ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿದಾಗ ಸಿಕ್ಕಿದ್ದೇನು ಗೊತ್ತಾ?

|
Google Oneindia Kannada News

ಬೆಂಗಳೂರು, ಜು. 10: ರಾಜಧಾನಿಯ ಪಾತಕ ಲೋಕವನ್ನು ಮುನ್ನಡೆಸುವ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ಕೈದಿಗಳಿಗೆ ಶಾಕ್ ನೀಡಿದ್ದಾರೆ. ದಾಳಿ ವೇಳೆ ಸಿಕ್ಕಿದ ವಸ್ತುಗಳನ್ನು ನೋಡಿ ಸಿಸಿಬಿ ಪೊಲೀಸರೂ ಗಾಬರಿಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾ ರೋಷವಾಗಿ ಗಾಂಜಾ ಹೊಡಯುತ್ತಿರುವ ಸಂಗತಿ ಹೊರ ಬಿದ್ದಿದೆ. ಮಾತ್ರವಲ್ಲ, ಕೈದಿಗಳ ಬಳಿ ನೂರಾರು ಚಾಕು ಹಾಗೂ ಮೊಬೈಲ್ , ಸಿಮ್ ಕಾರ್ಡ್ ಪತ್ತೆಯಾಗಿವೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿಯ ಹತ್ತಕ್ಕೂ ಹೆಚ್ಚು ತಂಡ ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳ ಬಂಧೀಖಾನೆಗಳ ಮೇಲೆ ಬೆಳಗಿನ ಜಾವ ಐದು ಗಂಟೆಗೆ ದಾಳಿ ನಡೆಸಿದ್ದಾರೆ. ಶ್ವಾನದಳದೊಂದಿಗೆ ಸಿಸಿಬಿ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ನಿದ್ದೆಯಲ್ಲಿದ್ದ ಕೈದಿಗಳು ಶಾಕ್ ಆಗಿದ್ದಾರೆ.

ಕೆಲವು ಕೊಠಡಿಗಳಲ್ಲಿ ಕೈದಿಗಳು ಹೊಂದಿದ್ದ ನೂರಾರು ಚಾಕು, ಕತ್ತರಿ ಮತ್ತಿತರ ವಸ್ತುಗಳು ಪತ್ತೆಯಾಗಿದ್ದು ಅವನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವರ ಕೋಣೆಗಳಲ್ಲಿ ಗಾಂಜಾ ಹಾಗೂ ಗಾಂಜಾ ಸೇವನೆ ಮಾಡುವ ಉಪಕರಣಗಳು ಪತ್ತೆಯಾಗಿವೆ. ಮೊಬೈಲ್ , ಸಿಮ್ ಕಾರ್ಡ್ ಜತೆಗೆ ಪೆನ್ ಡ್ರೈವ್ ಹಾಗೂ ಮೆಮೋರಿ ಕಾರ್ಡ್ ಗಳು ಪತ್ತೆಯಾಗಿವೆ.

Bengaluru Police raid Parappana Agrahara Central Prison, houses of several Rowdy sheeters across Bengaluru

ಬೆಂಗಳೂರಿನ ಭೂಗತ ಲೋಕದಲ್ಲಿ ನಡೆಯುವ ಕೊಲೆಗಳಿಗೆ ಸಂಚು ರೂಪಗೊಳ್ಳುವುದೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ. ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿಗಳ ಕಾಳಗ, ಹತ್ಯೆಗಳ ಹಿನ್ನೆಲೆಯಲ್ಲಿ ಅಪರಾಧ ಚಟುವಟಿಕೆ ಮೇಲೆ ನಿಗಾ ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ವಿಭಾಗದ ಪೊಲೀಸರು ಏಕ ಕಾಲಕ್ಕೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ರೌಡಿ ಮನೆಗಳ ಮೇಲೆ ದಾಳಿ ಮಾಡುವ ಮೊದಲೇ ಸಿಸಿಬಿ ಪೊಲೀಸರು ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ.

Bengaluru Police raid Parappana Agrahara Central Prison, houses of several Rowdy sheeters across Bengaluru

ಪರಪ್ಪನ ಅಗ್ರಹಾರ ಕಾರಾಗೃಹಲ್ಲಿ ಕೈದಿಗಳಿಗೆ ಸಿಮ್ ಹಾಗೂ ಮೊಬೈಲ್ ಪೂರೈಕೆಯಲ್ಲಿ ಜೈಲು ಸಿಬ್ಬಂದಿ ಕೂಡ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಹಾಗೂ ಮಾರಕಾಸ್ತ್ರಗಳು ಯಾವ ರೀತಿ ಪೂರೈಕೆ ಆದವು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ.

Bengaluru Police raid Parappana Agrahara Central Prison, houses of several Rowdy sheeters across Bengaluru

Recommended Video

ಪ್ರತಿಯೊಬ್ಬರಿಗೂ ಕೈಲಾದ ಸಹಾಯ ಮಾಡುತ್ತಿರುವ ಬಿಜೆಪಿ ಶಾಸಕ | Oneindia Kannada

ಕಾರಾಗೃಹ ಸಿಬ್ಬಂದಿ ಶಾಮೀಲಾಗಿದ್ದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೈಲಿನಲ್ಲಿ ಶೋಧ ಕಾರ್ಯ ಇನ್ನೂ ಮುಂದುವರೆದಿದೆ. ಖೈದಿಗಳು ಇಂಟರ್ ನೆಟ್ ಹಾಗೂ ಸ್ಮಾರ್ಟ್ ಪೋನ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸಿಕ್ಕಿರುವ ಸಿಮ್ ಕಾರ್ಡ್ ಗಳಿಂದ ಕರೆ ಮಾಡಿರುವ, ಅವರ ಜತೆ ಸಂಪರ್ಕಿಸಿರುವ ವ್ಯಕ್ತಿಗಳ ವಿವರಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
CCB Police raided Parappana Agrahara Central Prison and Found Ganja, mobile sim cards in prison know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X