Get Updates
Get notified of breaking news, exclusive insights, and must-see stories!

ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣ: ದೌರ್ಜನ್ಯಕ್ಕೊಳಗಾದ ಮಕ್ಕಳು ಬೆಂಗಳೂರಿಗೆ ಬಂದಿದ್ದೇಕೆ?

ಬೆಂಗಳೂರು, ಆಗಸ್ಟ್ 27: ಚಿತ್ರದುರ್ಗ ಮುರುಘ ಶರಣರ ವಿರುದ್ದದ ಪೋಕ್ಸೋ ಪ್ರಕರಣ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಕ್ಕಳು ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ದೂರು ನೀಡಲು ವಿಫಲ ಯತ್ನವನ್ನು ನಡೆಸಿದ್ದರು ಎಂದು ತಿಳಿದು ಬಂದಿದೆ. ಹಾಸ್ಟಲ್ ವಾರ್ಡನ್‌ನಿಂದ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವುದು ಅನುಮಾನವೆಂದು ಮನನೊಂದಿದ್ದರು ಎಂಬುದು ತಿಳಿದು ಬಂದಿದೆ.

ಜುಲೈ 24ರಂದು ಬೆಂಗಳೂರಿಗೆ ಬಂದಿದ್ದ ಹೆಣ್ಣು ಮಕ್ಕಳು
ಮುರುಘಾಶರಣರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮತ್ತೊಂದು ಮಹತ್ವದ ವಿಚಾರ ತಿಳಿದ ಬಂದಿದೆ. ಜುಲೈ 24ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೆಣ್ಣುಮಕ್ಕಳು ಬಂದಿದ್ದರು. ರಾತ್ರಿ 11.30ರ ವೇಳೆ‌ಗೆ ಮೆಜೆಸ್ಟಿಕ್‌ಗೆ ಬಂದಿಳಿದಿದ್ದರು. ಆ ಆಟೋ ಡ್ರೈವರ್ ಸಂದರ್ಭದಲ್ಲಿ ಲಗ್ಗೆರೆಗೆ ಕರೆದೊಯ್ದಿದ್ದರು. ಯುವತಿಯ ದೊಡ್ಡಮ್ಮ ಮನೆಗೆ ಬಿಟ್ಟು ಕೊಳ್ಳದೇ ಹೊರಗೆ ಹಾಕಿದ್ದರು.
ಆಟೋ ಡ್ರೈವರ್ ಮತ್ತೆ ಮೆಜೆಸ್ಟಿಕ್‌ಗೆ ಕರೆತಂದು ಪೊಲೀಸ್ ಕಂಟ್ರೋಲ್‌ ರೂಂಗೆ ಕರೆ ಮಾಡಿದ್ದ. ಕೂಡಲೆ ಸ್ಥಳಕ್ಕೆ ಬಂದ ಕಾಟನ್‌ಪೇಟೆ ಪೊಲೀಸರು ಮಕ್ಕಳನ್ನು ಠಾಣೆಗೆ ತಂದಿದ್ದರು. ತಾವು ಮುರುಘಾಮಠದ ಅನಾಥಲಯದಲ್ಲಿದ್ದು ವಾರ್ಡನ್ ಕಿರುಕುಳದಿಂದ ಹೊರಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಮಠದ ಆಡಳಿತಾಧಿಕಾರಿ ಸಂಪರ್ಕ ಮಾಡಿದ್ದ ಪೊಲೀಸರು
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಕ್ಕಳ ವಿವರವನ್ನು ಪಡೆದ ಪೊಲೀಸರು ಕೂಡಲೇ ಮಠ ಸಂಪರ್ಕಿಸಿದ್ದರು. ಮಠದ ಆಡಳಿತಾಧಿಕಾರಿ ಬಸವರಾಜನ್ ಎಬುವವರನ್ನು ಸಂಪರ್ಕಿಸಿದ್ದರು. ಬಸವರಾಜನ್ ತಾವು ಬರುವುದಾಗಿ ತಿಳಿಸಿದಾಗ ಪೊಲೀಸರು ಮಕ್ಕಳನ್ನು ಪುರುಷರ ಜೊತೆ ಕಳುಹಿಸುವುದಿಲ್ಲ ಎಂದು ಹೇಳಿದರು. ಆಗ ಬಸವರಾಜನ್ ಪತ್ನಿ ಸೌಭಾಗ್ಯ ಅವರನ್ನೂ ಠಾಣೆಗೆ ಕರೆದುಕೊಂಡು ಬಂದಿದ್ದರು.

