• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಾವಿದರ ಕಲ್ಯಾಣ ನಿಧಿ ಸಂಗ್ರಹಕ್ಕೆ ಡಿಜಿಟಲ್ ಸಂಗೀತ ಕಚೇರಿ

|

ಬೆಂಗಳೂರು, ಜೂನ್ 12: ಸವಾಲುದಾಯಕ ಕೋವಿಡ್-19ನಿಂದ ಚಾಲಿತವಾದ ಲಾಕ್‍ಡೌನ್‍ನಿಂದ ನಿಶ್ಶಬ್ದವಾಗಿ ಸಂತ್ರಸ್ತರಾದವರಲ್ಲಿ ಪ್ರದರ್ಶನ ಕಲೆ ಹಾಗೂ ಕಲಾವಿದರು ಮೊದಲಿಗರು. ಇತರ ವ್ಯವಹಾರಕ್ಕಿಂತ ಭಿನ್ನವಾಗಿ ಸಮೂಹ ಮನೋರಂಜನೆ ನೀಡುವ ಈ ವೃತ್ತಿ ಸುಧೀರ್ಘ ಕಾಲದಿಂದ ಬಾಧಿತವಾಗಿದೆ.

ಪ್ರವೀಣ್ ಡಿ.ರಾವ್ ಅವರ ಪರಿಕಲ್ಪನೆಯಂತೆ ರೂಪುಗೊಂಡ ಸಂಗೀತ ಕಲಿಕಾ ಮತ್ತು ಹಂಚಿಕೆಯ ವರ್ಚುವಲ್ ಪ್ಲಾಟ್‍ಫಾರಂ ಎನಿಸಿದ ಸಂಯೋಚನೆ ಆರಂಭದಲ್ಲಿ ಪ್ರಯೋಗಾತ್ಮಕವಾಗಿದ್ದು, ಕ್ಷಿಪ್ರವಾಗಿ ಚಳವಳಿಯಾಗಿ ಬೆಳೆದು ನಿಂತಿದೆ. ಇದೀಗ 500ಕ್ಕೂ ಹೆಚ್ಚು ಮಂದಿ ಖ್ಯಾತ ಸಂಗೀತಕಾರರು, ಕವಿಗಳು ಹಾಗೂ ತಂತ್ರಜ್ಞರು ಇದರ ಜತೆ ಜೋಡಿಸಿಕೊಂಡಿದ್ದಾರೆ.

ಸಂಯೋಚನೆ ಡಿಜಿಟಲ್ ನೇರ ಸಂಗೀತ ಕಚೇರಿ ಪ್ಲಾಟ್‍ಫಾರಂ ಬಗ್ಗೆ ಮಾತನಾಡಿದ ಪ್ರವೀಣ್ ಡಿ.ರಾವ್, ''ಸಂಯೋಚನೆ ಡಿಜಿಟಲ್ ನೇರ ಸಂಗೀತ ಸರಣಿಯು ಸಂಗೀತಪ್ರೇಮಿಗಳಿಗೆ ನಾವು ಸೃಷ್ಟಿಸಿದ ರೋಮಾಂಚಕ ಹೊಸ ವಿಷಯಗಳನ್ನು ಪರಿಚಯಿಸುವುದು ಮಾತ್ರವಲ್ಲದೇ, ವಿಷಯ ಸೃಷ್ಟಿಕರ್ತರು ಮತ್ತು ಕಲಾವಿದರಿಗೆ ತಮ್ಮ ಕೊಡುಗೆಯನ್ನು ನಗದೀಕರಿಸಿಕೊಳ್ಳಲು ಕೂಡಾ ನೆರವಾಗಿದೆ. ಈ ನೇರಪ್ರಸಾರದ ಸಂಗೀತ ಕಾರ್ಯಕ್ರಮ ಎಲ್ಲರಿಗೂ ಉಚಿತವಾಗಿದ್ದರೂ, ಸಂಗೀತ ಪೋಷಕರು ಈ ಸಕಾರಣಕ್ಕೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಕಲಾವಿದರ ಕಲ್ಯಾಣಕ್ಕೆ ನೆರವಾಗುತ್ತಾರೆ ಎಂಬ ವಿಶ್ವಾಸ ನನ್ನದು'' ಎಂದು ಹೇಳಿದ್ದಾರೆ.

