ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿ-ಬಿಸಿ ಈರುಳ್ಳಿ ಪಕೋಡಾ ನಾಲಿಗೆ ಮಾತ್ರವಲ್ಲ ಜೇಬು ಸುಡುತ್ತಿದೆ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 04 : ತಂಪಾದ ಹವಾಮಾನ, ಜಿಟಿ-ಜಿಟಿ ಮಳೆ, ತಣ್ಣೆಯನ ಗಾಳಿ. ಸಂಜೆಯಾಗುತ್ತಲೇ ಹೊಟ್ಟೆ ಚುರುಕ್ ಎಂದಾಗ ಬಜ್ಜಿ ಸೆಂಟರ್, ಪಾನಿಪೂರಿ, ಗೋಬಿ ಮಂಚೂರಿ ಜನರನ್ನು ಕೈ ಬೀಸಿ ಕರೆಯುತ್ತದೆ. ಆದರೆ, ಬಜ್ಜಿ ಅಂಗಡಿ ಮುಂದೆ ನಿಲ್ಲುವ ಮೊದಲು ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳಬೇಕು.

ಈರುಳ್ಳಿ ಬೆಲೆ ಹೊಸ-ಹೊಸ ದಾಖಲೆಗಳನ್ನು ಬರೆಯುತ್ತಿದೆ. ದೇಶದ ವಿವಿಧ ನಗರಗಳಲ್ಲಿ ಕೆ.ಜಿ. ಈರುಳ್ಳಿ ಬೆಲೆ 120ರ ಗಡಿ ದಾಟಿದೆ. 150 ರೂ. ತನಕ ತಲುಪಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈರುಳ್ಳಿ ಬೆಲೆ ಏರಿಕೆ ಬಿಸಿ ಈರುಳ್ಳಿ ಪಕೋಡಾಕ್ಕೂ ತಟ್ಟಿದೆ.

ಈರುಳ್ಳಿ ಸಂಗ್ರಹಿಸಿಟ್ಟರೆ ಭಾರಿ ದಂಡ: ವ್ಯಾಪಾರಿಗಳೇ ಎಚ್ಚರ ಎಚ್ಚರ! ಈರುಳ್ಳಿ ಸಂಗ್ರಹಿಸಿಟ್ಟರೆ ಭಾರಿ ದಂಡ: ವ್ಯಾಪಾರಿಗಳೇ ಎಚ್ಚರ ಎಚ್ಚರ!

ಬೆಂಗಳೂರಿನಲ್ಲಿ ಸಂಜೆ ಈರುಳ್ಳಿ ಪಕೋಡಾ ಸವಿಯಲು ಹೊರಟರೆ ಬಿಸಿ-ಬಿಸಿ ಪಕೋಡಾ ನಾಲಿಗೆ ಜೊತೆ ಜೇಬನ್ನು ಸುಡಲಿದೆ. ಈರುಳ್ಳಿ ದರ ಹೆಚ್ಚಳವಾಗುತ್ತಿದ್ದಂತೆ ಬಜ್ಜಿ ಸೆಂಟರ್‌ಗಳಲ್ಲಿ ಈರುಳ್ಳಿ ಪಕೋಡಾದ ದರವೂ ಹೆಚ್ಚಳವಾಗಿದೆ.

ಈರುಳ್ಳಿ ಹರಾಜು: ಬೆಲೆ ಪ್ರತಿ ಕ್ವಿಂಟಾಲ್ ಗೆ ಎಷ್ಟೊಂದಾ? ಈರುಳ್ಳಿ ಹರಾಜು: ಬೆಲೆ ಪ್ರತಿ ಕ್ವಿಂಟಾಲ್ ಗೆ ಎಷ್ಟೊಂದಾ?

