• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಹಣೆಗೆ ಲೇಸರ್ ಬೀಮ್ ಬಿಟ್ಟಿದ್ದು ಆತಂಕಕಾರಿ : ಸಿದ್ದರಾಮಯ್ಯ

|
   Lok Sabha Elections 2019 : ರಾಹುಲ್ ಗಾಂಧಿ ಹತ್ಯೆ ಸಂಚಿನ ಬಗ್ಗೆ ಕಾಂಗ್ರೆಸ್ ಕಳವಳ

   ಬೆಂಗಳೂರು, ಏಪ್ರಿಲ್ 11 : "ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಅವರಿಗೆ ಲೇಸರ್ ನಿಂದ ಗುರಿಯಿಡಲಾಗಿತ್ತು ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಆ ಲೈಟ್ ಸ್ನೈಪರ್ ಗನ್ ನಿಂದ ಇದ್ದರೂ ಇರಬಹುದು" ಎಂದು ಸಿದ್ದರಾಮಯ್ಯ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಇಂಥ ಕ್ಲಿಷ್ಕರ ಸಮಯದಲ್ಲಿ, ನಾವು ಎಲ್ಲರೂ ಪಕ್ಷಭೇದ ಮರೆತು, ಭಾರತೀಯನೊಬ್ಬನಿಗೆ ಶತ್ರುಗಳಿಂದ ಪ್ರಾಣಾಪಾಯದ ಬೆದರಿಕೆ ಇದ್ದಾಗ ಇಡೀ ದೇಶವೇ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶಕ್ಕೆ ಕರೆ ನೀಡಿದ್ದಾರೆ.

   ಸ್ನೈಪರ್ ಗನ್ ಲೇಸರ್ ಅಲ್ಲ, ಕಾಂಗ್ರೆಸ್ ಫೋಟೊಗ್ರಾಫರ್ ಮೊಬೈಲ್ ಬೆಳಕು!

   ಕೂಡಲೆ ಕೇಂದ್ರ ಗೃಹ ಸಚಿವಾಲಯ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿರುವುದು ಅನವಶ್ಯಕ ಎಂಬಂತಾಗಿದೆ. ಏಕೆಂದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಲಹಣೆಯ ಮೇಲೆ ಕಂಡುಬಂದಿದ್ದ ಹಸಿರು ಬಣ್ಣದ ಬೆಳಕಿನ ಚುಕ್ಕೆ ಸ್ನೈಪರ್ ಗನ್ನೂ ಅಲ್ಲ, ಮಣ್ಣುಮಸಿಯೂ ಅಲ್ಲ, ಅದು ಎಐಸಿಸಿ ಫೋಟೋಗ್ರಾಫರ್ ನ ಮೊಬೈಲ್ ಬೆಳಕು ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

   ರಾಹುಲ್ ಅವರು ಅಮೇಥಿಯಲ್ಲಿ ಭರ್ಜರಿ ರೋಡ್ ಶೋ ಮೂಲಕ ನಾಮಪತ್ರವನ್ನು ಸಲ್ಲಿಸಿದ ನಂತರ ಬುಧವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಅವರ ಹಣೆಯ ಬಲಭಾಗದಲ್ಲಿ ಹಸಿರು ಬಣ್ಣದ ಬೆಳಕು ಮೂರ್ನಾಲ್ಕು ಬಾರಿ ಕಂಡುಬಂದಿತ್ತು.

   ಇದೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಜೈರಾಮ್ ರಮೇಶ್ ಅವರು ಜಂಟಿಯಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸುದೀರ್ಘ ಪತ್ರ ಬರೆದು, ಉತ್ತರ ಪ್ರದೇಶದ ಸರಕಾರದ ಮೇಲೆ ಭದ್ರತಾ ಚ್ಯುತಿಯ ಆರೋಪ ಹೊರಿಸಿತ್ತು.

   ಅಮೇಥಿಯಲ್ಲಿ ರಾಹುಲ್ ಗಾಂಧಿ ಹತ್ಯೆಗೆ ಸಂಚು?: ಗೃಹ ಸಚಿವಾಲಯಕ್ಕೆ ಕಾಂಗ್ರೆಸ್ ಪತ್ರ

   ಅಲ್ಲದೆ, ಅವರನ್ನು ಸ್ನೈಪರ್ ಗನ್ ಅನ್ನು ಬಳಸಿ ಹತ್ಯೆ ಮಾಡಲು ಯತ್ನಿಸಲಾಗುತ್ತಿದೆ. ಈಗಾಗಲೆ ಕಾಂಗ್ರೆಸ್ ನ ಇಬ್ಬರು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಭದ್ರತಾ ಲೋಪದಿಂದಾಗಿಯೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಪರಿಸ್ಥಿತಿ ರಾಹುಲ್ ಅವರಿಗೂ ಬರಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

   English summary
   Pointing laser on Rahul Gandhi was distressing, says former chief minister of Karnataka Siddaramaiah. At this time entire nation has to be united against such threat, Siddu said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X