ಮೋದಿ ಬೆಂಗಳೂರು ಭೇಟಿ ಬಗ್ಗೆ ರಾಜ್ಯ ನಾಯಕರು ಏನಂತಾರೆ?

Recommended Video

      ಮೋದಿ ಬೆಂಗಳೂರು ಭೇಟಿ ಬಗ್ಗೆ ರಾಜ್ಯ ನಾಯಕರು ಏನಂತಾರೆ? | Oneindia Kannada

      ಬೆಂಗಳೂರು, ಫೆಬ್ರವರಿ 05: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ ಎಂಬ ಸುದ್ದಿ ಬಂದಾಗಿನಿಂದಲೂ ಕರ್ನಾಟಕದ ಬಿಜೆಪಿ ಪಾಳೆಯದಲ್ಲಿ ಚಟುವಟಿಕೆ ಗರಿಗೆದರಿದ್ದರೆ, ಕಾಂಗ್ರೆಸ್ ನಾಯಕರು ತಮ್ಮ ಬತ್ತಳಿಕೆಯಲ್ಲಿದ್ದ ಟೀಕಾಸ್ತ್ರಗಳನ್ನೆಲ್ಲ ಹೂಡುವುದಕ್ಕೆ ಸಿದ್ಧಗೊಳಿಸಿಕೊಂಡಿದ್ದರು. ಫೆ.4 ರಂದು ಮಾಡಬೇಕೆಂದುಕೊಂಡಿದ್ದ ಬಂದ್ ಠುಸ್ ಆಯ್ತು! ಮೋದಿ ಬಂದಿದ್ದೂ ಆಯ್ತು, ಭಾಷಣ ಮಾಡಿದ್ದೂ ಆಯ್ತು, ಹೋಗಿದ್ದೂ ಆಯ್ತು...

      ಆದರೆ ಅಸಲಿ ಆಟ ಶುರುವಾಗಿದ್ದು ಈಗ! ಹೌದು ಮೋದಿ ಬಂದು ಹೋದ ನಂತರ ಕಾಂಗ್ರೆಸ್ ಮುಖಂಡರು ಮೋದಿ ಮತ್ತು ರಾಜ್ಯ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುವುದಕ್ಕೆ ಆರಂಭಿಸಿದ್ದರೆ, ಬಿಜೆಪಿ ಮಾತ್ರ ಮೋದಿ ಬಂದು ಹೋದ ಮೇಲೆ ಮೈಕೊಡವಿಕೊಂಡು ಎದ್ದುನಿಂತಂತೆ ಉತ್ಸಾಹದಲ್ಲಿದೆ.

      ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆಯೇ ಪ್ರಧಾನಿ ಮೋದಿಯವರ ಕರ್ನಾಟಕ ಭೇಟಿಯನ್ನು ಸ್ವಾಗತಿಸಿ, 'ಭಾರತದಲ್ಲಿ ಪ್ರಗತಿ ಹೊಂದುತ್ತಿರುವ ನಂಬರ್ ಒನ್ ರಾಜ್ಯಕ್ಕೆ ಸ್ವಾಗತ' ಎಂದು ಟ್ವೀಟ್ ಮಾಡಿ ಮೋದಿಯವರ ಕಾಲೆಳೆಯಲು ಯತ್ನಿಸಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಕರ್ನಾಟಕ ಭ್ರಷ್ಟಾಚಾರದಲ್ಲೂ ನಂ.1 ಎಂಬುದನ್ನು ಮರೆಯಬೇಡಿ ಎಂದು ಪ್ರತ್ಯುತ್ತರ ನೀಡಿದ್ದರು! ಉಭಯ ನಾಯಕರ ನಡುವಿನ ಟ್ವಿಟ್ಟರ್ ವಾರ್ ಇನ್ನೂ ಮುಂದುವರಿದಿದೆ. ಜೊತೆಗೆ ಕಾಂಗ್ರೆಸ್ ನ ದಿನೇಶ್ ಗುಂಡೂರಾವ್, ಕೃಷ್ಣ ಭೈರೇ ಗೌಡ ಸೇರಿದಂತೆ ಹಲವರು ಮೋದಿ ಭೇಟಿ ಮತ್ತು ಯಡಿಯೂರಪ್ಪ ಹೇಳಿಕೆಯನ್ನು ಯನ್ನು ಕನ್ನಡ ಸ್ವಾಭಿಮಾನ(#KannadaSwabhimana ) ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟೀಕಿಸಿದ್ದಾರೆ.

