Namma Metro Boycott: ಇನ್ನೊಂದು ವಾರದಲ್ಲಿ ಪ್ರಯಾಣಿಕರಿಂದ ಮೆಟ್ರೋ ಸಾರಿಗೆ ಬಹಿಷ್ಕಾರ! ಅಪ್ಡೇಟ್
ಬೆಂಗಳೂರು ಫೆಬ್ರವರಿ 18: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ದರ ಏರಿಕೆಯು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಮೇಲೆ ಮುಗಿಸಬಿದ್ದ ಪ್ರಯಾಣಿಕರು ಇದೀಗ ಒಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ. ಮೆಟ್ರೋ ಸಾರಿಗೆ ದರ ದುಪ್ಪಟ್ಟು ಹೆಚ್ಚಳದಿಂದಾಗಿ ಜನರು BMRCL ಗೆ ಗಡುವು ನೀಡಿದ್ದಾರೆ. ಮುಂದಿನ ಒಂದು ವಾರದಲ್ಲಿ ಮೆಟ್ರೋ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಈ ಸಂಬಂಧ ನಾಳೆ ಬುಧವಾರ (ಫೆಬ್ರವರಿ 18) ಮಹತ್ವದ ಸುದ್ದಿಗೋಷ್ಠಿ ನಡೆಯಲಿದೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆಯು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಗುಡುವು ನೀಡಿದೆ.

ಜನರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ವೇದಿಕೆಯು ಮುಂದಿನ ಭಾನುವಾರದ ಒಳಗೆ ಮೆಟ್ರೋ ದರ ಕಡಿಮೆ ಮಾಡುವಂತೆ ಆಗ್ರಹಿಸಿದ್ದಾರೆ. ಇಳಿಕೆ ಮಾಡದಿದ್ದರೆ ಮೆಟ್ರೋ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಇದೇ ವಿಚಾರವಾಗಿ ನಾಳೆ ಬುಧವಾರ ಸುದ್ದಿಗೋಷ್ಠಿ ನಡೆಸುವುದಲ್ಲದೇ, ಭಾನುವಾರ ಮುಖ್ಯ ಸಮಾವೇಶ ಹಮ್ಮಿಕೊಳ್ಳಲು ವೇದಿಕೆ ನಿರ್ಧರಿಸಿದೆ. ಈ ವೇಳೆ ಮುಂದಿನ ಹೆಜ್ಜ, ಮೆಟ್ರೋ ಬಾಯ್ಕಾಟ್ ಹೋರಾಟ ಕುರಿತು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಗುವುದು. ಎಂದಿನಿಂದ ಬಾಯ್ಕಾಟ್ ಮಾಡಬೇಕು ಎಂದು ನಿರ್ಧಾರ ಪ್ರಕಟಿಸಲಾಗುವುದು ಎಂದು ವೇದಿಕೆ ಸದಸ್ಯರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ 9.20 ಲಕ್ಷಕ್ಕೆ ಏರಿಕೆ ಆಗಿತ್ತು. ಇದೀಗ ಕ್ರಮೇಣ ಆ ಸಂಖ್ಯೆಯಲ್ಲಿ ಇಳಿಕೆ ಆಗುತ್ತಿದೆ. ಲಕ್ಷ ಲಕ್ಷ ಪ್ರಯಾಣಿಕರು ಮೆಟ್ರೋ ಬಿಟ್ಟು, ಸ್ವಂತ ವಾಹನ, ಬಿಎಂಟಿಸಿ ಬಸ್ ಏರುತ್ತಿದ್ದಾರೆ. ಈಗಾಗಲೇ ಆರ್ಥಿಕವಾಗಿ ಮೆಟ್ರೋಗೆ ಹೊಡೆತ ನೀಡಲು ಜನ ಮುಂದಾಗಿದ್ದಾರೆ.
ನಮ್ಮ ಮೆಟ್ರೋ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಬೇಕು. ರಾಜ್ಯ ಸರ್ಕಾರವು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ದರ ಇಳಿಸುಂತೆ ಹೇಳಬೇಕು ಎಂದು ಆಗ್ರಹಿಸಿದೆ. ಇತ್ತ ಮೆಟ್ರೋ ಪ್ರಯಾಣಿಕರ ಸಂಘಟನೆಗಳು ಹೋರಾಟ ತೀವ್ರಗೊಳಿಸಲು ಮುಂದಾಗಿದೆ.
ಇದಲ್ಲದೇ ಐಟಿ ಉದ್ಯೋಗಿಗಳು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಸೇರಿದಂತೆ ಯಾರೆಲ್ಲ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಆ ಎಲ್ಲ ಪ್ರಯಾಣಿಕರಿಗೆ ಬೆಂಗಳೂರು ಉಳಿಸಿ ಸಮಿತಿ ಕರಪತ್ರ ಹಂಚಲು ಮುಂದಾಗಿದೆ. ಮೆಟ್ರೋ ದರ ಏರಿಕೆ ಬರೆ ವಿರುದ್ಧ ಜನ ಜಾಗೃತಿ ಮೂಡಿಸಲು, ಪ್ರಯಾಣಿಕರನ್ನು ಸಂಘಟಿಸಲು ಸಜ್ಜಾಗಿದೆ. ಕರಪತ್ರ ಹಂಚಿ BMRCL ವಿರುದ್ದದ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದೆ.
ಜನರು ಹಾಗೂ ಪ್ರಯಾಣಿಕರ ಹಿರ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ಹೊಂದಾಣಿಕೆಗೆ ಬರಬೇಕು. ಜನರಿಗೆ ಅನುಕೂಲಕರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಈ ಬಗ್ಗೆ ಪ್ರಯಾಣಿಕರೊಬ್ಬರು ಮಾತನಾಡಿ, ಈ ಮೊದಲು ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ಕೇವಲ 50 ರೂಪಾಯಿ ಮಾಡಿದರೆ ಸಾಕಿತ್ತು. ಇದೀಗ ಮಿನಿಮಮ್ 100 ರೂಪಾಯಿ ರಿಚಾರ್ಜ್ ಕೇಳುತ್ತಿದೆ. ದರ ಏರಿಕೆ ಬೆನ್ನಲ್ಲೆ ಇಂತದ್ದೊಂದು ನಿಯಮ ಪರೋಕ್ಷವಾಗಿ ಚಾಲ್ತಿಯಲ್ಲಿದೆ. ಮೊದಲು 50 ರೂಪಾಯಿಗಿಂತ ಹೆಚ್ಚಿನ ಬ್ಯಾಲೆನ್ಸ್ ಕಾರ್ಡ್ ನಲ್ಲಿದ್ದರೆ, ನೀವು ಸ್ಕ್ಯಾನ್ ಗೇಟ್ ಪ್ರವೇಶಿಸಬಹುದಾಗಿದೆ. ಆದರೆ ಇಂದು ಅದಕ್ಕೆ ಅವಕಾಶ ಇಲ್ಲದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications