ಯಡಿಯೂರಪ್ಪಗೆ ಮತ್ತೆ ಡಿನೋಟಿಫಿಕೇಶನ್ ಕಂಟಕ, ಎಸಿಬಿಗೆ ದೂರು
ಬೆಂಗಳೂರು, ಜೂನ್ 10: ಯಡಿಯೂರಪ್ಪ ಮತ್ತು ಡಿ-ನೋಟಿಫಿಕೇಶನ್ ನಡುವೆ ಅದ್ಯಾವ ಸಂಬಂಧವೋ ಗೊತ್ತಿಲ್ಲ. ಬೆನ್ನು ಬಿಡದ ಬೇತಾಳದಂತೆ ಯಡಿಯೂರಪ್ಪನವರನ್ನು ಡಿನೋಟಿಫಿಕೇಶನ್ ಉರುಳು ಸುತ್ತಿಕೊಳ್ಳುತ್ತಲೇ ಇದೆ.
ಈ ಬಾರಿ ಶಿವರಾಮ ಕಾರಂತ ಬಡಾವಣೆಯಲ್ಲಿ ಅಕ್ರಮವಾಗಿ ಡಿ-ನೋಟಿಫಿಕೇಶನ್ ಮಾಡಿದ್ದಾರೆ ಎಂದು ಆರೋಪಿಸಿ ಯಡಿಯೂರಪ್ಪನವರ ವಿರುದ್ಧ ಎಸಿಬಿ ಮತ್ತು ಎಡಿಜಿಪಿಗೆ ದೂರು ನೀಡಲಾಗಿದೆ.

ಅಯ್ಯಪ್ಪ ಎನ್ನುವವರು ದೂರು ನೀಡಿದ್ದಾರೆ. 'ಶಿವರಾಮ ಕಾರಂತ ಬಡಾವಣೆಯಲ್ಲಿ ಯಡಿಯೂರಪ್ಪ 257 ಎಕರೆಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ,' ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications