ಶರಣಗೌಡ ಹಾಗೂ ಯಡಿಯೂರಪ್ಪ ನಡುವೆ ನಡೆದ ಸಂಭಾಷಣೆ ಏನು?
Recommended Video

ಬೆಂಗಳೂರು,ಫೆಬ್ರವರಿ 8:ಗುರುಮಠಕಲ್ ನ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಒಡ್ಡಿದ ಆಮಿಷದ ಆಡಿಯೋವನ್ನು ಇಂದು ಬಿಡುಗಡೆ ಮಾಡಲಾಗಿದೆ.
ಹಾಗಾದರೆ ಆ ಆಡಿಯೋದಲ್ಲಿ ಏನೇನು ಸಂಭಾಷಣೆ ನಡೆದಿತ್ತು ಎನ್ನುವುದರ ಬಗ್ಗೆ ಶರಣಗೌಡ ಅವರೇ ವಿವರಿಸಿದ್ದಾರೆ.
ರಾತ್ರಿ 11.30ರ ಸುಮಾರಿಗೆ ಒಂದು ಕರೆ ಬಂತು ಆ ಕಡೆಯಿಂದ ಯಡಿಯೂರಪ್ಪ ಅವರು ನಿಮ್ಮ ಜೊತೆ ಮಾತನಾಡ್ಬೇಕಂತೆ ಎಂದು ಹೇಳಿದರು ನಾನು ಕರೆಯನ್ನು ಕಟ್ ಮಾಡಿದೆ. ಬಳಿಕ ಎರಡನೇ ಬಾರಿಯೂ ಅದೇ ನಂಬರ್ ನಿಂದ ಕಾಲ್ ಬಂದಾಗ ರಿಸೀವ್ ಮಾಡಲಿಲ್ಲ, ಮೂರನೇ ಬಾರಿಗೆ ಬೇರೆ ನಂಬರ್ ನಿಂದ ಕಾಲ್ ಬಂದಾಗ ರಿಸೀವ್ ಮಾಡಿದೆ. ಆಗ ಅತ್ತ ಕಡೆಯಿಂದ ಯಡಿಯೂರಪ್ಪ ಅವರು ಮಾತನಾಡಿ ನಾನು ದೇವದುರ್ಗ ಐಬಿಯಲ್ಲಿದ್ದೇನೆ ಇಲ್ಲಿಗೆ ನೀವು ಬರಬೇಕು ಎಂದು ಹೇಳಿದರು.

ಬಳಿಕ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ನಾನೇ ಕಾಲ್ ಮಾಡಿ ಆ ಕರೆಯನ್ನು ಎಚ್‌ಡಿಕುಮಾರಸ್ವಾಮಿಯವರಿಗೆ ಕನೆಕ್ಟ್ ಮಾಡಿದ್ದೆ ಎಲ್ಲವನ್ನೂ ಅವರೂ ಕೂಡ ಕೇಳಿಸಿಕೊಂಡಿದ್ದಾರೆ.
ಸಂಜೆ 12.20ರ ಸುಮಾರಿಗೆ ಯಾದಗಿರಿಯಿಂದ ದೇವದುರ್ಗ ಐಬಿಗೆ ಹೋದೆ ಅಲ್ಲಿ ಒಬ್ಬರು ಪತ್ರಕರ್ತರು, ಹಾಸನ ಶಾಸಕ ಪ್ರೀತಂ ಗೌಡ ಇದ್ದರು,
25 ಕೋಟಿ ಹಣ ನೀಡುತ್ತೇವೆ ಅದನ್ನು ಪಡೆದು ಬಾಂಬೆಗೆ ಹೋಗಿ ಉತ್ತಮ ಜೀವನ ಮಾಡಿ, ನಾಲ್ಕು ವರ್ಷ ಆರಾಮಾಗಿರಿ ಎಂದು ಹೇಳಿದರು. ಬಳಿಕ ನನಗ್ಯಾಕೆ ಇಷ್ಟು ಹಣ ಕೊಡುತ್ತಿದ್ದೀರಾ ಎಂದು ಕೇಳದ್ದಕ್ಕೆ ಐವತ್ತು ಕೋಟಿ ಕೊಟ್ಟು ಸ್ಪೀಕರ್‌ನ್ನೇ ಬುಕ್ ಮಾಡಿದ್ದೇವೆ ಈ 25 ಕೋಟಿ ಯಾವ ಲೆಕ್ಕ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications