• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಗೃಹ ಮಂತ್ರಿ ಆಗಿದ್ದಾಗ ಫೋನ್ ಕದ್ದಾಲಿಕೆ ನಡೆದಿಲ್ಲ: ಪರಮೇಶ್ವರ್

|

ಬೆಂಗಳೂರು, ಆಗಸ್ಟ್ 16: ಗುಪ್ತಚರ ಇಲಾಖೆಯು ಗೃಹ ಮಂತ್ರಿಗಳ ಅಧೀನದಲ್ಲಿ ಬರುವುದಿಲ್ಲ. ಆದರೆ ನಾನು ಗೃಹ ಮಂತ್ರಿ ಆಗಿದ್ದಾಗ ಫೋನ್ ಕದ್ದಾಲಿಕೆ ನಡೆದ ಸಾಧ್ಯತೆ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ಮಾಜಿ ಗೃಹ ಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

ಭಯೋತ್ಪಾದಕರು, ಅಪರಾಧ ಚಟುವಟಿಕೆ ಮಾಡುವವರ ಫೋನ್ ಕರೆ ಟ್ಯಾಪ್ ಮಾಡಲಾಗುತ್ತದೆ. ಅದನ್ನು ಗುಪ್ತಚರ ಇಲಾಖೆ ಮಾಡುತ್ತದೆ. ಆದರೆ ಈ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ನಾನು ಗೃಹ ಮಂತ್ರಿ ಆಗಿದ್ದಾಗ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಫೋನ್ ಟ್ಯಾಪಿಂಗ್ : ಸಿದ್ದರಾಮಯ್ಯ ವಿರುದ್ದ 'ಎಚ್ಡಿಕೆ - ಡಿಕೆಶಿ' ಒಂದಾದಾಗ!

ಈಗ ಫೋನ್ ಟ್ಯಾಪಿಂಗ್ ಎಂಬ ಆರೋಪ ಬಂದಿದೆಯಾದ್ದರಿದ ಸರ್ಕಾರ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ಹೊರಗೆ ಹಾಕಬೇಕು ಎಂದು ಪರಮೇಶ್ವರ್ ಅವರೂ ಸಹ ಒತ್ತಾಯಿಸಿದರು.

ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ನೆರೆ ಪರಿಹಾರ ನೀಡದೆ ಕೇಂದ್ರವು ಮಲತಾಯಿ ಧೋರಣೆ ಅನುಸರಿಸುತ್ತಿದೆ. ಖುದ್ದು ಮೋದಿ ಅವರು ಪ್ರವಾಹ ವೀಕ್ಷಣೆಗೆ ಬಾರದೆ ಅಮಿತ್ ಶಾ ಅವರನ್ನು ಕಳುಹಿಸಿದರು, ಅಲ್ಲದೆ ನೆಎರ ಪರಿಹಾರವನ್ನೂ ನೀಡಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ನಮ್ಮ ಫೋನ್ ಟ್ಯಾಪ್ ; ದಿನೇಶ್ ಗುಂಡೂರಾವ್

ಈ ಹಿಂದಿನ ಮೈತ್ರಿ ಸರ್ಕಾರದ ಯೋಜನೆಗಳು, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಿಗೆ ಯಾವುದೇ ಕಾರಣಕ್ಕು ಬಿಜೆಪಿಯ ಪ್ರಸ್ತುತ ಸರ್ಕಾರ ಕೊಕ್ಕೆ ಹಾಕಬಾರದು. ಹಣಕಾಸಿನ ಕೊರತೆ ನೆಪ ಹೇಳಿ ಯಾವ ಯೋಜನೆಗಳನ್ನೂ ನಿಲ್ಲಿಸಬಾರದು ಎಂದು ಪರಮೇಶ್ವರ್ ಸರ್ಕಾರವನ್ನು ಒತ್ತಾಯಿಸಿದರು. ಹಾಗೇನಾದರೂ ಮಾಡಿದಲ್ಲಿ ಕಾಂಗ್ರೆಸ್ ಹೋರಾಟ ಮಾಡುತ್ತದೆ ಎಂದು ಅವರು ಹೇಳಿದರು.

English summary
Former Home minister G Parameshwar said that, no any phone tapping incidents happened in my tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X