POCSO case against Murugha Seer: Why did the abused children come to Bengaluru?

ಬೆಳಗಿನ ಜಾವ 5 ಗಂಟೆಗೆ ಬಂದಿದ್ದ ಬಸವರಾಜು ದಂಪತಿ
ಕಾಟನ್‌ಪೇಟೆಗೆ ಬೆಳಗಿನ ಜಾವ 5 ಗಂಟೆ‌ ಸುಮಾರಿಗೆ ಬಸವರಾಜನ್ ದಂಪತಿ ಬಂದಿದ್ದರು. ಈ ವೇಳೆ ಪೊಲೀಸರು ಮಕ್ಕಳು ಹಾಗೂ ಬಸವರಾಜ್ ದಂಪತಿ ಹೇಳಿಕೆ ಪಡೆದು ಕಳುಹಿಸಿದ್ದರು. ಬಸವರಾಜ್ ದಂಪತಿ ಜೊತೆ ಹುಡುಗಿಯರ ಪೋಟೋ ತೆಗೆದುಕೊಂಡು ಪೊಲೀಸರು ಮಕ್ಕಳನ್ನು ಕಳುಹಿಸಿದ್ದರು. ಮಕ್ಕಳನ್ನ ಕರೆದೊಯ್ದ ಬಸವರಾಜನ್ ದಂಪತಿ ಅವರ ಕುಟುಂಬಸ್ಥರಿಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಮಕ್ಕಳನ್ನ ಪೋಷಕರಿಗೆ ಒಪ್ಪಿಸಿದ ಬಗ್ಗೆ ಜುಲೈ 27 ರಂದು ಕಾಟನ್ ಪೇಟೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

2 ದಿನ ಬಸವರಾಜ ದಂಪತಿ ಬಳಿಯಿದ್ದ ಮಕ್ಕಳು
ಮುರುಘಾ ಮಠದ ಅಕ್ಕಮಹಾದೇವಿ ಹಾಸ್ಟಲ್‌ ನಿಂದ ಬಂದಿದ್ದ ಹೆಣ್ಣುಮಕ್ಕಳನ್ನು ಬೆಂಗಳೂರಿನಿಂದ ಕರೆದೊಯ್ದ ಬಸವರಾಜನ್‌ ದಂಪತಿ ಎರಡು ದಿನಗಳ ಕಾಲ ಅನಾಥಾಲಯಕ್ಕೂ ಕಳುಹಿಸದೇ, ಪೋಷಕರಿಗೂ ಒಪ್ಪಿಸದೇ ತಮ್ಮ ಬಳಿ ಇರಿಸಿಕೊಂಡಿದ್ದರು ಎನ್ನಲಾಗಿದೆ. ಎರಡು‌ ದಿನಗಳ ಬಳಿಕ ಬಸವರಾಜ್ ದಂಪತಿಯನ್ನು ಕಾಟನ್‌ಪೇಟೆ ಪೊಲೀಸರು ‌ವಿಚಾರಿಸಿದಾಗ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರ ಮೂಲಕ ಆಡಳಿತಾಧಿಕಾರಿ ಬಸವರಾಜ್ ಹೆಣ್ಣು ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

POCSO case against Murugha Seer: Why did the abused children come to Bengaluru?

ಬೆಂಗಳೂರಿಗೆ ಬಂದು ವಾಪಸ್ ಪೋಷಕರ ಮಡಿಲು ಸೇರಿದ್ದ ಹೆಣ್ಣು ಮಕ್ಕಳು ಮತ್ತೆ ಮೈಸೂರಿನ ಒಡನಾಡಿ ಸಂಸ್ಥೆಗೆ ತೆರಳಿ ಆ ಮೂಲಕ ನಜರಾಬಾದ್‌ ಪೊಲೀಸ್ ಠಾಣೆಯಲ್ಲಿ ಮುರುಘಾ ಶ್ರೀ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+