MEMU Train: ಮೆಟ್ರೋದಂತೆ ಮೆಮು ರೈಲು ಮಾರ್ಗಗಳಲ್ಲಿ ಪ್ರಯಾಣಿಕರ ನಿತ್ಯ ಪರದಾಟ, ಯಾಕೆ!
ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರು ನಮ್ಮ ಮೆಟ್ರೋ (Namma Metro) ಮಾರ್ಗಗಳಲ್ಲಿ ನಿತ್ಯ ಸಂಚಾರ ದಟ್ಟಣೆ, ರೈಲು ಏರಲು ಪ್ರಯಾಣಿಕರ ಪೀಕಲಾಟ ಕಂಡು ಬರುತ್ತಿದೆ. ಇದೇ ರೀತಿ ಬೆಂಗಳೂರಿನಿಂದ ಹೊರಡುವ ಮೆಮು ರೈಲುಗಳ (MEMU Trains) ಪ್ರಮಾಣಿಕರು ಪರದಾಡುವಂತಾಗಿದೆ. ವಿವಿಧ ರೈಲು ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ಥ ಹಾಗೂ ಜನದಟ್ಟಣೆ ಕಂಡು ಬರುತ್ತಿದೆ.
ರೈಲು ರೇಕ್‌ಗಳ ಕೊರತೆಯ ಪರಿಣಾಮವು ಇದೀಗ ನೈಋತ್ಯ ರೈಲ್ವೆಯ ಮೇಲೆ ದುಷ್ಪರಿಣಾಮ ಬೀರಿದೆ. ಬೆಂಗಳೂರಿನಿಂದ ವೈಟ್‌ಫೀಲ್ಡ್ ಮತ್ತು ಹೊಸೂರು ನಡುವಿನ ರೈಲು ಮಾರ್ಗದಲ್ಲಿ ಜನದಟ್ಟಣೆಯ ಹೆಚ್ಚಾಗಿರುತ್ತದೆ. ಇಲ್ಲಿ ರೈಲು ಸೇವೆಯಲ್ಲಿ ಕೊರತೆ ಉಂಟಾಗಿದೆ. ಇಲ್ಲಿ ನಿತ್ಯ ಸೇವೆ ನೀಡುವ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ರೈಲುಗಳು ಕೊರತೆ ಕಂಡು ಬಮದಿದೆ. ಹೀಗಾಗಿ ರೈಲ್ವೆಯು ಕೆಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಪೀಕ್ ಸಮಯದಲ್ಲಿ ಅತ್ಯಧಿಕ ದಟ್ಟಣೆ ಕಂಡು ಬರುತ್ತಿದ್ದು, ಪ್ರಯಾಣಿಕರು ನಿತ್ಯವೂ ಸಂಕಷ್ಟ ಎದುರಿಸುವಂತಾಗಿದೆ.

ಮೆಮು ರೈಲು ಓಡಾಡುವ ವೈಟ್‌ಫೀಲ್ಡ್-ಹೊಸೂರು ರೈಲ್ವೆ ಮಾರ್ಗದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಇದೆ. ಅಗತ್ಯ ಎಲ್ಲ ಮೂಲಸೌಕರ್ಯ ಇದೆ. ಈ ರೈಲುಗಳ ಮೇಲೆ ಜನರ ಅವಲಂಬನೆ ಹೆಚ್ಚಾಗಿದೆ. ಹೀಗಾಗಿಯೇ ಹೆಚ್ಚಿನ ರೈಲುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಅದು ಸಾಧ್ಯವಾಗದಿದ್ದಾಗ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಮಾರ್ಗಗಳಲ್ಲಿ ರೈಲು ಕೊರತೆ, ಪ್ರಯಾಣಿಕರ ಪರದಾಟ
ಇನ್ನೂ ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ರೈಲು ಮಾರ್ಗ ಜೊತೆಗೆ ತುಮಕೂರು, ಹಾಸನ, ಹೊಸೂರು ಸೇರಿದಂತೆ ಇತರೆ ಮಾರ್ಗಗಳ ಮೇಲೂ ರೈಲುಗಳ ಕೊರತೆಯ ದುಷ್ಪರಿಣಾಮ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಓಡಾಡುವ ಲಕ್ಷಾಂತರ ಪ್ರಯಾಣಿಕರಿಗೆ ಪ್ರತಿನಿತ್ಯ ತೊಂದರೆ ಆಗುತ್ತಿದ್ದು, ಪ್ರಯಾಣಿಕರು ಸಮಸ್ಯೆ ನಿವಾರಣೆ ಮಾಡುವಂತೆ ತಿಳಿಸಿದ್ದಾರೆ.

