ಛಾಯಾಚಿತ್ರ ಸಂಪಾದನೆಯಿಂದ ವೃತ್ತಿ ಜೀವನ ರೂಪಣೆ
ಬೆಂಗಳೂರು, ಜು. 03: 1974 ರಲ್ಲಿ ಆರಂಭವಾದ ಕೇಂದ್ರಿಯ ವಿದ್ಯಾಲಯ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರೊಂದಿಗೆ ಅನೇಕ ಸಮಾಜ ಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ.
ವಿದ್ಯಾಲಯದಲ್ಲಿ ಛಾಯಾಚಿತ್ರಕ್ಕೆ ಸಂಬಂಧಿಸಿದ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಟೋಹೋಲ್ಡ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟನೆ ಮಾಡಲಾಯಿತು.[ಒನ್ಇಂಡಿಯಾ ವರದಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ]

ನೂರಾರು ವಿದ್ಯಾರ್ಥಿಗಳು ಫೋಟೊಗ್ರಫಿ ವೃತ್ತಿಜೀವನಕ್ಕೆ ಹೇಗೆ ನೆರವು ನೀಡುತ್ತದೆ? ಫೋಟೋಗ್ರಫಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆಯೇ ಎಂಬುದರ ಕುರಿತು ಸಮಗ್ರ ಮಾಹಿತಿ ಪಡೆದರು.
ವಿದ್ಯಾಲಯದ ಹಳೆ ವಿದ್ಯಾರ್ಥಿಗಳಾದ ಬಿ.ಜಿ.ಮಹೇಶ್, ಮೀನಾನ್ ಕವ್ಲೆ, ಲತಾ ಶಂಕರ್, ಲಕ್ಷ್ಮೀ ಶಂಕರ್, ವೆಂಕಟೇಶ್ ಸೇರಿದಂತೆ ಅನೇಕರು ಹಾಜರಿದ್ದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶಾಲೆಯ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟೇಶ್ ಕಟ್ಟಾ 11 ನೇ ತರಗತಿಯ ಮಕ್ಕಳಿಗೆ ಛಾಯಾಚಿತ್ರ ಕಲೆಯ ಸಂಪೂರ್ಣ ಮಾಹಿತಿ ನೀಡಿದರು.
ಸಂಸ್ಥೆಯ ಫೇಸ್ ಬುಕ್ ಪೇಜ್ ವೀಕ್ಷಿಸಬಹುದು













Click it and Unblock the Notifications