ಬೆಂಗಳೂರಲ್ಲಿ ಪಿಎಂ ಮೋದಿಯಿಂದ 35 ಕಿಮೀ ರೋಡ್‌ ಶೋ: ಜನರ ಬದುಕನ್ನು ಸಮಸ್ಯೆಗೆ ದೂಡುವ ಈ ಶೋಕಿ ಬೇಕಾ?

ಬೆಂಗಳೂರು, ಮೇ 03: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರಿನ ಅಷ್ಟು ಕ್ಷೇತ್ರಗಳ ಎಲ್ಲ ಪಕ್ಷಗಳಿಗೆ ಪ್ರಮುಖವಾಗಿವೆ. ಈ ನಿಟ್ಟಿನಲ್ಲಿ ಬಿಜೆಪಿಯು ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಬೃಹತ್ ರೋಡ್ ನಡೆಸಲು ನಿರ್ಧರಿಸಿದೆ. ಆದರೆ ಈ ರೋಡ್‌ ಶೋ ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ರಾಜ್ಯ ಬಿಜೆಪಿಯು ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆಯಲು ಹವಣಿಸುತ್ತಿದೆ. ರಾಜ್ಯಾದ್ಯಂತ ಪ್ರಧಾನಿ ಮೋದಿಯಾಗಿ ಹೈಕಮಾಂಡ್ ನಾಯಕರನ್ನು ಕರೆತಂದು ಭರ್ಜರಿ ಪ್ರಚಾರ ನಡೆಸುತ್ತಿದೆ. ಇದೇ ಮೇ 6ರಂದು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ 35 ಕಿಲೋ ಮಿಟರ್ ಭರ್ಜರಿ ರೋಡ್ ಶೊ ನಡೆಸಲಿದ್ದಾರೆ.

ಆದರೆ ಪ್ರಧಾನಿ ರೋಡ್ ಶೋಗೆ ಜನರು ಜನರು ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಅಭಿವೃದ್ಧಿ ಮಾಡಿದ್ದೇ ಆದಲ್ಲಿ ಜನರೆ ಆ ಪಕ್ಷಕ್ಕೆ ಮತ ನೀಡುತ್ತಾರೆ. ಅದನ್ನು ಬಿಟ್ಟು ಹೀಗೆ ರೋಡ್ ಶೋಗೆ ಅನುಮತಿ ನೀಡುವ ಮೂಲಕ ಜನರ ದೈನಂದಿನ ಬದುಕನ್ನು ಸಮಸ್ಯೆಗೆ ದೂಡುವ ಈ ಶೋಕಿ ಬೇಕಾ? ಎಂದು ಜನರು ಪ್ರಶ್ನಿಸಿದ್ದಾರೆ.

PM Modi 35 KM Road Show In Bengaluru On May 6th: Peoples Demand Not To Give Permission

ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ, ರೋಡ್ ಶೋ, ಮೆರವಣಿಗೆ ಇವುಗಳೇನು ಇಲ್ಲದಿದ್ದರೂ ಸಹ ಜನರು ನಿತ್ಯ ಸಂಚಾರ ದಟ್ಟಣೆ ಅನುಭವಿಸುತ್ತಿದ್ದಾರೆ. ಮಾರ್ಚ್ 29ರಿಂದ ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದ ನಗರದಲ್ಲಿ ಕನಿಷ್ಠ 100 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಇದರಿಂದಲೂ ಸಹ ವಾಹನ ಸವಾರರಿಗೆ ಅಲ್ಪಮಟ್ಟಿಗೆ ತೊಂದರೆ ಆಗುತ್ತಿದೆ.

ಮೋದಿ ರೋಡ್ ಶೋ- ಮದುಮಗನಿಗೆ ಟ್ರಾಫಿಕ್ ಬಿಸಿ

ಇದೀಗ ಪ್ರಧಾನಿ ನೇತೃತ್ವದ ಬರೊಬ್ಬರಿ 36 ಕಿಲೋ ಮೀಟರ್ ರೋಡ್‌ ಶೋಗೆ ಅನುಮತಿ ನೀಡದರೆ ಜನ ಜೀವನ ಅಸ್ತವೆಸ್ತವಾಗಲಿದೆ. ಗಂಟೆಗಟ್ಟಲೇ ವಾಹನಗಳು ನಿಂತಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅನಾರೋಗ್ಯ ಪೀಡಿತರಿಗೆ, ಸರಕು ಸೇವೆಗಳ ಪೂರೈಕೆಗೆ, ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ. ಈ ಹಿಂದೆ ನಡೆದ ರೋಡ್ ಶೋನಲ್ಲಿ ರಸ್ತೆ ಮಧ್ಯೆದಲ್ಲೇ ವಧು-ವರರು ಗಂಟೆಗಟ್ಟಲೇ ಕಾಯ್ದಿದ್ದರು.

PM Modi 35 KM Road Show In Bengaluru On May 6th: Peoples Demand Not To Give Permission

ಈ ಹಿಂದೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ನಡೆಸಿದ್ದರು. ಈ ಸಂಬಂಧ ನೈಸ್ ರಸ್ತೆಯ ಜಂಕ್ಷನ್‌ ನಿಂದ ಸುಮ್ಮನಹಳ್ಳಿ ವೃತ್ತದವರೆಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಮೆರವಣಿಗೆ ಮೂಲಕ ಕಲ್ಯಾಣ ಮಂಟಪ್ಪಕ್ಕೆ ಹೋಗುತ್ತಿದ್ದ ವಧು-ವರರ ವಾಹನವು ಗಂಟೆಗಟ್ಟಲೇ ರಸ್ತೆಯಲ್ಲೇ ನಿಲ್ಲಬೇಕಾಯಿತು. ಮದುವೆ ಧಿರಿಸಿನಲ್ಲಿ ಮದುಮಗ ನಿಂತ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅವರಷ್ಟೇ ಅಲ್ಲದೇ ಸಾರ್ವಜನಿಕರು ಸಹ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಸಮಸ್ಯೆ ಎದುರಿಸಿದ್ದರು.

ಇದೀಗ ಮತ್ತೆ ಅಂತದ್ದೆ ಸಮಸ್ಯೆ ಮೇ 06ರಂದು ಎದುರಾಗುವ ಸಂಭವವಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರೋಡ್ ಗೆ ಚುನಾವಣಾ ಆಯೋಗದ ಅಧಿಕಾರಿಗಳು ಅನುಮತಿ ನೀಡದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+