ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂ ಅಳವಡಿಸಿದ್ದ ಬ್ಯಾಟರಿ‌ ಕದಿಯುತ್ತಿದ್ದ 4 ಬಂಧನ - ಮಲ್ಲೇಶ್ವರ ಪೊಲೀಸರ ಕಾರ್ಯಾಚರಣೆ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಬೆಂಗಳೂರಿನಲ್ಲಿ ಕಳ್ಳರು ಯಾವ ವಸ್ತುವನ್ನಾದರೂ ಕದ್ದರೇ ಲಾಭವಾಗುತ್ತೆ ಎಂದು ತಿಳಿದರೇ ಸಾಕು ಆ ವಸ್ತುವನ್ನು ಕದಿಯುವುದರಲ್ಲಿ ಸ್ಕೆಚ್ ಹಾಕಿ ಪ್ಲಾನ್ ಮಾಡಿ ಎಗರಿಸೋಕೆ ಅಣಿಯಾಗಿ ಯಶಸ್ವಿಯು ಆಗಿಬಿಡುತ್ತಾರೆ. ಕಾರಿನ ಬ್ಯಾಟರಿಗಳಾಯ್ತು, ಟ್ರಾಫಿಕ್ ಸಿಗ್ನಲ್ ಬ್ಯಾಟರಿಗಳನ್ನು ಕದ್ದಿದ್ದಾಯ್ತು. ಇದೀಗ ಬೆಸ್ಕಾಂ ಅಳವಡಿಸಿದ್ದ ಬ್ಯಾಟರಿಗಳನ್ನು ಕದಿಯುತ್ತಿವರನ್ನು ಬಂಧಿಸಲಾಗಿದೆ.

ಕಾರು, ಬೈಕ್, ಸೇರಿದಂತೆ ವಾಹನಗಳ ಬ್ಯಾಟರಿ ಕಳುವು ಮಾಡುತ್ತಿದ್ದ ಕಳ್ಳರು. ಇನ್ನೊಂದಷ್ಟು ದಿನ ಟ್ರಾಫಿಕ್‌ ಸಿಗ್ನಲ್‌ಗಳ ಬ್ಯಾಟರಿ ಕದಿಯುತ್ತಿದ್ದರು. ಇದೀಗ ವರಸೆ ಬದಲಿಸಿ ಖದೀಮರು ಬೆಸ್ಕಾಂ ಅಳವಡಿಸಿದ್ದ ಯುಪಿಎಸ್ ಬ್ಯಾಟರಿ‌ಗಳನ್ನು ರಾತ್ರೋ ರಾತ್ರಿ ಕಳ್ಳತನ ಮಾಡುತ್ತಿದ್ದ ನಾಲ್ಕು ಮಂದಿ ಚಾಲಾಕಿಗಳನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ ಆಟಕ್ಕೆ ಬಂದು ಚಿನ್ನ ಎಗರಿಸಿದ ಕಳ್ಳರು ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ ಆಟಕ್ಕೆ ಬಂದು ಚಿನ್ನ ಎಗರಿಸಿದ ಕಳ್ಳರು

ಬೆಸ್ಕಾಂ ಸಹಾಯಕ ಅಭಿಯಂತರ ಮಂಜುನಾಥ್ ನೀಡಿದ ದೂರಿನ‌ ಮೇರೆಗೆ ಮಲ್ಲೇಶ್ವರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ದೂರಿನ ಅನ್ವಯ ಕಟ್ಟಿಗೇನಹಳ್ಳಿ ನಿವಾಸಿಗಳಾದ ಚಿನ್ನಿದೊರೈ, ರಮೇಶ್, ವೇಣುಗೋಪಾಲ್ ಹಾಗೂ ವಸಂತ್ ಬಂಧಿತ ಆರೋಪಿಗಳಾಗಿದ್ದು 5 ಲಕ್ಷ ಮೌಲ್ಯದ 100 ಬ್ಯಾಟರಿ ಹಾಗೂ ಎರಡು ಲಗೇಜ್ ಆಟೊ ಸೇರಿದಂತೆ ನಾಲ್ಕು ಆಟೊ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಪರಾರಿಯಾಗಿದ್ದಾರೆ.