Onion Pakoda Price Hikes In Bengaluru

ಸಾಮಾನ್ಯವಾಗಿ ಈರುಳ್ಳಿ ಪಕೋಡಾ ದರ ಕೆ.ಜಿ.ಗೆ 200 ರೂ. ಇತ್ತು. ಈರುಳ್ಳಿ ದರ ಹೆಚ್ಚಳವಾಗುತ್ತಿದ್ದಂತೆ ಕೆ. ಜಿ. ಪಕೋಡಾ ದರವನ್ನು 240 ರೂ. ಗೆ ಏರಿಕೆ ಮಾಡಲಾಗಿದೆ. ದರ ಹೆಚ್ಚಳವಾದರೂ ಜನರ ಪಕೋಡಾ ಪ್ರೀತಿ ಕಡಿಮೆ ಆಗಿಲ್ಲ, ಮಾರಾಟದಲ್ಲಿಯೂ ಇಳಿಮುಖವಾಗಿಲ್ಲ.

ಬೆಂಗಳೂರು ಬಿಜೆಪಿ ಕಚೇರಿ ಎದುರು 'ಪಕೋಡಾ' ಪ್ರತಿಭಟನೆ ಬೆಂಗಳೂರು ಬಿಜೆಪಿ ಕಚೇರಿ ಎದುರು 'ಪಕೋಡಾ' ಪ್ರತಿಭಟನೆ

"ಈರುಳ್ಳಿ ದರ ಹೆಚ್ಚಳವಾದರೂ ಈರುಳ್ಳಿ ಪಕೋಡಾಕ್ಕೆ ಬೇಡಿಕೆ ತಗ್ಗಿಲ್ಲ. ದರ ಹೆಚ್ಚಳದ ಬಳಿಕ ಕೆ.ಜಿ. ಪಕೋಡಾದ ದರವನ್ನು 40 ರೂ. ಹೆಚ್ಚಳ ಮಾಡಲಾಗಿದೆ" ಎನ್ನುತ್ತಾರೆ ಬಸವನಗುಡಿಯ ವಿನಾಯಕ ಬಜ್ಜಿ ಸೆಂಟರ್ ಮಾಲೀಕರು.

ಈರುಳ್ಳಿ ದೋಸೆ ಕಥೆ ಏನು?: ಈರುಳ್ಳಿ ದರ ಹೆಚ್ಚಳವಾಗಿದ್ದು ಈರುಳ್ಳಿ ದೋಸೆ ಪ್ರಿಯರ ಆಕ್ರೋಶಕ್ಕೂ ಕಾರಣವಾಗಿದೆ. ಹೋಟೆಲ್‌ಗಳ ಮೆನುವಿನಿಂದ ಈರುಳ್ಳಿ ದೋಸೆ ಕಾಣೆಯಾಗುತ್ತಿದೆ. ಇಲ್ಲವೇ ದರ ಹೆಚ್ಚಳವಾಗಿದೆ.

ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ ದರ 55, 60, 90 ರೂ. ತನಕ ಇದೆ. ಈರುಳ್ಳಿ ದರ ಹೆಚ್ಚಳವಾದರೂ ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆಗೆ ಬೇಡಿಕೆ ಇದ್ದೇ ಇದೆ. ಸ್ವಿಗ್ಗಿ, ಝೋಮೆಟೋದಲ್ಲಿಯೂ ದೋಸೆಗಳ ಪಟ್ಟಿಯಲ್ಲಿ ಈರುಳ್ಳಿ ದೋಸೆಯೂ ಸೇರಿದೆ.

ಈರುಳ್ಳಿ ದರ ಮಾತ್ರವಲ್ಲ ಮೊಟ್ಟೆ ದರವೂ ಏರಿಕೆಯಾಗಿದೆ ಎನ್ನುತ್ತಾರೆ ರಸ್ತೆ ಬದಿ ಎಗ್ ರೈಸ್ ಸವಿಯುವವರು. 4.50 ರೂ. ಇದ್ದ ಮೊಟ್ಟೆ ದರ 5ರೂ.ಗೆ ಹೆಚ್ಚಳವಾಗಿದೆ. ಎಗ್‌ ರೈಸ್ ಮೇಲೆ ಹೆಚ್ಚಿನ ಈರುಳ್ಳಿ ಹಾಕಿ ಎಂದರೆ ಆಗಲ್ಲ ಎನ್ನುತ್ತಿದ್ದಾರೆ ವ್ಯಾಪಾರಿಗಳು.

English summary
After Onion prices are witnessing an upward trend again onion pakoda price hiked in Bengaluru city. 1 kg pakoda price 240 at Basavanagudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X