ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಪ್ರತ್ಯೇಕ ಮುನ್ಸಿಪಲ್ ವಲಯ ರಚಿಸುವಂತೆ ಒಆರ್‌ಆರ್‌ ಸಂಘದ ಆಗ್ರಹ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 13: ಬೆಂಗಳೂರು ಐಟಿ ಕಾರಿಡಾರ್‌ನಲ್ಲಿನ ಮೂಲಸೌಕರ್ಯ ಸಮಸ್ಯೆಗಳು ಬ್ರಾಂಡ್ ಬೆಂಗಳೂರಿನ ಹೆಸರಿನ ಬಗ್ಗೆ ಟೀಕೆಗಳು ವ್ಯಕ್ತವಾದ ನಂತರ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಎ) ಸದಸ್ಯರು ಐಟಿ ಸಚಿವ ಸಿಎನ್ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿ 17 ಕಿಮೀ ವ್ಯಾಪ್ತಿಯನ್ನು ಪ್ರತ್ಯೇಕ ಪುರಸಭೆಯ ವಲಯವಾಗಿ ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಮಳೆಯಿಂದ ತಮಗೆ ಆದ ನಷ್ಟದ ಬಗ್ಗೆ ಹೊರ ವರ್ತುಲ ರಸ್ತೆ ಕಂಪೆನಿಗಳ ಸಂಘ (ORRCA) ಸದಸ್ಯರು ಕರ್ನಾಟಕ ಸರ್ಕಾರದೊಂದಿಗೆ ತಮ್ಮ ಅಳಲು ಹಾಗೂ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಫಾರ್ಚೂನ್ 500 ಕಂಪನಿಗಳು ಮತ್ತು ಭಾರತೀಯ ಯುನಿಕಾರ್ನ್‌ಗಳ ಕಂಪೆನಿಗಳನ್ನು ಹೊಂದಿರುವ ಐಟಿ ಕಾರಿಡಾರ್‌ಗೆ ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿಸುವಂತೆ ಹೊರಬಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ 391 ಕೋಟಿ ರೂಪಾಯಿ ನಷ್ಟ ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ 391 ಕೋಟಿ ರೂಪಾಯಿ ನಷ್ಟ

2027ಕ್ಕೆ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಪ್ರತ್ಯೇಕ ಪುರಸಭೆಯ ವಲಯ ರಚನೆಯ ಮೇಲ್ವಿಚಾರಣೆಗೆ ತಜ್ಞರ ಸಮಿತಿಯನ್ನು ಕರೆಯಬೇಕು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಹೊಸ ವಲಯವು ವಿಶ್ವ ದರ್ಜೆಯ ತಂತ್ರಜ್ಞಾನ ಕಾರಿಡಾರ್ ಆಗಿ ಪರಿವರ್ತಿಸಲು ಸ್ಪಷ್ಟವಾದ ಐದು ವರ್ಷಗಳ ಯೋಜನೆಯನ್ನು ಹೊಂದಿರಬೇಕು ಎಂದು ಹೇಳಿದೆ.

ಹೊಸ ಮುನ್ಸಿಪಲ್ ವಲಯದ ಆಡಳಿತದ ನಿರ್ವಹಣೆಯು ಸಾರ್ವಜನಿಕ ಖಾಸಗಿ ಸಹಭಾಗಿತ್ವವನ್ನು ಒಳಗೊಂಡಿರಬೇಕು. ಅದರ ಜವಾಬ್ದಾರಿ ನಿರ್ವಹಣೆ ಮತ್ತು ಐಟಿ/ ಬಿಟಿ ಸಚಿವಾಲಯದ ಮೇಲ್ವಿಚಾರಣೆಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದೆ. ಇದು ಟೆಕ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನವನ್ನು ಸಹ ಕೋರಿದೆ.

225 ಕೋಟಿ ರೂಪಾಯಿಗಳ ನಷ್ಟ

225 ಕೋಟಿ ರೂಪಾಯಿಗಳ ನಷ್ಟ

ಒಆರ್‌ಆರ್‌ಸಿಎ ಕಂಪೆನಿಗಳ ಸಂಘದ ಸದಸ್ಯರು ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗಸ್ಟ್ 30 ರಂದು ನಮಗೆ ಮೂಲಸೌಕರ್ಯಗಳ ಕೊರೆತೆ ಇದೆ. ಇಲ್ಲಿ ಕಳಪೆ ಮೂಲಸೌಕರ್ಯಗಳಿಂದ ನಮಗೆ ತೊಂದರೆ ಆಗುತ್ತಿದೆ. ನಿರಂತರವಾಗಿ ಸುರಿದ ಮಳೆಯಿಂದ ತಮಗೆ 225 ಕೋಟಿ ರೂಪಾಯಿಗಳ ನಷ್ಟ ಆಗಿದೆ ಎಂದು ಪತ್ರ ಬರೆದಿದ್ದರು.

