• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ನು ಏಳೇ ದಿನದಲ್ಲಿ ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆ!

|

ಬೆಂಗಳೂರು, ಸೆಪ್ಟೆಂಬರ್ 3: ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದವರು ಎಲ್ಲ ಪ್ರಕ್ರಿಯೆಗಳು ಮುಗಿದರೂ ಪೊಲೀಸ್ ಪರಿಶೀಲನೆಯಾಗದೆ ಪರದಾಡುವಂಟಾಗುವುದು ಸಾಮಾನ್ಯ. ಎಷ್ಟೋ ಸಂದರ್ಭಗಳಲ್ಲಿ ಅರ್ಜಿದಾರರು ಪೊಲೀಸ್ ಪರಿಶೀಲನೆಗೆ ತಿಂಗಳುಗಟ್ಟಲೆ ಕಾಯುವಂತಾಗುತ್ತದೆ. ಇದರಿಂದ ಅವರು ಸೂಕ್ತ ಸಮಯಕ್ಕೆ ಪಾಸ್‌ಪೋರ್ಟ್ ಸಿಗದೆ ಸಂಕಷ್ಟಕ್ಕೆ ಒಳಗಾದ ಉದಾಹರಣೆಗಳಿವೆ. ಆದರೆ ಈ ವಿಳಂಬಕ್ಕೆ ಅಂತ್ಯ ಹಾಡಲು ಬೆಂಗಳೂರು ನಗರ ಪೊಲೀಸರು ನಿರ್ಧರಿಸಿದ್ದಾರೆ.

   PUBG ban ! ಮತ್ತೆ ಬರುತ್ತಾ? | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಕುರಿತಾದ ಮಾಹಿತಿ ಬಂದ ಏಳು ದಿನಗಳಲ್ಲಿಯೇ ಅಗತ್ಯ ಪರಿಶೀಲನೆಯ ಕಾರ್ಯಗಳನ್ನು ನಡೆಸುವ ಮೂಲಕ ವಿಳಂಬಕ್ಕೆ ಆಸ್ಪದ ನೀಡದಂತೆ ವೇಗವಾಗಿ ಕೆಲಸ ಮುಗಿಸಲಾಗುತ್ತಿದೆ ಎಂದು ನಗರ ಪೊಲೀಸ್ ವಿಭಾಗ ತಿಳಿಸಿದೆ.

   ಭ್ರಷ್ಟರಿಗಿಲ್ಲ ಪಾಸ್ ಪೋರ್ಟ್: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ!

   'ಸಾರ್ವಜನಿಕರ ಗಮನಕ್ಕೆ!! ಪ್ರಸ್ತುತ 'ಪಾಸ್ ಪೋರ್ಟ್ ಪೊಲೀಸ್ ಪರಿಶೀಲನೆ'ಯು ಕೇವಲ 7 ಕೆಲಸದ ದಿನಗಳಲ್ಲಿ ಪೂರ್ಣಗೊಳ್ಳುತ್ತಿದೆ. ಅರ್ಜಿದಾರರಿಗೆ ಪರಿಶೀಲನಾ ಕಾರ್ಯವು ವೇಗವಾಗಿ ಮತ್ತು ಯಾವುದೇ ರೀತಿಯಲ್ಲಿ ಅನನುಕೂಲವಾಗದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆ ಎಲ್ಲ ರೀತಿಯಲ್ಲೂ ಕಾರ್ಯನಿರ್ವಹಿಸುತ್ತದೆ' ಎಂದು ನಗರ ಪೊಲೀಸ್ ವಿಭಾಗ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   ಬೆಂಗಳೂರು ಪೊಲೀಸರ ಈ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಪಾಸ್‌ಪೋರ್ಟ್ ಸಂಬಂಧ ಪರಿಶೀಲನೆಗೆ ಬರುವ ಪೊಲೀಸರು ಅದಕ್ಕೆ ಹಣ ಪಡೆದುಕೊಳ್ಳುತ್ತಾರೆ. ಬಂದವರು 500, 1000 ರೂ ಲಂಚ ಪಡೆದುಕೊಳ್ಳುತ್ತಾರೆ. ಅದಕ್ಕೆ ಯಾವಾಗ ಕಡಿವಾಣ ಹಾಕುತ್ತೀರಿ? ಎಂದು ಅನೇಕರು ಪ್ರಶ್ನಿಸಿದ್ದಾರೆ.

   English summary
   Bengaluru City Police have informed that the Passport Police verification can happen in just 7 days in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X