• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ಕಿಡ್ಸ್ ಶಾಲೆಯಲ್ಲೇ ಅತ್ಯಾಚಾರ ನಡೆದಿದೆ: ಐಒ

By Mahesh
|

ಬೆಂಗಳೂರು, ಅ.26: ಆರ್ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆ ನರ್ಸರಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದು ಶಾಲೆ ಆವರಣದಲ್ಲೇ ಎಂಬುದು ದೃಢಪಟ್ಟಿದೆ. ಆರೋಪಿ ಗುಂಡಣ್ಣ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತನಿಖಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ ನಿಯಮ ಬಾಹಿರವಾಗಿ ಶಾಲೆ ನಡೆಸುತ್ತಿದ್ದ ಆರೋಪದ ಮೇಲೆ ಆರ್ಕಿಡ್ಸ್ ಶಾಲಾ ಸಮೂಹ ಕಾರ್ಯದರ್ಶಿ ಕೆ.ಆರ್.ಕೆ.ರೆಡ್ಡಿ ಅವರನ್ನು ಬಂಧಿಸಲಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಉಲ್ಲಂಘನೆ ಮಾಡಿ ಶಾಲೆ ನಡೆಸುತ್ತಿರುವ ಆರ್ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. [ಶಾಲೆ ವಿರುದ್ಧ ಕ್ರಿಮಿನಲ್ ಕೇಸ್]

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಂದಿಯನ್ನು ವಿಚಾರಣೆಗೊಳಪಡಿಸಿ, ಸಂತ್ರಸ್ತ ಬಾಲೆಯಿಂದ ಕಷ್ಟಪಟ್ಟು ಹೇಳಿಕೆ(ಮಾನಸಿಕ ತಜ್ಞರ ನೆರವನ್ನು ಪಡೆಯಲಾಗಿತ್ತು) ಪಡೆದುಕೊಂಡ ಮೇಲೆ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕಚೇರಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ 45 ವರ್ಷ ವಯಸ್ಸಿನ ಗುಂಡಣ್ಣನನ್ನು ಆರೋಪಿಯಾಗಿ ಜಾಲಹಳ್ಳಿ ಠಾಣೆ ಪೊಲೀಸರು ಪರಿಗಣಿಸಿದ್ದಾರೆ.

ಜಾಲಹಳ್ಳಿಯ ಎ.ಕೆ ಕಾಲೋನಿಯ ನಿವಾಸಿಯಾಗಿರುವ ಗುಂಡಣ್ಣ ಕಳೆದ ಎರಡು ವರ್ಷಗಳಿಂದ ಆರ್ಕಿಡ್ಸ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ತನಿಖೆ ಆರಂಭಗೊಂಡ ದಿನದಿಂದಲೂ ಗುಂಡಣ್ಣನ ಮೇಲೆ ಸಂಶಯ ವ್ಯಕ್ತವಾಗಿತ್ತು. [ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ]

ಆದರೆ, ಸಂತ್ರಸ್ತ ಮಗುವಿನ ಹೇಳಿಕೆ ಮುಖ್ಯವಾಗಿತ್ತು. ಗುಂಡಣ್ಣನ ಫೋಟೋ ಗುರುತಿಸಿದ ಮಗು, ಈ ಅಂಕಲ್ ನನಗೆ ಹರ್ಟ್ ಮಾಡಿದರು ಎಂದು ಹೇಳಿದಳು. ನಂತರ ಗುಂಡಣ್ಣನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಬಳಿಕ ಆತನೇ ಆರೋಪಿ ಎಂಬುದು ನಿರ್ಧರಿಸಲಾಯಿತು ಎಂದು ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಹೇಳಿದ್ದಾರೆ. [ವಿಬ್ ಗಯಾರ್ ಶಾಲೆ ನೀಚ ಕೃತ್ಯ]

ಸಿಸಿಬಿ ಪೊಲೀಸರು ಗುಂಡಣ್ಣನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಸಿಆರ್ ಪಿಸಿ ಸೆಕ್ಷನ್ 164 ಅನ್ವಯ ಸಂತ್ರಸ್ತೆ, ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಶಾಲಾ ಅವರಣದಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಗುಂಡಣ್ಣ ತಪ್ಪೊಪ್ಪಿಕೊಂಡಿದ್ದಾನೆ. ತನಿಖೆ ಇನ್ನೂ ಮುಂದುವರೆದಿದ್ದು ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಎಂಎನ್ ರೆಡ್ಡಿ ಹೇಳಿದರು.[ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿ]

ಪ್ರಕರಣ ಸಂಬಂಧ ಜಾಲಹಳ್ಳಿ ಠಾಣೆ ಪೊಲೀಸರು ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆಗಾಗಿರುವ ಪೋಕ್ಸೋ ಕಾಯ್ಡೆ 2012ರ ಸೆಕ್ಷನ್ 4, 6ರ ಅಡಿಯಲ್ಲಿ, ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿ(ಮಲ್ಲೇಶ್ವರ) ಸಾರಾ ಫಾತಿಮಾ ನೇತೃತ್ವದಲ್ಲಿ ತಂಡ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Orchids, The International School's office assistant Gundanna (45) raped the three-and-a-half-year-old girl inside the school at Jalahalli said Investigation Officer. Gundanna, a resident of A.K. Colony in Jalahalli and an employee of the school for the last two years, was arrested on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more