ಓಕ್ಟಾವೆಝ್ ಚಾಲಿತ ಸಂಯೋಚನೆ ಸರಣಿಯು 2020ರ ಜೂನ್ 14ರಂದು ಮಧ್ಯಾಹ್ನ 3 ರಿಂದ ರಾತ್ರಿ 8ರವರೆಗೆ ನೇರ ಸಂಗೀತ ಕರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಇದರಲ್ಲಿ ಎಂ.ಡಿ.ಪಲ್ಲವಿ, ಜೋಗಿ ಸುನೀತಾ, ಸುಪ್ರಿಯಾ, ರಘುನಂದನ್ ಮತ್ತು ಮಂಗಳಾ ರವಿ ಸೇರಿದಂತೆ ಹತ್ತು ಮಂದಿ ಖ್ಯಾತ ಕಲಾವಿದರು ನಿರಂತರವಾಗಿ ಸುಗಮ ಸಂಗೀತ ಸುಧೆ ಹರಿಸಲಿದ್ದಾರೆ. ಸೆಲೆಸ್ಟೈನ್ ಗೆರಾಲ್ಡ್, ಶ್ರೀನಿವಾಸ ಪ್ರಸಾದ್ ಮಧುಸೂಧನ, ಪ್ರದ್ಯುಮ್ನ ಸೊರಬ, ಕೃಷ್ಣ ಉಡುಪ, ಸಂಗೀತ ಥಾಮಸ್ ಮತ್ತು ಅಭಿಷೇಕ್ ಎ. ಅವರೂ ಭಾಗವಹಿಸುವರು.

ಭಾರತದ ವಿಶಿಷ್ಟ ಹಾಗೂ ಅಗ್ರಗಣ್ಯ ಸಂಗೀಕ ಕಲಿಕಾ ಆ್ಯಪ್ ಆಗಿರುವ ಓಕ್ಟಾವೆಝ್ ಟೀಂ ಸಂಯೋಚನೆ ಜತೆ ಕೈಜೋಡಿಸಿದೆ. ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿರುವ ಓಕ್ಟಾವೆಝ್, ಖ್ಯಾತ ಕಲಾವಿದರನ್ನು ಕರೆ ತರಲಿದ್ದು, ಅವರ ಪ್ರಸ್ತುತಿಯನ್ನು ನಿಮ್ಮ ಬೆರಳ ತುದಿಗೆ ತಲುಪಿಸಲಿದೆ. ಸ್ವೀಕರಿಸಿದ ಸಂಪೂರ್ಣ ದೇಣಿಗೆ ಹಾಗೂ ಇತರ ಆದಾಯವನ್ನು ಕಾರ್ಯಕ್ರಮ ನೀಡುವ ಕಲಾವಿದರಿಗೆ ಹಾಗೂ ಕಲಾವಿದರ ನಿಧಿಗೆ ನೀಡುವುದು ಒಂದು ಭಾಗವಾದರೆ, ಓಕ್ಟಾವೆಝ್‍ನ ಕೊಡುಗೆಯೆಂದರೆ, ಸಂಗೀತ ಕೋರ್ಸ್‍ಗಳಿಗೆ ಸದಸ್ಯತ್ವ ಪಡೆಯುವುದರಿಂದ ಬಂದ ಆದಾಯದ ದೊಡ್ಡ ಮೊತ್ತವನ್ನು ಕಲಾವಿದರ ಕಲ್ಯಾಣ ಕಾರ್ಯಕ್ಕೆ ವಿನಿಯೋಗಿಸಲಾಗುವುದು.

ಏನು: ಕಲಾವಿದರ ಕಲ್ಯಾಣಕ್ಕೆ ನಿಧಿ ಸಂಗ್ರಹಕ್ಕೆ ನೇರಪ್ರಸಾರದ ಡಿಜಿಟಲ್ ಸಂಗೀತ ಕಚೇರಿ

ಯಾವಾಗ: ಜೂನ್ 14, 2020

ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 8

ಎಲ್ಲಿ: ಸಂಯೋಚನೆ (someyochane) ಫೇಸ್‍ಬುಕ್ ಪೇಜ್, ಅಧಿಕೃತ ಓಕ್ಟಾವೆಝ್ (OctavezApp) ಫೇಸ್‍ಬುಕ್ ಪೇಜ್ ಮತ್ತು ಕಲಾವಿದರ ವೈಯಕ್ತಿಕ ಸಾಮಾಜಿಕ ಜಾಲತಾಣ ಪುಟಗಳು.

English summary
Someyochane, a music learning and sharing virtual platform conceptualized by Praveen D Rao. 10 artists of repute including MD Pallavi, Jogi Sunitha, Supriya Raghunandan and Mangala Ravi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X