12ರ ಪೋರನ ಕನಸು ನನಸಾಗಿಸಿದ್ದ ಪೊಲೀಸ್ ಅಧಿಕಾರಿ ವಿಧಿವಶ

ಬೆಂಗಳೂರು, ಮಾರ್ಚ್ 05 : 12ರ ಪೋರನನ್ನು ಪೊಲೀಸ್ ಅಧಿಕಾರಿಯಾಗಿ ಮಾಡಿದ್ದ ಸಬ್ ಇನ್ಸ್‌ಪೆಕ್ಟರ್ ಟಿ.ಡಿ.ರಾಜು ವಿಧಿವಶರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಎ.ಟಿ.ರಾಮಸ್ವಾಮಿ ವರದಿ ಅನುಷ್ಠಾನ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಎ.ಟಿ.ರಾಜು ಅವರು ಸೋಮವಾರ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ರಾಜು ಅವರ ತಲೆಗೆ ಗಂಭೀರವಾದ ಗಾಯವಾಗಿತ್ತು.

ಫೆ.26ರಂದು ಟಿ.ಡಿ.ರಾಜು ಅವರು ಬೆಳಗ್ಗೆ ಕ್ಲಬ್‌ಗೆ ಹೋಗಿದ್ದರು. 7.45ರ ಸುಮಾರಿಗೆ ಮನೆಗೆ ಬೈಕ್‌ನಲ್ಲಿ ವಾಪಸ್ ಆಗುವಾಗ ಸಮೃದ್ಧಿ ಲೇಔಟ್‌ ಬಳಿ ಅವರ ಬೈಕ್‌ಗೆ ಶಾಲಾ ಬಸ್ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಸಾಗರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Police inspector TD Raju no more

ಪೋರನ ಕನಸು ನನಸಾಗಿದ್ದರು : ಟಿ.ಡಿ.ರಾಜು ಅವರು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗ 12ರ ಪೋರನನ್ನು ಪೊಲೀಸ್ ಅಧಿಕಾರಿಯಾಗಿ ಮಾಡಿ, ಆತನ ಕನಸನ್ನು ಈಡೇರಿಸಿದ್ದರು.

ಮಾರಾಣಾಂತಿಕ ರೋಗದಿಂದ ಬಳಲುತ್ತಿದ್ದ 12 ವರ್ಷದ ಬಾಲಕ ಶಶಾಂಕ್‌ಗೆ ಪೊಲೀಸ್ ಅಧಿಕಾರಿಯಾಗುವ ಆಸೆ ಇತ್ತು. ಆಗ ವಿ.ವಿ.ಪುರಂ ಠಾಣೆಗೆ ಬಾಲಕನನ್ನು ಕರೆದುಕೊಂಡು ಬಂದು ತಮ್ಮ ಖುರ್ಚಿಯ ಮೇಲೆ ಕೂರಿಸಿ, ಸಕಲ ಗೌರವನ್ನು ಟಿ.ಡಿ.ರಾಜು ನೀಡಿದ್ದರು.

ಟಿ.ಡಿ.ರಾಜು ಅವರ ಈ ಕಾರ್ಯಕ್ಕೆ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ತಿಂಗಳು ವಿಶೇಷ ಕಾರ್ಯಪಡೆಗೆ ವರ್ಗಾವಣೆಯಾಗಿದ್ದ ಟಿ.ಡಿ.ರಾಜು ರಸ್ತೆ ಅಪಘಾತದಲ್ಲಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+