ದೇವೇಗೌಡರಿಗೆ ಶುಭಕೋರಿದ ಸುಮಲತಾಗೆ ಮೆಚ್ಚುಗೆಯ ಸುರಿಮಳೆ
Recommended Video
ಬೆಂಗಳೂರು, ಮೇ 20: "ನೀವೊಬ್ಬ ವಿಶಾಲ ಹೃದಯದ, ಪ್ರಬುದ್ಧ ರಾಜಕಾರಣಿ..." ಹೀಗೆಂದು ಸುಮಲತಾ ಅಂಬರೀಶ್ ಅವರನ್ನು ಹಾಡಿಹೊಗಳಿದ್ದಾರೆ ಅವರ ಅಭಿಮಾನಿಗಳು.
ಮೇ 18 ರಂದು ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ 87 ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ತನ್ನಿಮಿತ್ತ ಟ್ವಿಟ್ಟರ್ ನಲ್ಲಿ ಸುಮಲತಾ ಅಂಬರೀಶ್ ಅವರು ಶುಭ ಕೋರಿದ್ದರು.
ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಸುಮಲತಾ ಅವರು ಮಾಡಿದ್ದ ಟ್ವೀಟ್ ಅನ್ನು ಸುಮಾರು ಮೂರು ಸಾವಿರದಷ್ಟು ಜನ ಲೈಕ್ ಮಾಡಿದ್ದು, ಅವರ ನಡೆಯನ್ನು ಶ್ಲಾಘಿಸಿದ್ದಾರೆ.
|
ಸಭ್ಯಸ್ಥಿಕೆ ಅಂದ್ರೆ ಇದು!
ಇದು ನಿಜವಾದ ದೊಡ್ಡ ಗುಣ. ಸಭ್ಯಸ್ಥಿಕೆ ಅಂದ್ರೆ ನಿಮ್ಮನ್ನ ನೋಡಿ ಕಲೀಬೇಕು, ಈ ನಮ್ಮ ದ್ವೇಷ ರಾಜಕಾರಣಿಗಳು- ಅನಿಲ್ ಗೌಡ
|
ರಾಜಕೀಯ ಅಂತ್ಯ ಬಯಸಿದವರಿಗೆ ಶುಭಾಶಯ?!
ನಿಮ್ಮ ರಾಜಕೀಯ ಅಂತ್ಯ ಬಯಸಿದವರಿಗೆ ಶುಭಾಶಯ ಹೇಳ್ತೀರಾ ? - ಎಂ ಕುಮಾರ್ ಬೆಂಗಳೂರು
|
ಪ್ರಬುದ್ಧ ರಾಜಕಾರಣಿ
ಮೇಡಂ, ನೀವೊಬ್ಬ ವಿಶಾಲ ಹೃದಯದ, ಪ್ರಬುದ್ಧ ರಾಜಕಾರಣಿ. ಈ ದೇಶಕ್ಕೆ ನಿಮ್ಮಂಥ ರಾಜಕಾರಣಿಗಳು ಬೇಕು- ಸಂಗಮೇಶ್
|
ಅವರು ಹಾರೈಕೆಗೆ ಅರ್ಹರಲ್ಲ
ಮೇಡಂ, ನಿಮ್ಮಷ್ಟು ವಿಶಾಲ ಮನಸ್ಸಿನ ರಾಜಕಾರಣಿ ದೇವೇಗೌಡ ಮತ್ತು ಅವರ ಕುಟುಂಬದವರಲ್ಲ. ತನ್ನ ಮಗನಿಗೆ, ಹೆಣ್ಣಿಗೆ ಸಮಾಜದಲ್ಲಿ ಕೊಡುವ ಕನಿಷ್ಠ ಮರ್ಯಾದೆ ಕೊಡುವುದನ್ನು ಸಹ ಕಲಿಸದ ತಂದೆಗೆ ನೀವು ಶುಭಾಶಯ ಕೋರುತ್ತಿದ್ದೀರ. ಇದರಲ್ಲಿ ಅರ್ಥವಿಲ್ಲ. ಇದಕ್ಕೆ ಅವರು ಅರ್ಹರಲ್ಲ, ಇಂತವರನ್ನು ನಾವು ಸಹಿಸಿಕೊಳ್ಳುತ್ತಿರುವುದು ದೊಡ್ಡ ದುರಂತ- ಗಣೇಶ್ ಪ್ರಸಾದ್
|
ಮೇ 23 ಕ್ಕೆ ನಿಮಗೆ ವಿಶ್ ಮಾಡಲಿ!
ಇವತ್ತು ನೀವು ವಿಶ್ ಮಾಡಿದಿರಿ ಸುಮಲತಾ ಮೇಡಂ. 23ಕ್ಕೆ ಹೆಚ್. ಡಿ. ದೇವೆಗೌಡರು ನಿಮಗೆ ವಿಶ್ ಮಾಡ್ಲಿ. ನೀವು ಗೆಲ್ಲೋದು ಪಕ್ಕಾ- ರಾಕಿಂಗ್ ಸಂತು












Click it and Unblock the Notifications