ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಕ್ಷಕಿಯ ಜೀವ ಉಳಿಸಿದ ಪೊಲೀಸ್ ಇನ್‌ಸ್ಪೆಕ್ಟರ್
ಬೆಂಗಳೂರು, ಮಾರ್ಚ್ 6: ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಕ್ಷಕಿಯ ಜೀವ ಉಳಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಕ್ಷುಲ್ಲಕ ವಿಚಾರಕ್ಕೆ ಶಿಕ್ಷಕಿ ಮೇಲೆ ಪರಿಚಿತ ವ್ಯಕ್ತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಘಟನಾ ಸ್ಥಳದ ಸಮೀಪದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಶಿಕ್ಷಕಿಯನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದಾರೆ.
ಬನಶಂಕರಿ ಮೂರನೇ ಹಂತದ ದ್ವಾರಕಾನಗರದ ತನುಜಾ (40) ಹಲ್ಲೆಗೊಳಗಾದ ಶಿಕ್ಷಕಿ. ಆಕೆ ಮೇಲೆ ಹಲ್ಲೆ ನಡೆಸಿದ ಹೊಸಕೆರೆಹಳ್ಳಿಯ ಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಶಿಕ್ಷಕಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ರಕ್ತದಾನ ಮಾಡಿ ಜೀವ ಉಳಿಸಿದ ಗಿರಿನಗರ ಸಿದ್ದಲಿಂಗಯ್ಯ ಕರ್ತವ್ಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮನೆ ಬ್ರೋಕರ್ ಶೇಖರ್ ತನ್ನಿಬ್ಬರು ಮಕ್ಕಳನ್ನು ಮನೆ ಪಾಠಕ್ಕೆ ಕಳುಹಿಸುತ್ತಿದ್ದ, ಶಿಕ್ಷಕಿಯ ವೈಯಕ್ತಿಕ ವಿಚಾರಕ್ಕೆ ದ್ವೇಷಕಾರಿದ ಶೇಖರ್ ಆಕೆ ಮೇಲೆ ಪ್ರತೀಕಾರಕ್ಕೆ ಮುಂದಾಗಿದ್ದ.
ಗುರುವಾರ ಸಂಜೆ 4.30ರ ಸುಮಾರಿಗೆ ಆಕೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುವ ವೇಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದ.












Click it and Unblock the Notifications