ಬೆಂಗಳೂರಿನ ಐಐಎಸ್‌ಸಿಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಮೋದಿ
ಬೆಂಗಳೂರು, ಜೂನ್ 20: ಕರ್ನಾಟಕಕ್ಕೆ ಎರಡು ದಿನ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳಿನ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು.
ಸೋಮವಾರ ಬೆಳಗ್ಗೆ 12.05 ಗಂಟೆಗೆ ಬೆಂಗಳೂರಿನ ಯಲಹಂಕ ವಾಯುನೆಲೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಸ್ತೆ ಮಾರ್ಗವಾಗಿ ಭಾರತೀಯ ವಿಜ್ಞಾನ ಸಂಸ್ಥೆಗೆ ತೆರಳಿದರು. ಇದೇ ವೇಳೆ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೂ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಿದುಳು ಸಂಶೋಧನಾ ಕೇಂದ್ರಕ್ಕಾಗಿ 250 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಅದೇ ಐಐಎಸ್‌ಸಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ 425 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಮಿದುಳು ಸಂಶೋಧನಾ ಕೇಂದ್ರ:
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಮಿದುಳು ಸಂಶೋಧನಾ ಕೇಂದ್ರದಿಂದಾಗಿ ಗ್ರಾಮೀಣ ಕರ್ನಾಟಕದಲ್ಲಿ ನಡೆಸಲಾಗುತ್ತಿರುವ ಪ್ರಮುಖ ಸಂಸೋಧನೆಗಳು, ಗ್ರಾಮೀಣ ಭಾರತದ ಕಡೆಗೆ ಗಮನ ಕೇಂದ್ರೀಕರಿಸಿ ಡೆಮೆನ್ಸಿಯಾ ಕಾಯಿಲೆ ಪ್ರಾರಂಭವನ್ನು ವಿಳಂಬಗೊಳಿಸುವ ಹಾಗೂ ಅದರ ಬೆಳವಣಿಗೆಯನ್ನು ನಿಧಾನಗೊಳಿಸುವ ಸೂಕ್ತ, ಸಾಕ್ಷ್ಯಾಧಾರಿತ ಸಾರ್ವಜನಿಕ ಆರೋಗ್ಯ ಪರಿಹಾರವನ್ನು ಒದಗಿಸುತ್ತದೆ.
425 ಕೋಟಿ ವೆಚ್ಚದ ಬಾಗ್ಚಿ ಆಸ್ಪತ್ರೆಗೆ ಶಂಕುಸ್ಥಾಪನೆ:
ಬೆಂಗಳೂರಿನಲ್ಲಿ ಚಿಕಿತ್ಸಾ ಸಂಶೋಧನೆಗಾಗಿ ಸ್ಥಾಪಿಸಲಾಗುತ್ತಿರುವ ಲಾಭದ ಉದ್ದೇಶ ಇಲ್ಲದಿರುವ 832 ಹಾಸಿಗೆಗಳ ಆಸ್ಪತ್ರೆಯು, ವಿಜ್ಞಾನ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿನ ಐಐಎಸ್‌ಸಿ ಶತಮಾನದಷ್ಟು ಹಳೆಯ ನೈಪುಣ್ಯತೆಯ ಸಂಪೂರ್ಣ ಲಾಭವನ್ನು ಪಡೆದುಕೊಂಡು ಒಂದೇ ಆವರಣದಲ್ಲಿ ಒಟ್ಟುಗೂಡಿಸಲಿದೆ.












Click it and Unblock the Notifications