ಮೆಮು ರೇಕ್‌ಗಳ ಕೊರತೆಯ ಕಾರಣಕ್ಕೆ ಬೆಂಗಳೂರು ವಿಭಾಗವು ರೈಲ್ವೆ ಮಂಡಳಿಯಿಂದ ಹೆಚ್ಚುವರಿ ರೈಲುಗಳನ್ನು ಒದಗಿಸುವಂತೆ ಲಿಖಿತವಾಗಿ ಮನವಿ ಮಾಡಿದೆ. ನಗರದ ಕಂಟೋನ್ಮೆಂಟ್-ವೈಟ್‌ಫೀಲ್ಡ್ ಮಾರ್ಗದ ಲೈನ್ ಸಾಮರ್ಥ್ಯದ ಉತ್ತಮವಾಗಿದೆ. ಇನ್ನೂ ಹೊಸೂರು ಮಾರ್ಗದಲ್ಲಿ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತ್ವರಿತವಾಗಿ ಸಮಸ್ಯೆ ಪರಿಹರಿಸಲು ಜನರ ಮನವಿ
ಸದ್ಯ ಮೆಮು ರೈಲುಗಳ ರೇಕ್ ಕೊರತೆ ಕಾರಣಕ್ಕೆ ಇರುವ ರೈಲುಗಳು ಭರ್ತಿಯಾಗಿಯೇ ನಿಲ್ದಾಣಕ್ಕೆ ಬರುತ್ತವೆ. ಇದರಿಂದಾಗಿ ಮತ್ತೊಂದು ರೈಲಿಗೆ ದೀರ್ಘ ಸಮಯ ಕಾಯಬೇಕಾಗುತ್ತದೆ. ಪ್ರಯಾಣಿಕರು ಕಾದು ಕಾದು, ರೈಲಿನೊಳಗೆ, ನಿಲ್ದಾಣದಲ್ಲಿ ನಿಲ್ಲಲು ಜಾಗವಿಲ್ಲದೇ ರೋಸಿ ಹೋಗಿದ್ದಾರೆ. ಇದೆಲ್ಲ ಸಮಸ್ಯೆಗಳು ತ್ವರಿತವಾಗಿ ನೀಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಸಿದರೆ ಈ ಸಮಸ್ಯೆ
ಪೀಕ್ ಸಮಯದಲ್ಲಿ ಈ ರೈಲು ಮಾರ್ಗಗಳಲ್ಲಿ ಹೆಚ್ಚಿನ ಪ್ರಯಾಣಿಕ ದಟ್ಟಣೆ ಕಂಡು ಬರುತ್ತಿದೆ. ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಮರಿಚಿಕೆ ಆಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಖಾಸಗಿ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ರೈಲು ಬಳಸಿದರೆ ಇಷ್ಟೆಲ್ಲ ತೊಂದರೆ ಎದುರಿಸುವಂತಾಗಿದೆ.
ಇದೇ ರೀತಿ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ ಆಗಿವೆ. ಹೊಸ ಮಾರ್ಗ ತೆರಯಲು ಸಜ್ಜಾಗಿವೆ. ಆದರೆ ರೈಲುಗಳು ಕೊರತೆ ಉಂಟಾಗಿದೆ. ಪ್ರಯಾಣಿಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದರಿಂದ ಮೆಟ್ರೋ ನಿಲ್ದಾನಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.












Click it and Unblock the Notifications