ಶೀಘ್ರದಲ್ಲೇ ಪೀಣ್ಯ-ನಾಗಸಂದ್ರ ನಮ್ಮ ಮೆಟ್ರೋ ರೈಲು ಸಂಚಾರ
ಬೆಂಗಳೂರು, ಏ.9 : ಪೀಣ್ಯ ಕೈಗಾರಿಕಾ ನಿಲ್ದಾಣದಿಂದ ನಾಗಸಂದ್ರದವರೆಗೆ ಶೀಘ್ರದಲ್ಲೇ ಮೆಟ್ರೋ ರೈಲಿನಲ್ಲಿ ಸಂಚರಿಸಬಹುದಾಗಿದೆ. ರೀಚ್ 3ಬಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲು ರೈಲ್ವೆ ಸುರಕ್ಷತಾ ಇಲಾಖೆ ಪ್ರಮಾಣ ಪತ್ರ ನೀಡಿದೆ. ಮಾರ್ಗ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ.
ಸಂಪಿಗೆ ರಸ್ತೆಯಿಂದ ಪೀಣ್ಯದವರೆಗಿನ ಹಸಿರು ಮಾರ್ಗದಲ್ಲಿ ಈಗಾಗಲೇ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಪೀಣ್ಯ ಇಂಡಸ್ಟ್ರೀ-ನಾಗಸಂದ್ರದವರೆಗಿನ 3.7 ಕಿ.ಮೀ ರೀಚ್ 3ಬಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಬುಧವಾರ ಪ್ರಮಾಣ ಪತ್ರ ಸಿಕ್ಕಿದೆ. [2015ಕ್ಕೆ ಪೀಣ್ಯ-ನಾಗಸಂದ್ರ ಸಂಚಾರ]

ಕೆಲವು ದಿನಗಳ ಹಿಂದೆ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಿದ್ದ ರೈಲ್ವೆ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸಲು ಪ್ರಮಾಣ ಪತ್ರವನ್ನು ನೀಡಿದ್ದಾರೆ. ಸರ್ಕಾರ ಪ್ರಾಯೋಗಿಕ ಸಂಚಾರದ ದಿನಾಂಕವನ್ನು ನಿಗದಿ ಪಡಿಸುವ ಪ್ರಕ್ರಿಯೆ ಬಾಕಿ ಉಳಿದಿದೆ.[ಎಂಜಿ ರಸ್ತೆಯಿಂದ ಮಾಗಡಿ ರಸ್ತೆ ತಲುಪಿತು ಮೆಟ್ರೋ]
ಸಂಚಾರ ಪೂರ್ಣ : ರೀಚ್ 2ರ ಮಾಗಡಿ ರಸ್ತೆ ಮತ್ತು ನಾಯಂಡಹಳ್ಳಿ (ಮೈಸೂರು ರಸ್ತೆ) ಮಾರ್ಗದಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರ ಮುಕ್ತಾಯಗೊಂಡಿದೆ. ಈ ಮಾರ್ಗ 2015ರ ಜೂನ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. [ಪೂರ್ಣಗೊಳ್ಳುವುದೇ ಡಿಸೆಂಬರೊಳಗೆ ನಮ್ಮ ಮೆಟ್ರೋ?]
ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ : ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ತನಕ ಮೊದಲ ಮಾರ್ಗ ನಿರ್ಮಾಣವಾಗಲಿದೆ.












Click it and Unblock the Notifications