ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಕಲಾ ಪರಿಷತ್ : ಜೂನ್‌ 7 ರವರೆಗೆ ಮಹಿಳಾ ಚಿತ್ರಕಲಾ ಪ್ರದರ್ಶನ

By Nayana
|
Google Oneindia Kannada News

ಬೆಂಗಳೂರು, ಜೂನ್ 4: ಆಕಾಂಕ್ಷ ಸಂಸ್ಥೆಯ ಐದನೇ ಆವೃತ್ತಿಯ ಚಿತ್ರಕಲಾ ಪ್ರದರ್ಶನ ಶಿವಾನಂದ್ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜೂನ್ 2ರಂದು ಆರಂಭವಾಗಿದ್ದು ಜೂನ್ 7ರವರೆಗೆ ನಡೆಯಲಿದೆ. ಐವತ್ತು ಮಂದಿ ಮಹಿಳೆಯರು ಸೇರಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದ್ದಾರೆ.

500ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಇನ್‌ಕ್ರೆಡಿಬಲ್ ಇಂಡಿಯಾ ವಿಷಯವನ್ನಾಧರಿಸಿ ಪ್ರದರ್ಶನವನ್ನು ಆಯೋಜಿಸಲಾಗಿದೆ. ಯಾರದೇ ಸಹಾಯವಿಲ್ಲದೆ, ಯಾವುದೇ ತರಗತಿಗಳಿಗೆ ಹೋಗದೆ ಸ್ವತಃ ತಾವೇ ಚಿತ್ರಕಲೆಯನ್ನು ಕಲಿತು ಅದನ್ನೇ ಹವ್ಯಾಸವಾಗಿ ಮಾಡಿಕೊಂಡಿರುವ ಮಹಿಳೆಯರನ್ನು ಅಕಾಂಕ್ಷ ಸಂಸ್ಥೆಯು ಉತ್ತೇಜಿಸುತ್ತದೆ.

Painting exhibition by women on Incredible India

ಕಲಾ ಸ್ಪರ್ಧೆ, ಹಿರಿಯ ಕಲಾವಿದರೊಂದಿಗೆ ಸಂವಾದ, ಚಿತ್ರಕಲಾ ಪ್ರದರ್ಶನವಿರುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು ಎನ್ನುವ ಆಶಯದೊಂದಿಗೆ ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ. ಅದರಂತೆ ಈ ಸಂಸ್ಥೆಯಲ್ಲಿ ಒಂದೇ ರೀತಿಯ ಮನಸ್ಥಿತಿಯುಳ್ಳ ಮಹಿಳೆಯರಿದ್ದಾರೆ. ಉಷಾ ರೈ, ಕವಿತಾ ಪ್ರಸನ್ನ, ಶ್ಯಾಮಲಾ ರಮಾನಂದ್ ಅವರು ಅಕ್ಟೋಬರ್ 2012ರಲ್ಲಿ ಮೊದಲ ಬಾರಿಗೆ ಈ ಸಂಸ್ಥೆಯನ್ನು ಹುಟ್ಟುಹಾಕಲು ಆಲೋಚಿಸಿ ಅದನ್ನು ಕಾರ್ಯ ರೂಪಕ್ಕೆ ತಂದಿದ್ದರು.

Painting exhibition by women on Incredible India
English summary
Firth edition of painting exhibition by Akamksha organization with the theme of Incredible India by 50 women at Chitrakala is organized till June 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X