ಮಹಿಳೆಯ ಕರೆಗೆ ಓಗೊಟ್ಟು ಕಾಮುಕನನ್ನು ಬಂಧಿಸಿದ 'ಪಿಂಕ್ ಹೊಯ್ಸಳ'
ಬೆಂಗಳೂರಿನಿಂದ ಹೈದರಾಬಾದಿಗೆ ತೆರಳುತ್ತಿದ್ದ ವೋಲ್ವೋ ಬಸ್ಸನಲ್ಲಿ ಯುವಕನೊಬ್ಬ ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆಯ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಧುಸೂದನ್ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕಿರುಕುಳ
ಬೆಂಗಳೂರು, ಮೇ 11: ಬೆಂಗಳೂರಿನಿಂದ ಹೈದರಾಬಾದಿಗೆ ತೆರಳುತ್ತಿದ್ದ ವೋಲ್ವೋ ಬಸ್ಸನಲ್ಲಿ ಯುವಕನೊಬ್ಬ ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆಯ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಧುಸೂದನ್ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲ, ಆಕೆಯ ಫೋಟೊ ತೆಗೆದು ಪೀಡಿಸುತ್ತಿದ್ದ.
ಏನು ಮಾಡಬೇಕೆಂದು ತೋಚದೆ ಚಿಂತಿಸುತ್ತಿದ್ದ ಮಹಿಳೆಗೆ ತಕ್ಷಣ ನೆನಪಾಗಿದ್ದು know your police station ಆಪ್! ಹೌದು, ತಕ್ಷಣವೇ ಹತ್ತಿರದ ಬೆಳ್ಳಂದೂರು ಪೊಲೀಸ್ ಠಾಣೆಗೆ ಆ ಮಹಿಳೆ ಮಾಹಿತಿ ನೀಡಿದರು. ಮಹಿಳೆಯ ದೂರಿನನ್ವಯ, ಬಸ್ ಇರುವ ಜಾಗವನ್ನು ಟ್ರೇಸ್ ಮಾಡಿದ ಪಿಂಕ್ ಹೊಯ್ಸಳ ಪೊಲೀಸ್ ತಂಡ, ಬಸ್ ಅಡ್ಡಗಟ್ಟಿ ಯುವಕನನ್ನು ವಶಕ್ಕೆ ಪಡೆದಿದೆ.[ಪಿಂಕ್ ಹೊಯ್ಸಳ: ಮಹಿಳಾ ರಕ್ಷಣೆಯತ್ತ ದಿಟ್ಟ ಹೆಜ್ಜೆ]

ವಿಚಾರಣೆಯ ವೇಳೆ ಆತ ಕಳೆದ ವಾರವೂ ಇದೇ ಬಸ್ಸಿನಲ್ಲಿ ಬಂದು ಮಹಿಳೆಗೆ ಕಿರುಕುಳ ನೀಡಿದ್ದ ಎಂಬುದು ಬೆಳಕಿಗೆ ಬಂದಿದೆ.












Click it and Unblock the Notifications