ನಮ್ಮ ಮೆಟ್ರೋ ಸುರಂಗ ಮಾರ್ಗದ ವಿಶೇಷತೆಗಳು
ಬೆಂಗಳೂರು, ಏಪ್ರಿಲ್ 27 : ನಮ್ಮ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ ನೇರಳೆ ಮಾರ್ಗ ಏಪ್ರಿಲ್ 29ರಂದು ಉದ್ಘಾಟನೆಗೊಳ್ಳಲಿದೆ. ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಜಂಕ್ಷನ್ ವರೆಗಿನ ಮಾರ್ಗದಲ್ಲಿ 5 ಕಿ.ಮೀ.ಸುರಂಗ ಮಾರ್ಗವಿದೆ. ಇದು ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗ.
ಏಪ್ರಿಲ್ 29ರ ಶುಕ್ರವಾರ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. ಏ.30ರಿಂದ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ. [ಏ.29ಕ್ಕೆ ಮೆಟ್ರೋ ಮಾರ್ಗ ಉದ್ಘಾಟನೆ]

ಪೂರ್ವ ಪಶ್ಚಿಮ ಕಾರಿಡಾರ್ ಮಾರ್ಗ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯಲ್ಲಿರುವ ನಾಯಂಡಹಳ್ಳಿ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಒಟ್ಟು 18 ಕಿ.ಮೀ ಮಾರ್ಗದಲ್ಲಿ 13 ಕಿ.ಮೀ. ಎತ್ತರಿಸಿದ ಮಾರ್ಗ ಮತ್ತು 5 ಕಿ.ಮೀ.ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ರೈಲು ಸುರಂಗ ಮಾರ್ಗದಲ್ಲಿ ಸಂಚರಿಸಲಿದೆ. [ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸಿಗುತ್ತೆ ಬಾಡಿಗೆ ಬೈಕ್]
5 ನಿಲ್ದಾಣಗಳು : ಸುರಂಗ ಮಾರ್ಗದಲ್ಲಿ ರೈಲು ಕಬ್ಬನ್ ಉದ್ಯಾನ, ವಿಧಾನಸೌಧ, ಸರ್.ಎಂ.ವಿಶ್ವೇಶ್ವರಯ್ಯ, ಕೆಂಪೇಗೌಡ ಬಸ್ ನಿಲ್ದಾಣ, ನಗರ ರೈಲು ನಿಲ್ದಾಣದ ಮೂಲಕ ಮಾಗಡಿ ರಸ್ತೆ ತಲುಪಲಿದೆ. ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣ ತಲುಪಲು 2 ನಿಮಿಷ ಬೇಕಾಗುತ್ತದೆ. ಒಟ್ಟು ಸುರಂಗದೊಳಗೆ 8 ರಿಂದ 10 ನಿಮಿಷಗಳ ಕಾಲ ರೈಲು ಸಂಚಾರ ನಡೆಸುತ್ತದೆ. [ಬೈಯಪ್ಪನಹಳ್ಳಿಯಿಂದ-ನಾಯಂಡಹಳ್ಳಿಗೆ 35 ನಿಮಿಷದ ಪ್ರಯಾಣ]
40 ರೂ. ಪ್ರಯಾಣ ದರ : ಒಟ್ಟು 18 ಕಿ.ಮೀ.ಮಾರ್ಗದಲ್ಲಿ ಪ್ರಯಾಣಿಸಲು 40 ರೂ. ದರ ನಿಗದಿಪಡಿಸುವ ಸಾಧ್ಯತೆ ಇದೆ. 35 ನಿಮಿಷಗಳಲ್ಲಿ ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿಗೆ ತಲುಪಲಿದೆ.
ಯಾವ ಮಾರ್ಗದಲ್ಲಿ ರೈಲು ಓಡುತ್ತಿದೆ? : ಈಗಾಗಲೇ ನಮ್ಮ ಮೆಟ್ರೋ ರೈಲು ಎಂಜಿ ರಸ್ತೆ - ಬೈಯಪ್ಪನಹಳ್ಳಿ, ಸಂಪಿಗೆ ರಸ್ತೆ-ನಾಗಸಂದ್ರ ಮತ್ತು ಮಾಗಡಿ ರಸ್ತೆ - ನಾಯಂಡನಹಳ್ಳಿ (ಮೈಸೂರು ರಸ್ತೆ) ನಡುವೆ ಸಂಚಾರ ನಡೆಸುತ್ತಿದೆ. ಈ ಮಾರ್ಗ ಉದ್ಘಾಟನೆಗೊಂಡರೆ ನಮ್ಮ ಮೆಟ್ರೋ ಯೋಜನೆಯ ಮತ್ತೊಂದು ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
ನಿಲ್ದಾಣದ ಚಿತ್ರಗಳನ್ನು ನೋಡಿ












Click it and Unblock the Notifications