ರೌಡಿ ಲಕ್ಷ್ಮಣ ಕೊಲೆಯ ಪ್ರಮುಖ ಆರೋಪಿ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು, ಮಾರ್ಚ್ 9: ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕ್ಯಾಟ್ ರಾಜಾ ಮೇಲೆ ಶನಿವಾರ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

ರೌಡಿ ಲಕ್ಷ್ಮಣನ ಕೊಲೆಯಾಗಿ ಎರಡು ದಿನ ಕಳೆದಿದೆ ಪೊಲೀಸರು ಅಪರಾಧಿಗಳ ಹುಡುಕಾಟದಲ್ಲಿರುವಾಗ ಕ್ಯಾಟ್ ರಾಜ ಪೊಲೀಸರ ಕಣ್ಣಿಗೆ ಬಿದ್ದಿದ್ದ, ಉಳಿದ ಆರೋಪಿಗಳನ್ನು ತೋರಿಸುವಂತೆ ಪೊಲೀಸರು ತಿಳಿಸಿದಾಗ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಷ್ಟೇ ಅಲ್ಲದೆ ಮುಖ್ಯ ಪೇದೆ ಚೌಡೇಗೌಡರ ಮೇಲೆ ಹಲ್ಲೆ ನಡೆಸಿದ್ದ. ಹಾಗಾಗಿ ಆತ್ಮರಕ್ಷಣೆಗಾಗಿ ಪ್ರಶಾಂತ್ ಎನ್ನುವವರು ಕ್ಯಾಟ್ ರಾಜನ ಎರಡೂ ಕಾಲಿಗೂ ಗುಂಡು ಹಾರಿಸಿದ್ದಾರೆ.

Police open fire on rowdy sheeter murder case culprit

ರೌಡಿ ಲಕ್ಷ್ಮಣನನ್ನು ಮಹಾಲಕ್ಷ್ಮೀ ಲೇಔಟ್‌ನ ಇಸ್ಕಾನ್ ದೇವಸ್ಥಾನದ ಬಳಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು.

ಲಕ್ಷ್ಮಣ ಇಸ್ಕಾನ್ ಬಳಿ ಇರುವ ಹೋಟೆಲ್ ಗೆ ಬರುವುದು ಮುಂಚಿತವಾಗಿಯೇ ದುಷ್ಕರ್ಮಿಗಳಿಗೆ ತಿಳಿಸಿದೆ. ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು ಲಕ್ಷ್ಮಣನನ್ನು ಕೊಲೆ ಮಾಡಿದ್ದರು. ಲಕ್ಷ್ಮಣ ಮೃತ ದೇಹದ ಬಳಿ ಆತ ಬುಕ್ ಮಾಡಿದ್ದ ಹೋಟೆಲ್‌ ರೂಮಿನ ಕೀ ಕೂಡ ದೊರೆತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+