Bengaluru: ಟಿಪ್ ನೀಡಿದರೆ ಮಾತ್ರವೇ ಆಪ್‌ನಲ್ಲಿ ಆಟೋ ಬುಕ್ ಆಗುತ್ತೆ! ಪ್ರಯಾಣಿಕರು ಗರಂ
ಬೆಂಗಳೂರು, ಏಪ್ರಿಲ್ 01: ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಸಂಚಾರಕ್ಕಾಗಿ ಆಟೋ, ಟ್ಯಾಕ್ಸಿಯಂತಹ ಖಾಸಗಿ ವಾಹನಗಳನ್ನು ಅವಲಂಬಿಸಲಾಗುತ್ತದೆ. ಅನೇಕ ಪ್ರಯಾಣಿಕರು ಬುಕ್ಕಿಂಗ್‌ಗಾಗಿ ಮೊಬೈಲ್ ಆಪ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ ನಿಯಮ ಮೀರಿ ಟಿಪ್ ಸಹಿತ ಆಟೋಗಳು ಬುಕ್ಕಿಂಗ್ ಆಗುತ್ತಿವೆ. ಇದರಿಂದ ಪ್ರಯಾಣಿಕರಿಗೆ ಆರ್ಥಿಕ ಹೊರೆ ಆಗುತ್ತಿದೆ. ಬಲವಂತವಾಗಿ ಟಿಪ್ ಕಸಿದುಕೊಳ್ಳುತ್ತಿರುವ ಆಟೋ ಚಾಲಕ ನಡೆ ಖಂಡನೀಯ ಎಂದು ಬೆಂಗಳೂರು ಸಾರ್ವಜನಿಕರು ದೂರಿದ್ದಾರೆ.
ಹೌದು, ಮೊಬೈಲ್ ಅಪ್ಲಿಕೇಷನ್ ಬಳಸಿ ಆಟೋ ಬುಕ್ ಮಾಡಿದರೆ, ನೀವಿರುವ ಸ್ಥಳದಿಂದ ಗಮ್ಯ ಸ್ಥಾನಕ್ಕೆ ಇರುವ ಪ್ರಯಾಣದ ದರ ಜೊತೆಗೆ ಟಿಪ್ ಸೇರಿಸಿಯೇ ಬುಕ್ ಆಗುತ್ತಿದೆ. 30, 50 ಟಿಪ್ ಇಲ್ಲದೇ ಆಟೋ, ಟ್ಯಾಕ್ಸಿಗಳು ಬುಕ್ ಆಗುತ್ತಿಲ್ಲ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಆಟೋ ಚಾಲಕರು ಹೆಚ್ಚುವರಿಯಾಗಿ ಹಣ ಚಾರ್ಜ್ ಮಾಡುತ್ತಿದ್ದಾರೆ. ಟಿಪ್ ಸೇರಿಸಿಯೇ ಬುಕ್ಕಿಂಗ್ ಸ್ವೀಕರಿಸಲಾಗುತ್ತದೆ. ಟಿಪ್ ಇಲ್ಲವಾದರೆ ನೀವು ಆಟೋ ಬುಕ್ ಮಾಡಲು ಆಗದ ಸ್ಥಿತಿ ಇದೆ. ಇನ್ನು ಕೆಲವು ಆಟೋ ಚಾಲಕರು ಪ್ರಯಾಣಿಕರನ್ನು ಇಳಿಸುವಾಗ ಹೆಚ್ಚುವರಿ ಹಣ, ಟಿಪ್ ಅನ್ನು ವಸೂಲಿ ಮಾಡುತ್ತಿದ್ದಾರೆ ಎಂದು 'ಟಿವಿ ನೈನ್' ವರದಿ ಮಾಡಿದೆ.
