ಬೆಂಗಳೂರಲ್ಲಿ ಓಲಾದಿಂದ self drive ಕಾರು ಸೇವೆ ಆರಂಭ

ಬೆಂಗಳೂರು, ಅಕ್ಟೋಬರ್ 18 : ಓಲಾ ಬೆಂಗಳೂರು ನಗರದಲ್ಲಿ self drive ಕಾರು ಬಾಡಿಗೆ ಸೇವೆಯನ್ನು ಆರಂಭಿಸಿದೆ. ಎರಡು ಗಂಟೆಯಿಂದ ಮೂರು ತಿಂಗಳಿನ ತನಕ ಕಾರನ್ನು ಬಾಡಿಗೆಗೆ ಪಡೆಯಲು ಅವಕಾಶ ನೀಡಿದೆ.

' ಓಲಾ ಡ್ರೈವ್' ಎಂಬ ಹೆಸರಿನಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಓಲಾ self-drive ಬಾಡಿಗೆ ಕಾರು ಸೇವೆ ಆರಂಭ ಮಾಡಿದೆ. ಕೆಲವೇ ದಿನಗಳಲ್ಲಿ ದೆಹಲಿಯಲ್ಲಿಯೂ ಈ ಸೇವೆ ಆರಂಭವಾಗಲಿದೆ.

ಪ್ರಸ್ತುತ 2 ಗಂಟೆಯಿಂದ ಮೂರು ತಿಂಗಳ ತನಕ ಕಾರನ್ನು ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚು ದಿನಕ್ಕೆ ಕಾರನ್ನು ಬಾಡಿಗೆಗೆ ನೀಡುವ ಕುರಿತು ಓಲಾ ಮಾತುಕತೆ ನಡೆಸುತ್ತಿದೆ.

ಓಲಾ ಅಪ್ಲಿಕೇಶನ್‌ನಲ್ಲಿನ ಡ್ರೈವ್ ಟ್ಯಾಬ್ ಮೂಲಕ ಜನರು self drive ಕಾರನ್ನು ಬಾಡಿಗೆಗೆ ಪಡೆಯಲು ಅವಕಾಶವಿದೆ. 2020ರ ವೇಳೆಗೆ ಈ ಸೇವೆಗೆ 20,000ಕ್ಕೂ ಅಧಿಕ ಕಾರುಗಳನ್ನು ಈ ಸೇವೆಗೆ ಸೇರಿಸಲು ಓಲಾ ಮುಂದಾಗಿದೆ.

Ola

ಕಾರನ್ನು ಬಾಡಿಗೆಗೆ ಪಡೆಯುವ ಜನರು ಪ್ಯಾಕೇಜ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರಯಾಣ ಮಾಡಿದ ಕಿ. ಮೀ.ಗಳಿಗೆ ಮಾತ್ರ ಅವರು ಪಾವತಿ ಮಾಡಬಹುದು. ಓಲಾ ಪೇ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಓಲಾ ಡ್ರೈವ್‌ನಡಿ ಸೆಡಾನ್, ಹ್ಯಾಚ್ ಬ್ಯಾಕ್, ಎಸ್‌ಯುವಿ ಸೇರಿದಂತೆ ವಿವಿಧ ಕಾರುಗಳು ಲಭ್ಯವಿದೆ. ಕಾರು ಬಾಡಿಗೆ ಪಡೆದವರ ಸಹಾಯಕ್ಕಾಗಿ 24*7 ಸಹಾಯವಾಣಿಯನ್ನು ಆರಂಭಿಸಲಾಗಿದೆ. ತುರ್ತು ಕರೆ, ರಸ್ತೆ ಮಾರ್ಗದರ್ಶಿ ಮುಂತಾದ ಸೇವೆಗಳು ಸಹ ಲಭ್ಯವಿದೆ.

ಬೆಂಗಳೂರು ನಗರದ ಮೂರು ಪಿಕಪ್ ಸ್ಥಳದಲ್ಲಿ ಕಾರುಗಳನ್ನು ಬಾಡಿಗೆಗೆ ಪಡೆಯಬಹುದು. ಓಲಾ ಡ್ರೈವ್‌ನಡಿ ಕಾರು ಪಡೆಯುವವರು 2 ಸಾವಿರ ರೂ. ಠೇವಣಿ ಇಡಬೇಕು.

ನಗರದಲ್ಲಿ ಈಗಾಗಲೇ ಝೂಮ್ ಕಾರು, ಡ್ರೈವ್‌ಝೀ, ರೇವ್ ಸೇರಿದಂತೆ ವಿವಿಧ self drive ಕಾರು ಬಾಡಿಗೆ ಸೇವೆ ಇದೆ. ಓಲಾ ಈಗ ಮಾರುಕಟ್ಟೆಗೆ ಪ್ರವೇಶ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+