ಪತ್ನಿಯಿಂದ ಕಿರುಕುಳ; ಬೆಂಗಳೂರಿನಲ್ಲಿ ವಿಷ ಕುಡಿದು ಜೀವಬಿಟ್ಟ ಖ್ಯಾತ ರ್‍ಯಾಪರ್

ಇತ್ತೀಚೆಗೆ ಪತ್ನಿಯಿಂದ ಕಿರುಕುಳ ಹೆಚ್ಚಾಗಿ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಖ್ಯಾತ ರ್‍ಯಾಪರ್ ಒಬ್ಬರು ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ನೀಡಿದ ಕಿರುಕುಳದಿಂದಲೇ ರ್‍ಯಾಪರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ಒಡಿಯಾ ಪ್ರಸಿದ್ಧ ರ್‍ಯಾಪರ್ ಅಭಿನವ್ ಸಿಂಗ್ ಎನ್ನುವವರೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾರೆ. ಅಭಿನವ್ ಸಿಂಗ್‌ ಒಡಿಸ್ಸಾದ ಕಟನ್‌ನ ಕಾಲಿಗಲಿ ನಿವಾಸಿಯಾಗಿದ್ದು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

odia rapper abhinav singh dies by suicide bengaluru

ಪತ್ನಿ ವಿರುದ್ಧ ಸಂಬಂಧಿಕರ ಆರೋಪ

ಸಾವಿಗೆ ನಿಖರವಾದ ಕಾರಣ ಏನೂ ಎಂದು ಇನ್ನೂ ತಿಳಿದಿಲ್ಲವಾದರೂ, ಅಭಿನವ್ ಸಿಂಗ್‌ಗೆ ಪತ್ನಿ ತುಂಬಾ ಮಾನಸಿಕ ಕಿರುಕುಳ ಕೊಡುತ್ತಿದ್ದರು, ಇದರಿಂದ ಅಭಿನವ್ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಅಭಿನವ್ ತಾಯಿ, "ನಾನು ಪ್ರತಿದಿನ ಅವನು ಕಚೇರಿಗೆ ಹೋಗುವ ಮೊದಲು ಬೆಳಿಗ್ಗೆ 8 ಗಂಟೆಗೆ ಕರೆ ಮಾಡುತ್ತಿದ್ದೆ. ಹಿಂದಿನ ರಾತ್ರಿ ಆತ ತಂದೆಯ ಜೊತೆ ಮಾತನಾಡಿದ್ದ, ಕಚೇರಿ ಸಮೀಪ ಬಂದಿದ್ದ ಕಾರಣ ಬೆಳಿಗ್ಗೆ 8 ಗಂಟೆ ಬದಲಾಗಿ 9 ಗಂಟೆಗೆ ಎಬ್ಬಿಸುವಂತೆ ನನಗೆ ಕೇಳಿದ್ದ. ನಾನು ಬೆಳಿಗ್ಗೆ 8.15ಕ್ಕೆ ಕರೆ ಮಾಡಲು ಪ್ರಾತಂಭಿಸಿದೆ, ಅವನು ಕರೆ ಮಾಡದಿದ್ದಾಗ, ಆಫೀಸ್‌ಗೆ ಲೇಟಾಗಿ ಹೋಗುತ್ತಾನೆ ಎಂದು ಭಾವಿಸಿದ್ದೆ. ಆತನ ಮನೆಯ ಸಮೀಪ ವಾಸಿಸುತ್ತಿದ್ದ ಸ್ನೇಹಿತ ತನ್ಮಯ್‌ಗೆ ಕರೆ ಮಾಡುವಂತೆ ನನ್ನ ಗಂಡನಿಗೆ ತಿಳಿಸಿದೆ. ತನ್ಮಯ್ ಆತನ ಮತ್ತೊಬ್ಬ ಸ್ನೇಹಿತ ಮನೆಗೆ ಹೋಗಿ ಬಾಗಿಲು ತಟ್ಟಿದ್ದಾನೆ. ಯಾವುದೇ ಪ್ರತಿಕ್ರಿಯೆ ಸಿಗದಿದ್ದರಿಂದ ಬಾಲ್ಕನಿಗೆ ಹೋಗಿ ನೋಡಿದಾಗ ನನ್ನ ಮಗ ವಿಷ ಸೇವಿಸಿರುವುದ ಗೊತ್ತಾಗಿದೆ" ಎಂದು ಹೇಳಿದ್ದಾರೆ.

ಅಭಿನವ್ ಮತ್ತು ಆತನ ಹೆಂಡತಿಯ ನಡುವೆ ಸಂಬಂಧ ಸರಿಯಿಲ್ಲ ಎಂದು ಅವರು ಹೇಳಿದ್ದಾರೆ. ಮಗನಿಗೆ ಪ್ರಯಾಣ ಮಾಡುವುದು ಇಷ್ಟ ಆದರೆ ಆಕೆಗೆ ಅವನು ಮನೆಯಲ್ಲಿ ಇರಬೇಕು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ಕೂಡ ಆಗುತ್ತಿತ್ತು, ವಾರಾಂತ್ಯದಲ್ಲಿ ಆತ ಮನೆಗೆ ಬಂದಿದ್ದನು ಆದರೆ ನಮಗೆ ಹೇಳದೆ ಆತ ಮನೆಯಿಂದ ಹೋಗಿದ್ದ. ಅವನ ಹೆಂಡತಿಗೆ ನಮ್ಮ ಮಗ ನಮ್ಮ ಜೊತೆ ಮಾತನಾಡುವುದು ಇಷ್ಟವಿರಲಿಲ್ಲ, ನಾನು ಒಂಭತ್ತು ತಿಂಗಳಿನಿಂದ ಮೌನವಾಗಿದ್ದೆ ಎಂದು ಹೇಳಿದ್ದಾರೆ.

2023ರಲ್ಲಿ ಅಭಿನವ್‌ರ ಸೋದರ ಮಾವ ಕಾನೂನಿನ ತೊಡಕಿಲ್ಲದೆ ಪರಸ್ಪರ ಒಪ್ಪಿತ ವಿಚ್ಛೇದನ ಪಡೆಯುವ ಬಗ್ಗೆ ನಮ್ಮ ಜೊತೆ ಮಾತನಾಡಿದ್ದರು. ಅಭಿನವ್‌ ಸಾಯುವ ಮುನ್ನ ಪತ್ರವೊಂದನ್ನು ಬರೆದಿದ್ದು ಅದನ್ನು ಪೊಲೀಸರು ವಶಪಡೆದಿದ್ದಾರೆ ಎಂದು ಅಭಿನವ್ ತಾಯಿ ತಿಳಿಸಿದ್ದಾರೆ.

ಅಭಿನವ್ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+