ನಾನು ರಾಮಮೂರ್ತಿ ನಗರದ ಮನೆಯಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ತೆರಳಲು ಆಟೋ ಪ್ರಯಾಣ ದರ 75 ರೂಪಾಯಿ ಇದೆ. ಆದರೆ ಮೊಬೈಲ್ ಅಪ್ಲಿಕೇಷನ್ ಬಳಸಿ ಬುಕ್ ಮಾಡಿದರೆ 90-100 ರೂಪಾಯಿ ವಿಧಿಸಲಾಗುತ್ತದೆ. ಸದ್ಯ ಇದೇ ಪ್ರಯಾಣಕ್ಕೆ 120 ವರೆಗೂ ಚಾರ್ಜ್ ಮಾಡಲಾಗುತ್ತಿದೆ. ಹೀಗೆ ದುಪ್ಪಟ್ಟು ದರ ವಸೂಲಿಗೆ ಇಳಿದರೆ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಮೊಬೈಲ್ ಅಪ್ಲಿಕೇಷನ್ ಬಳಕೆಯನ್ನೇ ನಿಲ್ಲಿಸಬೇಕಿದೆ. ಆಟೋ ಕರೆದು ಬೇಕಿದ್ದ ಸ್ಥಳಕ್ಕೆ ಹೊರಡುವಾಗ ಚಾಲಕನೊಂದಿಗೆ ಚೌಕಾಶಿ ಮಾಡಬಹುದು. ಆದರೆ ಈ ಅಪ್ಲಿಕೇಷನ್‌ಗಳಲ್ಲಿ ಅದಕ್ಕೆ ಅವಕಾಶವೇ ಇಲ್ಲದಾಗಿದೆ.
ರೆಸಿಡೆನ್ಸಿಯಿಂದ ಬೆಳ್ಳಂದೂರಿಗೆ ಕ್ಯಾಬ್ ಬುಕ್ ಮಾಡಲು ಯತ್ನಿಸಿದೆ. 295 ರೂಪಾಯಿ ನಿಗದಿಪಡಿಸಲಾಯಿತು. ಕ್ಯಾಬ್ ಮೂಲಕ ಬುಕ್ ಮಾಡಲು ಮುಂದಾದರೆ ಇಷ್ಟು ಹಣಕ್ಕೆ ತೆಗೆದುಕೊಳ್ಳಲಿಲ್ಲ. ಬಳಿಕ 50 ರೂಪಾಯಿ ಟಿಪ್ ಕೊಡಲು ಒಪ್ಪಿಕೊಂಡು ಬುಕ್ ಮಾಡಿದ ಬಳಿಕ ಬುಕ್ಕಿಂಗ್ ಸ್ವೀಕರಿಸಲಾಯಿತು. ಯಾವಾಗ ಕ್ಯಾಬ್ ಬುಕ್ ಮಾಡಲು ಮುಂದಾದರೂ ಹೀಗೆ ಆಗುತ್ತದೆ ಎಂದು ನಿಹಾರಿಕಾ ಅವರು ತಮಗಾದ ಅನುಭವ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಆಟೋ, ಕ್ಯಾಬ್ ಚಾಲಕರು ಸುಲಿಗೆಕೋರರಾಗಿದ್ದಾರೆ. ಜನರಿಗೆ ಉತ್ತಮ ಸೇವೆ ನೀಡುತ್ತಿದ್ದ ಚಾಲಕರು ತಕ್ಕ ಹಣ ಪಡೆಯುತ್ತಿದ್ದರು. ಆದರೆ ಇಂದು ಅವರ ಸುಲಿಗೆ ಇಳಿದಿದ್ದಾರೆ. ಮಾನವೀಯತೆ ಮರೆದಿದ್ದಾರೆ ಎಂದು ಕೆಲವು ಪ್ರಯಾಣಿಕರು ಆರೋಪಿಸಿದ್ದಾರೆ.
ಪ್ರಯಾಣಿಕರನ್ನು ಆಟೋ ಚಾಲಕರು ಸುಲಿಗೆ ಮಾಡುವ ವಿಚಾರದಲ್ಲಿ ಸಾರಿಗೆ ಇಲಾಖೆ ಪಾತ್ರ ಇಲ್ಲ. ಮೊಬೈಲ್ ಅಪ್ಲಿಕೇಷನ್ ಅನುಸರಿಸಿ ಅಗ್ರಿಗೇಟರ್ ನಿಯಮಗಳ ಅಡಿ ಆಟೋ ಗಳನ್ನು ತರಲು ನಿಯಮ ಮುಂದಾಗಿದ್ದೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications