ಕೆಂಪೇಗೌಡ ಏರ್‌ಪೋರ್ಟ್ ಹಳೇ ರನ್‌ವೇ ಕಾಮಗಾರಿಗೆ ಮಾರ್ಚ್‌ಗೆ ಪೂರ್ಣ
ಬೆಂಗಳೂರು,ಫೆಬ್ರವರಿ 24: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ ರನ್ ವೇ ಪುನರ್ ನಿರ್ಮಾಣದ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಈ ಕುರಿತು ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಕಾಮಗಾರಿ ಪರಿಶೀಲನೆ ನಡೆಸಿದರು.
ನಾಲ್ಕು ಕಿಮೀ ಉದ್ದದ ಈ ರನ್ ವೇ ಮಧ್ಯದಲ್ಲಿ ಲೈಟ್ ಅಳವಡಿಸಲಾಗಿದೆ. ಇದರಿಂದ ವಿಮಾನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಅಂತೆಯೇ ಟ್ಯಾಕ್ಸಿ ವೇ, ಒಳಚರಂಡಿ ಏರ್'ಫೀಲ್ಡ್ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕೊರೊನಾದಿಂದಾಗಿ ಪ್ರಾಧಿಕಾರಕ್ಕೆ ನಷ್ಟ
ಕೊರೊನಾ ಸಾಂಕ್ರಾಮಿಕ ರೋಗದಿಂದ ಪ್ರಾಧಿಕಾರಕ್ಕೆ ಅಪಾರ ನಷ್ಟವಾಗಿದೆ. ಕೋವಿಡ್ ಪೂರ್ವದಲ್ಲಿ ವಾರ್ಷಿದ 33ದಶ ಲಕ್ಷ ಪ್ರಯಾಣಿಕರು ಈ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದರು. ಇದೀಗ 12 ದಶಲಕ್ಷ ಇಳಿದಿದೆ. ಮುಂದೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಮುಕ್ತಾಯದ ಹಂತದಲ್ಲಿ ರನ್‌ವೇ
ಈಗಿರುವ ರನ್ ವೇ ಪುನರ್ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಅಂತಿಮ ಕೆಲಸಗಳು ನಡೆಯುತ್ತಿವೆ. ಸದ್ಯ ಎರಡನೇ ರನ್ ವೇ ಮುಖಾಂತರ ವಿಮಾನಗಳ ಸಂಚಾರ ನಡೆಯುತ್ತಿದೆ.

ವಿಮಾನ ಸಂಚಾರ ಆರಂಭವಾಗಲಿದೆ
ಹಳೇ ರನ್ ಕಾಮಗಾರಿ ಪೂರ್ಣಗೊಂಡ ಬಳಿಕ ಅದರಲ್ಲೂ ವಿಮಾನಗಳ ಸಂಚಾರ ಆರಂಭವಾಗಲಿದೆ. ಮುಂಬೈನ ಎಐಸಿ ಸಂಸ್ಥೆ ಸುಮಾರು ರೂ.260 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ನಿಗದಿಪಡಿಸಿದ ಸಮಯಕ್ಕಿಂತಲೂ ಬೇಗ ಕಾಮಗಾರಿ ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.
Recommended Video

ಎಷ್ಟು ಪ್ರಯಾಣಿಕರನ್ನು ನಿಭಾಯಿಸಬಹುದು
ವಿಮಾನ ನಿಲ್ದಾಣದ ಎರಡು ರನ್ ವೇಗಳ ಮೂಲಕ ವಾರ್ಷಿಕ 60ರಿಂದ 75 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸಬಹುದು. ಇದರಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಉತ್ತಮ ಲಾಭವಾಗಲಿದೆ ಎಂದು ತಿಳಿಸಿದರು.











Click it and Unblock the Notifications