ಗಾಂಜಾ ಡೀಲಿಂಗ್ ಸ್ಪಾಟ್‌ಗೆ ಪೊಲೀಸ್ ಆಯುಕ್ತರ ದಿಢೀರ್ ಭೇಟಿ

ಬೆಂಗಳೂರು, ಜು. 29: ಗಾಂಜಾ ಡೀಲಿಂಗ್ ಸ್ಪಾಟ್ ಎಂದೇ ಕುಖ್ಯಾತಿ ಪಡೆದಿರುವ ಅತಿ ಹೆಚ್ಚು ಅಪರಾಧಗಳು ವರದಿಯಾಗುವ ಉಲ್ಲಾಳ ಉಪ ನಗರಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ದಿಢೀರ್ ಭೇಟಿ ನೀಡಿ ಅಲ್ಲಿನ ಜನರ ಅಹವಾಲು ಸ್ವೀಕರಿಸಿದರು.

ಜನ ಸಾಮಾನ್ಯರು ನಿರ್ಭೀತಿಯಿಂದ ಇರಬೇಕು. ಇದಕ್ಕಾಗಿ ಹಗಲಿರುಳು ಸೇವೆ ಬೆಂಗಳೂರು ಪೊಲೀಸರಿಂದ ಸಿಗಲಿದೆ ಎಂದು ಭರವಸೆ ನೀಡಿದರು. ಇಲ್ಲಿ ನಡೆಯುತ್ತಿರುವ ಗಾಂಜಾ ಮಾರಾಟ ಚಟುವಟಿಕೆ, ಅಪರಾಧಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಅನಂತರ ಸ್ಥಳೀಯರ ಮನವಿ ಮೇರೆಗೆ ಉಲ್ಲಾಳ ಉಪ ನಗರದಲ್ಲಿ ಹೊಸ ಔಟ್ ಪೋಸ್ಟ್ ಪೊಲೀಸ್ ಠಾಣೆಯನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದರು.

ಇದಕ್ಕಾಗಿ ದಿನದ 24 ತಾಸು ಪೊಲೀಸರು ಕಾರ್ಯ ನಿರ್ವಹಿಸಲು ಪಿಎಸ್ಐ ಸೇರಿದಂತೆ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ ಅವರಿಗೆ ನಿರ್ದೇಶನ ನೀಡಿದ್ದಾರೆ.

Police commissioner Kamala Pant surprise visit to the Bengaluru crime hub

ಕೆಲವೇ ದಿನಗಳಲ್ಲಿ ಉಲ್ಲಾಳ ಉಪ ನಗರಕ್ಕೆ ಹೊರ ಪೊಲೀಸ್ ಠಾಣೆ ಮಂಜೂರು ಮಾಡುವದಾಗಿ ಇದೇ ವೇಳೆ ಭರವಸೆ ನೀಡಿದರು.

ಸಿಬ್ಬಂದಿಗೆ ಸಮಯಕ್ಕೆ ತಕ್ಕ ರಜೆ ಕೊಡಿ: ಬಳಿಕ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಗೆ ರಜೆ ಸಿಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಕರ್ತವ್ಯ ನಿಯೋಜನೆ, ಆರೋಗ್ಯ, ರಜೆ ಸೌಲಭ್ಯ ಕುರಿತು ಪೊಲೀಸರಿಂದ ಮಾಹಿತಿ ಪಡೆದುಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+