ಕೋರ್ಟ್‌ ಆದೇಶದಂತೆ ಪಾಕ್ ದಂಪತಿ ಬೆಂಗಳೂರಿನಿಂದ ಗಡಿಪಾರು

ಬೆಂಗಳೂರು, ಮೇ 10 : ಕರ್ನಾಟಕ ಹೈಕೋರ್ಟ್‌ ಆದೇಶದಂತೆ ಪಾಕಿಸ್ತಾನದ ದಂಪತಿ ಬೆಂಗಳೂರು ತೊರೆದಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ದಂಪತಿಯನ್ನು ವಾಘಾ ಗಡಿ ಮೂಲಕ ಗಡಿಪಾರು ಮಾಡಲಿದ್ದಾರೆ.

ಕಿರಣ್ ಗುಲಾಮ್ ಅಲಿ ಮತ್ತು ಖಾಸಿಫ್ ಶಂಶುದ್ದೀನ್ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ದೆಹಲಿಯಿಂದ ಅವರು ವಾಘಾ ಗಡಿ ಪ್ರದೇಶಕ್ಕೆ ತಲುಪಲಿದ್ದು, ಬೆಂಗಳೂರು ಪೊಲೀಸರು ಗಡಿಪಾರು ಮಾಡಿ ವಾಪಸ್ ಬರಲಿದ್ದಾರೆ.

ಅಕ್ರಮವಾಗಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಕಿರಣ್ ಗುಲಾಮ್ ಅಲಿ ಮತ್ತು ಖಾಸಿಫ್ ಶಂಶುದ್ದೀನ್ ದಂಪತಿಯನ್ನು 10 ದಿನದೊಳಗೆ ಗಡಿಪಾರು ಮಾಡುವಂತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿತ್ತು.

high court

ಏನಿದು ಘಟನೆ? : ಕೇರಳದ ಸಿಹಾದ್ ಕರಾಚಿ ಮೂಲದ ಸಮೀರಾ ಎನ್ನುವ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ವಿವಾಹದ ಬಳಿಕ ನಾದಿನಿ ಕಿರಣ್ ಗುಲಾಮ್ ಅಲಿ (ಝೈನಬ್) ಮತ್ತು ಖಾಸಿಫ್ ಶಂಶುದ್ದೀನ್ ದಂಪತಿಯನ್ನು ನೇಪಾಳ ಮಾರ್ಗವಾಗಿ ಅಕ್ರಮವಾಗಿ ಭಾರತಕ್ಕೆ ಕರೆತಂದಿದ್ದ.

ನಾಲ್ವರು ಸಹ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವಿಚಾರ ತಿಳಿದ ಪೊಲೀಸರು ಮೇ 25, 2017ರಂದು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿದ್ದರು.

ಸಿಹಾದ್ ಮತ್ತು ಸಮೀರಾ ಅವರು ವಿವಾಹವಾದ ಕಾರಣ ಅವರಿಗೆ ಭಾರತದಲ್ಲಿ ನೆಲೆಸಲು ಸೆಷನ್ಸ್ ಕೋರ್ಟ್‌ ಅವಕಾಶ ನೀಡಿತ್ತು. ಕಿರಣ್ ಗುಲಾಮ್ ಅಲಿ ಮತ್ತು ಖಾಸಿಫ್ ಶಂಶುದ್ದೀನ್‌ ದಂಪತಿಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದಂಪತಿಗಳು ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು. ಏಪ್ರಿಲ್ 26ರಂದು ಅಂತಿಮ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ದಂಪತಿಗಳನ್ನು ಗಡಿಪಾರು ಮಾಡುವಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ಸೂಚನೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+