ಗೆಳತಿಯನ್ನೇ ಯಾಮಾರಿಸಿ ಹತ್ಯೆಗೈದು ಚಿನ್ನಾಭರಣ ದೋಚಿದ್ದ ವ್ಯಕ್ತಿ ಸೆರೆ

ಬೆಂಗಳೂರು, ನವೆಂಬರ್ 17: ಮದುವೆಯಾಗುವುದಾಗಿ ಯಾಮಾರಿಸಿ ಕೊನೆಗೆ ಆಕೆಯನ್ನು ಹತ್ಯೆಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ಜೀವನ ನೀಡುವುದಾಗಿ ನಂಬಿಸಿ ನಂತರ ಆಕೆಯನ್ನು ಕೊಲೆ ಮಾಡಿ ಆಭರಣಗಳನ್ನು ಲೂಟಿ ಮಾಡಿದ್ದ. ಅ. 25ರಂದು ಕೊಲೆ ನಡೆದಿದ್ದು, ಅ.26ರಂದು ಬೆಳಕಿಗೆ ಬಂದಿತ್ತು. ಗೊರಗುಂಟೆ ಪಾಳ್ಯದ ನಾಲ್ಕನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ರುಕ್ಮಿಣಮ್ಮನನ್ನು ರಮೇಶ್ ಕೊಲೆ ಮಾಡಿದ್ದ.

ರುಕ್ಮಿಣಮ್ಮ ಮಾಡುತ್ತಿದ್ದ ಸಿದ್ಧ ಉಡುಪು ಕಾರ್ಖಾನೆಯಲ್ಲೇ ರಮೇಶ್ ಕೆಲಸ ಮಾಡುತ್ತಿದ್ದ, ಪರಿಚಯ ಆತ್ಮೀಯತೆಗೆ ತಿರುಗಿದಾಗ ಮದುವೆ ಮಾಡಿಕೊಂಡು ಬಾಳು ಕೊಡುವುದಾಗಿ ತಿಳಿಸಿದ್ದ. ಆತನಿಗೆ ಮೊದಲೇ ಮದುವೆಯಾಗಿ ಮಕ್ಕಳಿದ್ದರೂ ಕೂಡ ಸುಳ್ಳು ನಾಟಕವಾಡಿ ಪುಸಲಾಯಿಸಿ ಆಕೆ ನಂಬುವಂತೆ ಮಾಡಿ ಒಡವೆಯನ್ನು ಪಡೆದುಕೊಂಡಿದ್ದ ಬಳಿ ಅಲ್ಲಿಗೆ ಬರುವುದನ್ನೇ ಆತ ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Police arrested a man who killed his girlfriend

ಈ ಕಾರಣದಿಂದ ತನ್ನಿಂದ ಪಡೆದಿದ್ದ ಹಣ ಮತ್ತು ಒಡವೆಗಳನ್ನು ರುಕ್ಮಿಣಿ ಕೇಳತೊಡಗಿದ್ದಳು, ಇದೇ ವಿಚಾರಕ್ಕೆ ಅವರಿಬ್ಬರು ನಡುವೆ ಜಗಳ ನಡೆದು ಸಿಟ್ಟಿನಲ್ಲಿ ಆತನ ಕೊಲೆ ಮಾಡಿದ್ದ, ಬಳಿಕ ಮೊಬೈಲ್ ಬಳಕೆಯನ್ನೂ ಬಿಟ್ಟು ತಲೆ ಮರೆಸಿಕೊಂಡಿದ್ದ, ಆತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+