      Array

      ಸ್ವಾಭಿಮಾನವಿಲ್ಲದವರು ಮಾತ್ರ ಹೀಗೆ ಹೇಳಲು ಸಾಧ್ಯ!

      ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕದ ಅತ್ಯಂತ ದೊಡ್ಡ ಹಗರಣದಲ್ಲಿ ಸಿಲುಕಿಕೊಂಡಿದ್ದ ನಾಯಕರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಪ್ರಗತಿಯಲ್ಲಿ ಭಾರತದ ನಂ 1 ರಾಜ್ಯವಾಗುವತ್ತ ದಾಪುಗಾಲಿಡುತ್ತಿರುವ ಕರ್ನಾಟಕವನ್ನು ಸ್ವಾಭಿಮಾನ ಇಲ್ಲದವರು ಮಾತ್ರ ಹೀಗೆ ಭ್ರಷ್ಟಾಚಾರದಲ್ಲಿ ನಂ.1 ಎಂದು ಹೇಳಲು ಸಾಧ್ಯ ಎಂದು ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

      Array

      ದೇಶಕ್ಕೆ ಅತೀ ಹೆಚ್ಚು ಕೊಡುಗೆ ನೀಡೋದೇ ಕರ್ನಾಟಕ!

      ದೇಶಕ್ಕೆ ಅತೀ ಹೆಚ್ಚು ಕೊಡುಗೆ ನೀಡುವುದು ಕರ್ನಾಟಕ ಮತ್ತು ಕನ್ನಡಿಗರು ಎಂಬುದು ನೆನಪಿರಲಿ. ಕನ್ನಡಿಗರು ಕಟ್ಟುವ ತೆರಿಗೆಯೇ ದೇಶದ ಪ್ರಗತಿ ಮತ್ತು ದೇಶದ ಇನ್ನಿತರ ಹಲವು ರಾಜ್ಯಗಳ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಬಿಜೆಪಿಗೆ ಇದು ತಿಳಿದಿರಲಿ, ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಬರುವಂತೆ ಮಾತನಾಡಬೇಡಿ ಎಂದಿದ್ದಾರೆ ಕರ್ನಾಟಕ ಕೃಷಿ ಸಚಿವ ಕೃಷ್ಣ ಭೈರೇಗೌಡ.

      ಚಿತ್ರಗಳು : ಬೆಂಗಳೂರಿನಲ್ಲಿ ಮೋಡಿ ಮಾಡಿದ ಮೋದಿ

      ಕಾಂಗ್ರೆಸ್ ಎಕ್ಸಿಟ್ ಗೇಟ್ ಬಳಿ ಇದೆ!

      ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಇಷ್ಟೆಲ್ಲ ಸಂಖ್ಯೆಯಲ್ಲಿ ಆಗಮಿಸಿದ ಕರ್ನಾಟಕದ ಸಮಸ್ತ ಜನರಿಗೂ ನಮ್ಮ ಪ್ರಾಮಾಣಿಕ ಧನ್ಯವಾದಗಳು. ಇಷ್ಟು ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಪರಿವರ್ತನಾ ಯಾತ್ರೆಯನ್ನು ಕನ್ನಡಿಗರು ಯಶಸ್ವಿಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು ಸತ್ಯ. ಕಾಮಗ್ರೆಸ್ಸಿಗರು ಎಗ್ಸಿಟ್ ಗೇಟ್ ಬಳಿ ನಿಂತಿದ್ದಾರೆ! ಎಂದು ಟ್ವೀಟ್ ಮಾಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ.

      ಮಹಾದಾಯಿ ಬಗ್ಗೆ ಚಕಾರವಿಲ್ಲ, ರೈತರ ಬಗ್ಗೆ ಸೊಲ್ಲೆತ್ತಿಲ್ಲ!

      ಮಹದಾಯಿ ನದಿ ನೀರಿನ ಹಂಚಿಕೆ ವಿವಾದದ ಬಗ್ಗೆ ಚಕಾರವೆತ್ತಿಲ್ಲ, ರೈತರ ಬಗ್ಗೆ ಏನೂ ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಕರ್ನಾಟಕ ಭೇಟಿ ನಿಜಕ್ಕೂ ತೀವ್ರ ನಿರಾಶೆ ಮೂಡಿಸಿದೆ ಎಂದಿದ್ದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+