ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ: ದೇವೇಗೌಡರ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಭಾರಿ ಹಿನ್ನಡೆಯುಂಟುಮಾಡಿದೆ.

ಇದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಮತದಾರರು ನೀಡಿರುವ ತೀಕ್ಷ್ಣ ಪ್ರತಿಕ್ರಿಯೆ ಎಂದೇ ವಿರೋಧಪಕ್ಷಗಳು ವ್ಯಾಖ್ಯಾನಿಸಿವೆ.

ಬಿಜೆಪಿ ದೇಶವನ್ನೇ ನಾಶ ಮಾಡಲಿದೆ: ರಾಹುಲ್ ಗಾಂಧಿ ವಾಗ್ದಾಳಿ ಬಿಜೆಪಿ ದೇಶವನ್ನೇ ನಾಶ ಮಾಡಲಿದೆ: ರಾಹುಲ್ ಗಾಂಧಿ ವಾಗ್ದಾಳಿ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಬಿಜೆಪಿಯ ಅಹಮ್ಮಿಕೆಗೆ ಬಿದ್ದಿರುವ ಪೆಟ್ಟು ಇದು ಎಂದು ಬಣ್ಣಿಸಿದ್ದಾರೆ.

ಪಂಚರಾಜ್ಯ ಫಲಿತಾಂಶ LIVE: ದೆಹಲಿಯತ್ತ ಗೆದ್ದ ಬಿಎಸ್ಪಿ ನಾಯಕರು!ಪಂಚರಾಜ್ಯ ಫಲಿತಾಂಶ LIVE: ದೆಹಲಿಯತ್ತ ಗೆದ್ದ ಬಿಎಸ್ಪಿ ನಾಯಕರು!

ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳು ಹೇಳಿದಂತೆ ನಾವು ಕೇಳಬೇಕಷ್ಟೇ. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ ಎಂದು ದೇವೇಗೌಡ ಅವರು ಫಲಿತಾಂಶವನ್ನು ಉದಾಹರಣೆಯನ್ನಾಗಿ ಇರಿಸಿಕೊಂಡು ಬಿಜೆಪಿಗೆ ತಪರಾಕಿ ನೀಡಿದ್ದಾರೆ.

ಜೊತೆಗೆ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುವುದಾಗಿ ಹೇಳಿಕೊಳ್ಳುತ್ತಿದ್ದ ಬಿಜೆಪಿಗೆ ತಕ್ಕ ಉತ್ತರ ನೀಡಲಾಗಿದೆ. ಇದರಿಂದ ಬಿಜೆಪಿಯ ಅಹಮಿಕೆಗೆ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಾರೆ.

people have made this nation arrogance-free by voting out BJP HD devegowda

'ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತೇವೆ ಎಂಬುದೆಲ್ಲ ಕೇವಲ ಅಹಮಿಕೆ. ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

ದೇವೇಗೌಡರನ್ನು ಕಡೆಗಣಿಸಿ ಅವಮಾನಿಸಿದರೇ ರಾಹುಲ್ ಗಾಂಧಿ?ದೇವೇಗೌಡರನ್ನು ಕಡೆಗಣಿಸಿ ಅವಮಾನಿಸಿದರೇ ರಾಹುಲ್ ಗಾಂಧಿ?

'ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವ ಬದಲು ಸಮಸ್ಯೆ ಮುಕ್ತ ಭಾರತ ಮಾಡುವುದರತ್ತ ಅಧಿಕಾರರೂಢ ಬಿಜೆಪಿ ಮನಸ್ಸು ಮಾಡಲಿ' ಎಂದು ಅವರು ಸಲಹೆ ನೀಡಿದ್ದಾರೆ.

ಅಲ್ಲದೆ, ಅನಗತ್ಯ ಪ್ರಯಾಣ-ವಿಹಾರವನ್ನು ನಿಲ್ಲಿಸುವಂತೆ ಅವರು ಪರೋಕ್ಷವಾಗಿ ಮೋದಿ ಅವರ ವಿದೇಶ ಪ್ರಯಾಣದ ಓಡಾಟವನ್ನು ಟೀಕಿಸಿದ್ದಾರೆ.

English summary
HD Devegowda slams BJP government for its 'Congress-free', 'opposition-free' India intentions, and said the people have made this nation 'arrogance-free' by voting out BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X