ರಾತ್ರಿಯಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರು

ರಾತ್ರಿಯಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರು

ಚಿನ್ನಿದೊರೈ ಬಂಧಿತ ಪ್ರಮುಖ ಆರೋಪಿ ಈ ಹಿಂದೆ ಲಗೇಜ್ ಆಟೊದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ. ಜೊತೆಗೆ ಗುಜರಿ ಅಂಗಡಿ ತೆರೆದಿದ್ದ. ಬಂಧಿತ ಆರೋಪಿಗಳೆಲ್ಲರೂ ಸಂಬಂಧಿಕರಾಗಿದ್ದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಲು ವಾಮಮಾರ್ಗ ಹಿಡಿದ ಚಿನ್ನಿದೊರೈ ರಸ್ತೆ ಬದಿಗಳಲ್ಲಿ ಟ್ಯಾನ್ಸ್ ಫಾರ್ಮರ್‌ಗಳ ಕಾರ್ಯದೊತ್ತಡ ತಗ್ಗಿಸುವ ಬ್ಯಾಟರಿಗಳನ್ನು ಕಳ್ಳತನ ಮಾಡಿ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

10 ಕೆ.ಜಿಯಿರುವ ಬ್ಯಾಟರಿಗಳನ್ನೇ ಕಳ್ಳತನ

10 ಕೆ.ಜಿಯಿರುವ ಬ್ಯಾಟರಿಗಳನ್ನೇ ಕಳ್ಳತನ

ಚಿನ್ನಿದೊರೈ ತನ್ನ ಸಂಬಂಧಿಕರಿಗೆ ಹಣದಾಸೆಯನ್ನು ತೋರಿಸಿದ್ದ. ತನ್ನದೇ ಸಂಬಂಧಿಕರಿಗೆ ರಮೇಶ್, ವೇಣುಗೋಪಾಲ್ ಹಾಗೂ ವಸಂತ ಹಣದಾಸೆ ತೋರಿಸಿ ಸುಮಾರು 10 ಕೆ.ಜಿಯಿರುವ ಬ್ಯಾಟರಿಗಳನ್ನೇ ಕಳ್ಳತನವನ್ನು ಮಾಡಿಸುತ್ತಿದ್ದ. ಸಣ್ಣ ಪುಟ್ಟ ಕಾಯಕ ಮಾಡುತ್ತಿದ್ದ ಆರೋಪಿಗಳಿಗೆ ಪುಸಲಾಯಿಸುತ್ತಿದ್ದ ಚಿನ್ನಿದೊರೈ ಕಳ್ಳತನ ಮಾಡಲು ಸಂಚು ರೂಪಿಸಿದ್ದ.

11 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ

11 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ

ಮಧ್ಯರಾತ್ರಿ ಆಟೊದಲ್ಲಿ ತೆರಳಿ ಮಲ್ಲೇಶ್ವರ, ವೈಯಾಲಿಕಾವಲ್, ಗಿರಿನಗರ, ಸದಾಶಿವನಗರ ಸೇರಿದಂತೆ ನಗರದ 11 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು ಎಂದು ತಿಳಿದು ಬಂದಿದೆ.ಚಿನ್ನಿದೊರೈ, ರಮೇಶ್, ವೇಣುಗೋಪಾಲ್ ಹಾಗೂ ವಸಂತ್ ಬಂಧಿತ ಆರೋಪಿಗಳಾಗಿದ್ದು 5 ಲಕ್ಷ ಮೌಲ್ಯದ 100 ಬ್ಯಾಟರಿ ಹಾಗೂ ಎರಡು ಲಗೇಜ್ ಆಟೋ ಸೇರಿದಂತೆ ನಾಲ್ಕು ಆಟೊ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಪರಾರಿಯಾಗಿದ್ದಾರೆ.

ಪೊಲೀಸರ ಕಾರ್ಯಕ್ಕೆ ಉತ್ತರ ವಿಭಾಗ ಡಿಸಿಪಿ ಮೆಚ್ಚುಗೆ

ಪೊಲೀಸರ ಕಾರ್ಯಕ್ಕೆ ಉತ್ತರ ವಿಭಾಗ ಡಿಸಿಪಿ ಮೆಚ್ಚುಗೆ

ಮಲ್ಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಠಾಣೆಯ ಇನ್ ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸತತ 15 ದಿನಗಳಿಂದ ಕಾರ್ಯಾಚರಣೆ ಆರೋಪಿಗಳನ್ನ ಬಂಧಿಸುವಲ್ಲಿ‌ ಯಶಸ್ವಿಯಾಗಿರುವುದಾಗಿದ್ದಾರೆ. "ಮಲ್ಲೇಶ್ವರ, ವೈಯಾಲಿಕಾವಲ್, ಗಿರಿನಗರ, ಸದಾಶಿವನಗರ ಸೇರಿದಂತೆ ನಗರದ 11 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು ಎಂದು ತಿಳಿದು ಬಂದಿದೆ,ಇನ್ ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸತತ 15 ದಿನಗಳಿಂದ ಕಾರ್ಯಾಚರಣೆ ಆರೋಪಿಗಳನ್ನ ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ ನಮ್ಮ ಪೊಲೀಸರ ಕೆಲಸಕ್ಕೆ ಶ್ಲಾಘಿಸುತ್ತೇನೆ" ಎಂದು ನಗರ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

English summary
Thieves in Bengaluru know that what they want to steal is enough to make a profit. Car batteries, traffic signal batteries were stolen. Now the people who stole the batteries installed by BESCOM have been arrested, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X