PM Modi Road Show: ಬಾಲ್ಕಾನಿ, ಟೆರೆಸ್‌ಗಳಲ್ಲಿ ನಿಲ್ಲುವಂತಿಲ್ಲ, ವಾಹನ ಹೊರ ತೆಗೆಯುವಂತಿಲ್ಲ!

ಬೆಂಗಳೂರು, ಮೇ. 05: ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಪದೇ ಪದೇ ಬದಲಾಗುತ್ತಿರುವ ಮಾರ್ಗಗಳು, ಸಮಯ, ಸ್ಥಳಗಳ ಜೊತೆಗೆ ಜನರ ಅಸಮಾಧಾನವನ್ನು ಎದುರುಗೊಳ್ಳಬೇಕಿದೆ. ಈ ಹಿಂದೆಯೇ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಜನರ ಹಿಡಿ ಶಾಪ ಹಾಕಿದ್ದನ್ನು ಮರೆಯುವ ಮುನ್ನ ಮತ್ತೆ ಶನಿವಾರ, ಭಾನುವಾರ 36 ಕಿಮೀ ಉದ್ದದ ರೋಡ್‌ಶೋ ಆಯೋಜನೆ ಮಾಡಲಾಗಿದೆ.

ಇನ್ನು, ರೋಡ್‌ಶೋ ಇದೆ ಹೋಗಲಿ ಮನರಂಜನೆಗಾಗಿ ಅದನ್ನು ನೋಡುವ ಎನ್ನುವ ಮನಸ್ಸಿನಿಂದ ನಿಮ್ಮದೆ ಮನೆಯ ಟೆರೆಸ್ ಮೇಲೆ, ಬಾಲ್ಕಾನಿಯ ಬಳಿ ನಿಂತರೇ ಪೊಲೀಸರು ಗದರುವುದುದ ಗ್ಯಾರೆಂಟಿ. ಏಕೆ ಅಂತಿರಾ..? ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ಪೊಲೀಸರು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಟೆರೇಸ್ ಮತ್ತು ಬಾಲ್ಕನಿಗಳಿಂದ ರ‍್ಯಾಲಿಯನ್ನು ವೀಕ್ಷಿಸದಂತೆ ಪುಟ್ಟೇನಹಳ್ಳಿ ಪ್ರದೇಶದ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.

Police Issue Guidelines To Residents Not To View Modis Rally From Terraces And Balconies

ಈ ಸೂಚನೆಗಳ ಪ್ರಕಾರ ಕಟ್ಟಡಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಬೇಕಿದೆ. ಪ್ರಧಾನಿ ಮೋದಿ ರೋಡ್‌ಶೋ ನೋಡುವ ಆಸಕ್ತಿ ಇರುವ ವ್ಯಕ್ತಿಗಳನ್ನು ಗೊತ್ತುಪಡಿಸಿದ ವೀಕ್ಷಣಾ ಪ್ರದೇಶಗಳಿಗೆ ಹೋಗಿ ನೋಡಬೇಕು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ರೋಡ್‌ಶೋ ಮೇ 6 ಮತ್ತು ಮೇ 7 ರಂದು ಎರಡು ದಿನಗಳ ಕಾಲ ನಡೆಯಲಿದೆ.

ಮಾರ್ಗಸೂಚಿಗಳ ಪ್ರಕಾರ, ನಿವಾಸಿಗಳು ಟೆರೇಸ್ ಅಥವಾ ಬಾಲ್ಕನಿಗಳಲ್ಲಿ ನಿಲ್ಲುವುದನ್ನು ನಿಷೇಧಿಸಲಾಗಿದೆ. ರೋಡ್‌ಶೋ ನಡೆಯುವ ಕಟ್ಟಡದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ಮುಚ್ಚಬೇಕು. ರೋಡ್ ಶೋ ಮುಗಿಯುವವರೆಗೂ ವಾಹನಗಳನ್ನು ಹೊರಗೆ ತೆಗೆಯುವಂತಿಲ್ಲ. ಅಪರಿಚಿತರಿಗೆ ಕಟ್ಟಡದೊಳಗೆ ಪ್ರವೇಶ ನಿರ್ಬಂಧಿಸಬೇಕು. ಗೊತ್ತುಪಡಿಸಿದ ಸಿಬ್ಬಂದಿಗೆ ಮಾತ್ರ ಪ್ರವೇಶವನ್ನು ನೀಡಬೇಕು. ಸುರಕ್ಷತೆ ಉದ್ದೇಶಗಳಿಗಾಗಿ ಪೊಲೀಸರು ನಿಕಟವಾಗಿ ಸ್ಥಳಗಳ ಮೇಲ್ವಿಚಾರಣೆ ಮಾಡುತ್ತಾರೆ ಎನ್ನಲಾಗಿದೆ.

Police Issue Guidelines To Residents Not To View Modis Rally From Terraces And Balconies

ಕಾರ್ಯಕ್ರಮದ ಸಮಯದಲ್ಲಿ ಒದಗಿಸಲಾದ ಮಾರ್ಗಸೂಚಿಗಳು ಮತ್ತು ಯಾವುದೇ ಹೆಚ್ಚಿನ ಸೂಚನೆಗಳನ್ನು ಅನುಸರಿಸಲು ನಿವಾಸಿಗಳ ಸಹಕಾರವನ್ನು ಪೊಲೀಸರು ಬಯಸಿದ್ದಾರೆ. ಈ ಸೂಚನೆಗಳು ಮಾರ್ಗಸೂಚಿಗಳೇ ಹೊರತು ನಿಷೇಧಾಜ್ಞೆಯಲ್ಲ ಎಂದು ಪುಟ್ಟೇನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಮೋದಿಯವರ ರೋಡ್‌ಶೋ ಮೇ 6, ಶನಿವಾರ ಬೆಳಗ್ಗೆ 10 ಗಂಟೆಗೆ ಆರ್‌ಬಿಐ ಮೈದಾನದಿಂದ ಪ್ರಾರಂಭವಾಗಲಿದ್ದು, ಬೆಂಗಳೂರಿನ ಜಯನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಗೋವಿಂದರಾಜನಗರ ಮತ್ತು ರಾಜಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಲಿದ್ದು, ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಟ್ಯಾಂಕ್ ಬಳಿ ಮುಕ್ತಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+