ಬೆಂಗಳೂರಿನಲ್ಲಿ ಮತ್ತೆ ವರ್ಕ್‌ ಪ್ರಮ್‌ ಹೋಮ್‌ ಘೋಷಿಸಿದ ಕಂಪೆನಿಗಳುಬೆಂಗಳೂರಿನಲ್ಲಿ ಮತ್ತೆ ವರ್ಕ್‌ ಪ್ರಮ್‌ ಹೋಮ್‌ ಘೋಷಿಸಿದ ಕಂಪೆನಿಗಳು

ದೀರ್ಘಕಾಲೀನ ಪರಿಹಾರ ಕೈಗೊಳ್ಳಿ

ದೀರ್ಘಕಾಲೀನ ಪರಿಹಾರ ಕೈಗೊಳ್ಳಿ

ಬೆಂಗಳೂರು ನಗರದಾದ್ಯಂತ ಸುಗಮ ಸಂಚಾರಕ್ಕಾಗಿ ಈ ಕಾರಿಡಾರ್ ಯೋಜನೆಯನ್ನು ಕಾರ್ಯಗತಗೊಳಿಸುವುದು ಮತ್ತು ಹೊಸೂರು ರಸ್ತೆ, ಐಟಿಪಿಎಲ್ ಮತ್ತು ಸಿಲ್ಕ್ ಬೋರ್ಡ್, ಸರ್ಜಾಪುರ ಮತ್ತು ಕೆಆರ್ ಪುರಂನಂತಹ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ 2ರಿಂದ 3 ವರ್ಷಗಳ ಕಾಲಮಿತಿಯೊಳಗೆ ಮಧ್ಯಮ ಅವಧಿಯ ಮೂಲಸೌಕರ್ಯ ನೀಲನಕ್ಷೆಯೊಂದಿಗೆ ಕೆಲವು ದೀರ್ಘಕಾಲೀನ ಪರಿಹಾರಗಳನ್ನು ಕೈಗೊಳ್ಳುವಂತೆ ಸಂಘವು ತಿಳಿಸಿದೆ.

ಸುಗಮ ಸಂಚಾರಕ್ಕೆ ಮನವಿ

ಸುಗಮ ಸಂಚಾರಕ್ಕೆ ಮನವಿ

ಹೊರ ವರ್ತುಲ ರಸ್ತೆ ಕಂಪೆನಿಗಳ ಸಂಘ ಕೆರೆ, ರಾಜಕಾಲುವೆಗಳ ನಿರ್ವಹಣೆಗೆ ಸಮಗ್ರ ಯೋಜನೆ ರೂಪಿಸುವಂತೆಯೂ ಕೋರಿದೆ. ಅತಿಕ್ರಮಣ ತೆರವು ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮಗಳನ್ನು ಕೈಗೊಳ್ಳು ಮನವಿ ಮಾಡಿದೆ. ಈ ಕಾರಿಡಾರ್‌ನ ಅಗತ್ಯಗಳನ್ನು ಪೂರೈಸಲು ನಾಗರಿಕ ಸೌಕರ್ಯಗಳನ್ನು ಸುಧಾರಣೆ ಮಾಡುವಂತಹ ಸಮಗ್ರ ಯೋಜನೆಯನ್ನು ಪ್ರತಿಪಾದಿಸಿದೆ.

ಮೆಟ್ರೋ ಯೋಜನೆಯನ್ನು ಮುಗಿಸುವಂತೆ ಮನವಿ

ಮೆಟ್ರೋ ಯೋಜನೆಯನ್ನು ಮುಗಿಸುವಂತೆ ಮನವಿ

ಮುಂದಿನ ಎರಡು ತಿಂಗಳುಗಳ ತಕ್ಷಣದ ಆದ್ಯತೆಯಾಗಿ ಪ್ರಮುಖ ಐಟಿ ಪಾರ್ಕ್ ಇಕೋಸ್ಪೇಸ್ ಮತ್ತು ಪ್ರಭಾವಿತ ರಾಜಕಾಲುವೆಗಳ ಪುನರುಜ್ಜೀವನಕ್ಕೆ ಸಂಘವು ಸಲಹೆ ನೀಡಿದೆ. ಇದು ಒಆರ್‌ಆರ್‌ ಮೆಟ್ರೋ ಯೋಜನೆಯನ್ನು ಮುಗಿಸುವಂತೆ ಸರ್ಕಾರವನ್ನು ಕೇಳಿಕೊಂಡಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮನ್ವಯ ಸಮಿತಿ ಭಾಗವಾಗಿ ಸಂಘವು ಭಾಗಿಯಾಗಬೇಕೆಂದು ಕೋರಿದೆ. ಇದು ಒಆರ್‌ಆರ್‌ನಲ್ಲಿ ಹೆಚ್ಚುವರಿ ಟ್ರಾಫಿಕ್ ಸಿಬ್ಬಂದಿಯನ್ನು ನಿಯೋಜಿಸಲು ಮತ್ತು ಹೊರ ವರ್ತುಲ ರಸ್ತೆಯ ಮುಖ್ಯ ಕ್ಯಾರೇಜ್ ಮತ್ತು ಸರ್ವಿಸ್ ರಸ್ತೆಗಳ ನಿರ್ವಹಣೆಯ ಹೊರತಾಗಿ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣವನ್ನು ತೆರೆಯಲು ಕೋರಿದೆ.

English summary
Infrastructural issues in the Bangalore IT Corridor After criticism over the name Brand Bengaluru, members of the Outer Ring Road Companies Association (ORRCA) have met IT Minister CN Aswath Narayan and demanded that the 17 km stretch be declared a separate municipal zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X