ಶಾಂತಿ ಸಂದೇಶ ಸಾರಲಿದೆ Peace auto

ವಲ್ಡ್ ಪೀಸ್ ಕೀಪರ್ಸ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಗಾಂಧಿ ಜಯಂತಿಯಂದು ಆಟೋ ಚಾಲಕರು ಮತ್ತು ಪ್ರಯಾಣಕರ ನಡುವಿನ ಗುದ್ದಾಟಕ್ಕೆ ತೆರೆ ಎಳೆದು, ಬೆಂಗಳೂರನ್ನು ಶಾಂತಿಯ ನಗರವಾಗಿ ಪರಿವರ್ತಿಸಲು ಸಿದ್ಧವಾಗಿದೆ.
ವಿಶ್ವಶಾಂತಿ ಸಾರಲು peace auto ಎಂಬ ಅಭಿಯಾನವನ್ನು ಈ ಸ್ವಯಂಸೇವಾ ಸಂಸ್ಥೆ ಕೋರಮಂಗಲದಲ್ಲಿ ಪ್ರಾರಂಭಿಸಿದೆ. ಗಾಂಧಿ ಜಯಂತಿಯಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಏನಿದು peace auto : ಆಟೋ ಚಾಲಕರನ್ನು ಸೇರಿಸಿಕೊಂಡು ಮಾಡಿಕೊಂಡಿರುವ ಅಭಿಯಾನಕ್ಕೆ peace auto ಎಂದು ಹೆಸರಿಡಲಾಗಿದೆ. ಕೋರಮಂಗಲದಲ್ಲಿ ಈ ಅಭಿಯಾನ ಪ್ರಾರಂಭವಾಗಲಿದೆ.
ಈ ಅಭಿಯಾನದಲ್ಲಿ ಪಾಲ್ಗೊಂಡ ಆಟೋ ಚಾಲಕರು ಹಾಫ್ ಕೋಟ್ ಧರಿಸಿರುತ್ತಾರೆ. ಪ್ರಯಾಣಿಕರನ್ನು ನಗುಮೊಗದಿಂದ ಸ್ವಾಗತಿಸುತ್ತಾರೆ. ಆಟೋ ಮೇಲೆ peace auto ಎಂಬ ಬರಹವಿರುತ್ತದೆ. ಇದನ್ನು ನೋಡಿ ನೀವು ಇದು ಶಾಂತಿ ಸಂದೇಶ ಸಾರುವ ಆಟೋ ಎಂದು ತಿಳಿಯಬಹುದು.
ಆಟೋದಲ್ಲಿ ಪ್ರಯಾಣಿಕರು ದೇವರು ಎಂಬ ಬರಹ ಅವರನ್ನು ನಿಮ್ಮನ್ನು ಸ್ವಾಗತಿಸುತ್ತದೆ. ಈ ಆಟೋದಲ್ಲಿ ಪ್ರಯಾಣಿಕರೊಂದಿಗೆ ಜಗಳವಾಡುವುದಿಲ್ಲ. ಮೀಟರ್ ಮೇಲೆ ಡಬಲ್ ಚಾರ್ಜ್ ವಸೂಲಿ ಮಾಡುವುದಿಲ್ಲ.
ಆಟೋ ಚಾಲಕರನ್ನು ಈ ಅಭಿಯಾನಕ್ಕೆ ಸೇರಿಸಿಕೊಂಡು ನಗರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದೆ. ಒಮ್ಮೆ peace autoದಲ್ಲಿ ಪ್ರಯಾಣಿಸಿ ನಂತರ ನಿಮ್ಮ ಅನುಭವ ಹೇಳಿ.












Click it and Unblock the Notifications