ಕುಡಿದು ಚಾಲನೆ ಮಾಡುತ್ತಿದ್ದ ಶಾಲಾ ಬಸ್ ಡ್ರೈವರ್ ಬಂಧನ
ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಕುಡಿದು ಶಾಲಾ ಬಸ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ಸಿನಲ್ಲಿ ಒಟ್ಟು 32 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು.
ಚಾಲಕನನ್ನು ಬಂಧಿಸಿದ ಪೊಲೀಸರು ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಶಾಲೆ ತಲುಪಿಸಿದ್ದಾರೆ.

ಇನ್ನು ಬೆಂಗಳೂರಿನ ಮೂರು ಪ್ರತ್ಯೇಕ ಠಾಣೆಗಳ ಪೊಲೀಸರು ಕಳ್ಳರ ಜಾಲ ಭೇದಿಸಿ 18 ಚಿನ್ನದ ಸರ, 14 ಕ್ಯಾಮೆರಾ ಮತ್ತು 60 ಲ್ಯಾಪ್ ಟಾಪ್ ಹಾಗೂ 75 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಮೇಲೆ 51 ಕಳ್ಳತನ ಮತ್ತು ವಂಚನೆ ಪ್ರಕರಣಗಳಿದ್ದವು.

ಆರ್. ಟಿ ನಗರ ಪೊಲೀಸರ ಬಲೆಗೆ ಲ್ಯಾಪ್ ಟಾಪ್ ಕಳ್ಳರು ಸಿಕ್ಕಿದ್ದು 60 ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ. ಇನ್ನು ಜಾಲಹಳ್ಳಿ ಪೊಲೀಸರು ಕಳ್ಳರಿಂದ 18 ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ. ಮಲ್ಲೇಶ್ವರಂ ಠಾಣೆ ಪೊಲೀಸರು 14 ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದಾರೆ.













Click it and Unblock the Notifications