ಪೈಲ್ವಾನ್ ಸಿನಿಮಾ ಲೀಕ್ ಮಾಡಿದ ಆರೋಪಿ ರಾಕೇಶ್ ಹೇಳಿದ್ದೇನು?

ಬೆಂಗಳೂರು, ಸೆಪ್ಟೆಂಬರ್ 20 : ಕಿಚ್ಚ ಸುದೀಪ್ ಅಭಿನಯದ, ಕಳೆದ ವಾರ ಬಿಡುಗಡೆಗೊಂಡ ಪೈಲ್ವಾನ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಸಿನಿಮಾ ಕಾಪಿರೈಟ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಯುವಕನನ್ನು ಬೆಂಗಳೂರಿನ ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಎಲ್. ರಾಕೇಶ್ ಎಂದು ಗುರುತಿಸಲಾಗಿದೆ. 19 ವರ್ಷ ವಯಸ್ಸಿನ ರಾಕೇಶ್ ಇಮಚೇನಹಳ್ಳಿ ನಿವಾಸಿ. ಸೆಪ್ಟೆಂಬರ್ 19ರಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನೆಲಮಂಗಲ ತಾಲೂಕಿನ ಇಮೇಚನಹಳ್ಳಿಯಲ್ಲಿ ರಾಕೇಶ್ ಬಂಧಿಸಲಾಗಿದೆ.

ಪೈಲ್ವಾನ್ ಚಿತ್ರದ ಕಾಪಿರೈಟ್ ಮಾಲೀಕರ ಅನುಮತಿ ಪಡೆಯದೇ ಸಂಪೂರ್ಣ ಚಲನಚಿತ್ರ ವೀಕ್ಷಿಸುವ ಲಿಂಕ್‌ ಅನ್ನು ಸಾರ್ವಜನಿಕವಾಗಿ ತನ್ನ ಫೇಸ್ ಬುಕ್ ಖಾತೆಯಲ್ಲಿ ರಾಕೇಶ್ ಪೋಸ್ಟ್ ಮಾಡಿಕೊಂಡಿದ್ದ ಎಂಬುದು ಆರೋಪವಾಗಿದೆ.

ಚಿತ್ರ ವೀಕ್ಷಣೆ ಲಿಂಕ್ ಕೇಳಿದ ಎಲ್ಲರಿಗೂ ಅದನ್ನು ಕಳುಹಿಸಿದ ಆರೋಪ ರಾಕೇಶ್ ಮೇಲಿದೆ. ರಾಕೇಶ್ ಬಂಧಿಸಿದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮೊಬೈಲ್‌ ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ರ ಬಿಡುಗಡೆ ದಿನವೇ ಲಿಂಕ್ ಶೇರ್

ಚಿತ್ರ ಬಿಡುಗಡೆ ದಿನವೇ ಲಿಂಕ್ ಶೇರ್

Rakesh Virat (Yuva) ಎಂಬ ಹೆಸರಿನಲ್ಲಿ ಆರೋಪಿ ಫೇಸ್ ಬುಕ್ ಖಾತೆಯನ್ನು ಹೊಂದಿದ್ದಾನೆ. ಚಿತ್ರ ಬಿಡುಗಡೆಯಾದ ದಿನವೇ ಚಲನಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾದದ ಲಿಂಕ್‌ ಅನ್ನು ಫೇಸ್‌ ಬುಕ್‌ ಖಾತೆಯಲ್ಲಿ ಹೊಂದಿದ್ದ. ಫೇಸ್ ಬುಕ್ ಸ್ನೇಹಿತರು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ.

ಇನ್‌ ಬಾಕ್ಸ್ ಮಾಡಿ ಎಂದು ಹೇಳಿಕೊಂಡಿದ್ದ

ಇನ್‌ ಬಾಕ್ಸ್ ಮಾಡಿ ಎಂದು ಹೇಳಿಕೊಂಡಿದ್ದ

ತನ್ನ ಫೇಸ್‌ ಬುಕ್ ಸ್ಟೋರಿಯಲ್ಲಿ ಸ್ಟ್ರೀನ್ ಶಾಟ್‌ ವೊಂದನ್ನು ಹಾಕಿದ್ದ ಆರೋಪಿ ಚಲನಚಿತ್ರದ ಲಿಂಕ್ ಪಡೆಯಲು ಇಚ್ಛಿಸುವವರು ಇನ್‌ ಬಾಕ್ಸ್‌ಗೆ ಮೆಸೇಜ್ ಮಾಡುವಂತೆ ಪ್ರಕಟಣೆ ಹಾಕಿದ್ದ.

ಇಬ್ಬರಿಗೆ ಲಿಂಕ್ ಶೇರ್

ಇಬ್ಬರಿಗೆ ಲಿಂಕ್ ಶೇರ್

ಇಬ್ಬರು ಫೇಸ್‌ಬುಕ್ ಸ್ನೇಹಿತರಿಗೆ ಸಂಪೂರ್ಣ ಚಿತ್ರವನ್ನು ವೀಕ್ಷಣೆ ಮಾಡಲು ಲಿಂಕ್ ಶೇರ್ ಮಾಡಿದ್ದ. ಚಿತ್ರದ ನಿರ್ಮಾಪಕರು ನೀಡಿದ ದೂರಿನ ಅನ್ವಯ ಸೆಪ್ಟೆಂಬರ್ 19ರಂದು ರಾಕೇಶ್‌ನನ್ನು ನೆಲಮಂಗಲದಲ್ಲಿ ಬಂಧಿಸಲಾಗಿದೆ.

ದೂರಿನಲ್ಲಿ ಏನಿದೆ?

ದೂರಿನಲ್ಲಿ ಏನಿದೆ?

16/9/2019ರಂದು ಪೈಲ್ವಾನ್ ಸಿನಿಮಾ ನಿರ್ಮಾಪಕರು ಕಾಪಿ ರೈಟ್ ಮಾಲೀಕರ ಅನುಮತಿ ಪಡೆಯದೇ ಪೈಲ್ವಾನ್ ಚಿತ್ರದ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡು ಸಂಪೂರ್ಣ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ನಷ್ಟ ಮಾಡಿರುತ್ತಾರೆ ಎಂದು ಆರೋಪಿಯ ವಿರುದ್ಧ ದೂರು ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+