ ಸೋಂಕು ಉಂಟು ಮಾಡುವ ಕಾರಣ ಈ ಸಮಸ್ಯೆ ಎದುರಾಗುತ್ತದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಮತ್ತು ಹಿರಿಯ ವಯಸ್ಸಿನ ಗಂಡಸರು ಈ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಾರೆ.

ಯಾವುದೇ ಒಬ್ಬ ವ್ಯಕ್ತಿಯ ಶ್ವಾಸಕೋಶದಲ್ಲಿ ಎರಡು ಬಗೆಯ ಅಂಗಾಂಶಗಳ ಪದರವಿರುತ್ತದೆ. ಇವುಗಳನ್ನು ಒಟ್ಟಾರೆಯಾಗಿ ಪ್ಲ್ಯೂರ ಎಂದು ಕರೆಯುತ್ತಾರೆ.

ನ್ಯೂಮೋನಿಯಾ ಸಮಸ್ಯೆ ಜಾಸ್ತಿಯಾದ ಸಂದರ್ಭದಲ್ಲಿ ಅಥವಾ ಚಿಕಿತ್ಸೆ ನೀಡದೆ ಹಾಗೆ ಬಿಟ್ಟಂತಹ ಸಂದರ್ಭದಲ್ಲಿ ಶ್ವಾಸಕೋಶಗಳು ಊದಿಕೊಂಡು ತುಂಬಾ ನೋವು ಉಂಟು ಮಾಡುತ್ತವೆ.

ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡದೆ ಹೋದರೆ ಶ್ವಾಸಕೋಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಕೊಳ್ಳುತ್ತದೆ. ಮತ್ತು ಒಂದು ವೇಳೆ ಶ್ವಾಸಕೋಶದಲ್ಲಿ ತುಂಬಿರುವ ದ್ರವಾಂಶಕ್ಕೆ ಸೋಂಕು ಉಂಟಾದರೆ ಅದನ್ನು ಎಂಪಿಯೇಮ ಎಂದು ಕರೆಯುತ್ತಾರೆ. ಈ ಸಮಸ್ಯೆಯ ರೋಗ ಲಕ್ಷಣಗಳು ಈ ರೀತಿ ಇವೆ : -

- ಉಸಿರಾಡುವಾಗ ಕೆಮ್ಮುವಾಗ ಸೀನುವಾಗ ವಿಪರೀತ ಎದೆ ನೋವು ಬರುವುದ
-ಅತಿ ಹೆಚ್ಚು ಜ್ವರ ದಾಖಲಾಗುವುದ
-ಉಸಿರಾಡಲು ತುಂಬಾ ಕಷ್ಟವಾಗುವುದ
-ಭುಜ ಮತ್ತು ಬೆನ್ನಿನ ನೋವು
-ಒಂದೊಂದು ಬಗೆಯ ಸಮಸ್ಯೆಗೂ ಕೂಡ ಒಂದೊಂದು ರೀತಿಯಲ್ಲಿ ಚಿಕಿತ್ಸೆ ಇದೆ.

   ದ್ರಾವಿಡ್ ಕೊಡೋ ಟಾರ್ಚರ್ ನ್ನು ಗಂಗೂಲಿ ಬಳಿ ಹೇಳಿಕೊಂಡ ದ್ರಾವಿಡ್ ಮಗ | Oneindia Kannada
   English summary
   Poor vaccination and a lack of awareness are the leading causes of bacterial pneumonia in children under five years of age. While health experts are debating innovative vaccination strategies to protect children better, on Friday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion