'ನನ್ನ ಮಗಳು ಚಿಕ್ಕವಳು..ಅವಳ ಹೆಸರು ತರಬೇಡಿ': ಪವಿತ್ರಾ ಗೌಡ ಮಾಜಿ ಪತಿ ಮನವಿ

ಬೆಂಗಳೂರು, ಜೂನ್‌ 14: ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅರೆಸ್ಟ್ ಆಗಿದ್ದಾರೆ. ಪ್ರಕರಣದ ಎ-೧ ಆರೋಪಿಯಾಗಿರುವ ಪವಿತ್ರಾ ಗೌಡ ಬಗ್ಗೆ ಅನೇಕ ವಿಚಾರಗಳು ಹರಿದಾಡುತ್ತಿದ್ದು, ಈ ಕೇಸ್‌ನಲ್ಲಿ ತಾಯಿ ಜೊತೆ ಮಗಳ ಹೆಸರನ್ನು ತರಬೇಡಿ ಎಂದು ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

'ನನ್ನ ಹೆಸರು ಹಾಳುಮಾಡಿ ಪರವಾಗಿಲ್ಲ., ನನ್ನ ಮಾಜಿ ಹೆಂಡತಿ ಹೆಸರು ಹಾಳು ಮಾಡಿ ಪರವಾಗಿಲ್ಲ. ಆದರೆ ನನ್ನ ಮಗಳು ಇನ್ನೂ ಚಿಕ್ಕವಳು. ಅವಳ ಹೆಸರನ್ನು ಈ ವಿಚಾರದಲ್ಲಿ ಮಧ್ಯ ತರಬೇಡಿ. ಇಡೀ ಪ್ರಪಂಚಕ್ಕೆ ಒಂದು ಮಾತು ಹೇಳುತ್ತೇನೆ. ದಯವಿಟ್ಟು ಹೆಣ್ಣು ಮಕ್ಕಳಿಗೆ ಟಾರ್ಚರ್​ ಮಾಡುವುದನ್ನು ನಿಲ್ಲಿಸಿ' ಎಂದು ಸಂಜಯ್​ ಸಿಂಗ್​ ಮನವಿ ಮಾಡಿದ್ದಾರೆ ಎಂದು ಟಿವಿ೯ ಕನ್ನಡ ವರದಿ ಮಾಡಿದೆ.

Pavitra Gowda s Ex-husband Appealed For Not Use His Daughters Name In This Case

ಇನ್ನು ಪವಿತ್ರಾ ಗೌಡ ಬಂಧನವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ಸಿಂಗ್ ಮದುವೆ ಹಾಗೂ ಮಗಳ ಬಗ್ಗೆ ಮಾತನಾಡಿದ್ದಾರೆ. '2002ರಲ್ಲಿ ಬೆಂಗಳೂರಿಗೆ ಬಂದಿದ್ದೆ. ಆ ಟೈಮ್‌ನಲ್ಲಿ ನನಗೆ ಪವಿತ್ರಾ ಗೌಡ ಪರಿಚಯ ಆಗಿ, ಪ್ರೀತಿ ಆಗಿ, ಮದುವೆ ಆಗಿರೋದು. ಮಗಳ ಜೊತೆ ವರ್ಷಕ್ಕೆ ಒಂದು ಸಾರಿನೋ.. ಎರಡು ವರ್ಷಕ್ಕೆ ಒಂದು ಸಾರಿನೋ ಫೋನ್‌ನಲ್ಲಿ ಮಾತಾಡುತ್ತೀನಿ. ಆದರೆ, ಡೈರೆಕ್ಟ್ ಆಗಿ ಮಾತಾಡೋಕೆ ಆಗಲ್ಲ. ಅವಳ ಫೋನ್‌ ನಂಬರ್ ನನ್ನ ಬಳಿ ಡೈರೆಕ್ಟ್ ಆಗಿಲ್ಲ. ನಮ್ಮ ಅತ್ತೆ ಮಾವನಿಗೆ ಫೋನ್ ಮಾಡಿದರೆ, ಮಗಳ ಬಳಿ ಮಾತಾಡಬಹುದು' ಎಂದು ಹೇಳಿದ್ದಾರೆ.

'ಈ ಘಟನೆ ಬಳಿಕ ಮಗಳ ಹತ್ತಿರ ಮಾತನಾಡಿಲ್ಲ. ಯಾಕಂದ್ರೆ, ಅವಳ ಪರಿಸ್ಥಿತಿ ನನಗೆ ಗೊತ್ತಿದೆ. ಅವಳು ನನ್ನ ಹಾಗೆ. ಅವಳಿಗೆ ಕೋಪ ಬಂದರೆ ಏನ್ ಮಾಡಿಕೊಳ್ತಾಳೋ ಅವಳಿಗೆ ಗೊತ್ತಿಲ್ಲ. ಆ ಟೈಮ್‌ನಲ್ಲಿ ನಾನು ತೊಂದರೆ ಕೊಡುವುದು ಇಷ್ಟ ಪಡುವುದಿಲ್ಲ' ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+