ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲಾರ್ ಬಳಸಿ ಸ್ವಾವಲಂಬಿಯಾದ ಅಜ್ಜಿ, ಹಲವರಿಗೆ ಮಾದರಿ

|
Google Oneindia Kannada News

ಬೆಂಗಳೂರು, ಜನವರಿ 28: ತಂತ್ರಜ್ಞಾನವನ್ನು ಬಳಸಿಕೊಂಡು ಜೀವನವನ್ನು ಸರಳಗೊಳಿಸಿಕೊಳ್ಳಬೇಕು. ತಂತ್ರಜ್ಞಾನದ ಲಾಭ ಕಟ್ಟಕಡೆಯ ಮನುಷ್ಯನಿಗೂ ತಲುಪೇಕು ಎಂಬುದು ಎಲ್ಲ ಸರ್ಕಾರಗಳ ಆಶಯ. ಆದರೆ ಅದು ಸಾಕಾರಗೊಂಡಿರುವುದು ವಿರಳ. ಆದರೆ ಇದಕ್ಕೆ ವ್ಯತಿರಿಕ್ತವಾದ ಉದಾಹರಣೆಯೊಂದು ಬೆಂಗಳೂರಿನಲ್ಲೇ ಇದೆ.

ಸೋಲಾರ್ ಸಂಸ್ಥೆಗೆ ಜಮೀನು ನೀಡಿದ ರೈತರಿಗೆ ಪರದಾಟ ತಪ್ಪಿಲ್ಲ! ಸೋಲಾರ್ ಸಂಸ್ಥೆಗೆ ಜಮೀನು ನೀಡಿದ ರೈತರಿಗೆ ಪರದಾಟ ತಪ್ಪಿಲ್ಲ!

ವಿಧಾನಸೌಧದ ಮುಂದೆ ಹಣ್ಣು ವಯಸ್ಸಿನ ಮುದುಕಿಯೊಬ್ಬರು ಸೋಲಾರ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಣ್ಣ ಪ್ರಮಾಣದ ಜೋಳದ ವ್ಯಾಪಾರ ಮಾಡುತ್ತಿದ್ದಾರೆ. ಸೋಲಾರ್‌ ಅನ್ನು ವ್ಯಾಪಾರದ ಶ್ರಮ ಕಡಿಮೆ ಮಾಡಲು ಬಳಸಿರುವುದು ದೊಡ್ಡ-ದೊಡ್ಡವರ ಹುಬ್ಬೇರಿಸಿದೆ.

ಸೌರ ವ್ಯವಸ್ಥೆಯಲ್ಲಿ ಗುಲಾಬಿ ಬಣ್ಣದ ಪುಟಾಣಿ ಗ್ರಹ ಪತ್ತೆ ಸೌರ ವ್ಯವಸ್ಥೆಯಲ್ಲಿ ಗುಲಾಬಿ ಬಣ್ಣದ ಪುಟಾಣಿ ಗ್ರಹ ಪತ್ತೆ

ಸೆಲ್ವಂ ಎಂಬ ತಮಿಳು ಮೂಲದ ಅಜ್ಜಿ ಒಬ್ಬರು ಸುಮಾರು 18 ವರ್ಷದಿಂದಲೂ ವಿಧಾನಸೌಧದ ಮುಂದೆ ಜೋಳು ಸುಟ್ಟು ಮಾರತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ವಯಸ್ಸಾಗಿ ಇತ್ತೀಚಿಗೆ ಕಣ್ಣು ಮಂದವಾಗಿದೆ, ಬೀಸಣಿಕೆ ಬೀಸಿ ಕೆಂಡದ ಮೇಲೆ ಜೋಳ ಸುಡುವ ಕಸುವು ಇಲ್ಲದಾಗಿದೆ. ಇದೇ ಸಮಯದಲ್ಲಿ ಸೋಲಾರ್ ತಂತ್ರಜ್ಞಾನ ಅವರಿಗೆ ನೆರವು ನೀಡಿದೆ.

Old woman using solar technology to do her small buisiness in Bengaluru

ಅಜ್ಜಿಯ ಶ್ರಮ ಜೀವನವನ್ನು ನೋಡಿದ್ದ ಸಿಲ್ಕೊ ಸೋಲಾರ್ ಸಂಸ್ಥೆಯ ಉದ್ಯೋಗಿ ಶಾಸ್ತ್ರಿ ಎಂಬುವರು ಸಂಸ್ಥೆಯ ಸಿಬ್ಬಂದಿಯ ಜೊತೆಗೆ ಮಾತನಾಡಿ ಸಂಸ್ಥೆಯಿಂದ ಅಜ್ಜಿಗೆ ಸೋಲಾರ್ ಉಪಕರಣವೊಂದನ್ನು ನೀಡಿದ್ದಾರೆ. ಅದರಲ್ಲಿ ಸೂರ್ಯನ ಬೆಳಕಿನಿಂದ ಫ್ಯಾನ್ ತಿರುಗುವಂತೆ ಹಾಗೂ ಲೈಟ್ ಒಂದು ಉರಿಯುವಂತೆ ಮಾಡಲಾಗಿದೆ.

ಹೆಗಡೆಗೆ ಮಾತಿನ ತಪರಾಕಿ ನೀಡಿದ ದಿನೇಶ್ ಗುಂಡೂರಾವ್ ಪತ್ನಿ ಟಬು ಹೆಗಡೆಗೆ ಮಾತಿನ ತಪರಾಕಿ ನೀಡಿದ ದಿನೇಶ್ ಗುಂಡೂರಾವ್ ಪತ್ನಿ ಟಬು

ಸೋಲಾರ್ ಉಪಕರಣ ಬಂದ ಮೇಲೆ, ಬೀಸಣಿಕೆ ಬೀಸಿ ಕೆಂಡ ಉರಿಸುವ ಶ್ರಮದಿಂದ ಅಜ್ಜಿಗೆ ಮುಕ್ತಿ ದೊರೆತಿದೆ. ಕತ್ತಲ ಸಮಯದಲ್ಲಿ ಸೋಲಾರ್ ದೀಪದಿಂದ ಅಂಗಡಿ ಬೆಳಗಿಸುತ್ತಿದ್ದಾರೆ ಅಜ್ಜಿ. ಸೋಲಾರ್ ತಂತ್ರಜ್ಞನವನ್ನು ತನ್ನ ತಳ್ಳುಗಾಡಿಗೆ ಅಳವಡಿಸಿದ ಮೇಲೆ ಸಾಕಷ್ಟು ಶ್ರಮ ಕಡಿಮೆ ಆಗಿದೆ ಎಂದು ಅಜ್ಜಿ ಸಂತೋಶದಿಂದ ಹೇಳುತ್ತಾರೆ.

English summary
Old woman Selvamma using solar technology to do her small buisiness. She is selling burned maize near Vidhan Soudha. selco solar company gave her a solar equipment that reduced her effort.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X