Get Updates
Get notified of breaking news, exclusive insights, and must-see stories!

ಬೆಂಗಳೂರಿನ ಒಬಿಸಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಬರಿಗೈಯಲ್ಲಿ ಶೌಚಾಲಯ ಸ್ವಚ್ಛ ಮಾಡಿಸಿದ ವಾರ್ಡನ್

ಬೆಂಗಳೂರು, ಜ. 03: ಯಾವ್ಯಾವುದೋ ಊರಿನಿಂದ ನಗರಗಳಿಗೆ ಬಂದು ಒಂದು ಉತ್ತಮ ಜೀವನ ರೂಪಿಸಿಕೊಳ್ಳುವ ಹಂಬಲದಿಂದ ಕಾಲೇಜು ಸೇರಿ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳೂತ್ತಾರೆ ವಿದ್ಯಾರ್ಥಿಗಳು. ತಂದೆ ತಾಯಿಯಿಂದ ದೂರವಿದ್ದು ಹಾಸ್ಟೆಲ್‌ಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ವಾರ್ಡನ್‌ಗಳು ತುಂಬಾ ಕೆಟ್ಟದಾಗಿ ನಡೆಸಿಕೊಂಡಿರುವ ಹಲವು ಘಟನೆಗಳು ದಾಖಲಾಗಿವೆ.

ಇಂತಹದ್ದೇ ಒಂದು ಮನಕಲುಕುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಡೆದಿದೆ. ಆರ್‌ಆರ್‌ ನಗರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ನ ವಿದ್ಯಾರ್ಥಿಗಳು ತಮ್ಮ ಬರಿಗೈಯಿಂದಲೇ ಶೌಚಾಲಯಗಳನ್ನು ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ.

ಮೂರು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗೆ ಚಾಲನೆ

ಇಂತಹ ದಾರುಣ ಸ್ಥಿತಿಯಲ್ಲಿದ್ದರೂ ಭಯದಿಂದ ಬದುಕುತ್ತಿರುವ ಈ ಹೆಣ್ಣುಮಕ್ಕಳ ಕಷ್ಟ ಹೇಳತೀರದು. ತಮ್ಮ ಕೈಗಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮತ್ತು ಯಾವುದೇ ಹಾಸಿಗೆಯಿಲ್ಲದೆ ಈ ಚಳಿಯಲ್ಲಿಯೂ ಕಬ್ಬಿಣದ ಹಾಸಿಗೆಗಳ ಮೇಲೆ ಮಲಗುತ್ತಾರೆ.

OBC Hostel Girls Forced to Clean Toilets With Bare Hands in RR Nagar

ಇಷ್ಟೆ ಅಲ್ಲದೆ ಹಾಸ್ಟೆಲ್‌ನಲ್ಲಿ ಈ ಬಾಲಕಿಯರು ರಜಾದಿನಗಳಲ್ಲಿ ತಮ್ಮ ತಮ್ಮ ಮನೆಗೆ ಹೋಗಲು ವಾರ್ಡನ್ ಅನುಮತಿ ಕೂಡ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ.

"ನಮ್ಮ ಮನೆಗಳಿಗೆ ಹೋಗಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಹೊದರೂ ಕೂಡ ವಾರ್ಡನ್ ಅವರ ವೈಯಕ್ತಿಕ ಬಳಕೆಗಾಗಿ ಮಿಕ್ಸ್‌ನಂತಹ ದುಬಾರಿ ಉಡುಗೊರೆಗಳನ್ನು ತರುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಾರೆ" ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

"ನಾವು ನಮ್ಮ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡುವಾಗ ನಾವು ಬೇಗ ಬೇಗ ಚಾರ್ಜ್ ಮಾಡಿಕೊಳ್ಳಬೇಕು. ವಾರ್ಡನ್ ಕೆಲವು ಗಂಟೆಗಳುಮಾತ್ರ ಕರೆಂಟ್ ಬಳಸಲು ಅನುಮತಿ ನೀಡುತ್ತಾರೆ. ಪ್ರರ್ಶನೆ ಮಾಡಿದರೇ, ಬಾಯಿಗೆ ಬಂದಂತೆ ಬೈಯುತ್ತಾರೆ. ಜೊತೆಗೆ ಹಾಸ್ಟೆಲ್‌ನಿಂದ ಹೊರಹಾಕುವ ಬಗ್ಗೆ ಎಚ್ಚರಿಕೆ ನೀಡುತ್ತಾರೆ" ಎಂದಿದ್ದಾರೆ.

ಈ ಸಮಸ್ಯೆಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡನ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ನಮಗೆ ಬೆದರಿಕೆಗಳು ಬಂದಿವೆ. ನಾವು ಅನೇಕ ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ, ಏನೂ ಬದಲಾಗಿಲ್ಲ. ನಮ್ಮ ಹೆಸರುಗಳನ್ನು ಬರೆದುಕೊಂಡುಯ ನಮ್ಮನ್ನೇ ಹಾಸ್ಟೆಲ್ ಬಿಟ್ಟು ಕಳುಹಿಸುವುದಾಗಿ ಬೆದರಿಸಿದ್ದಾರೆ ಎಂದು ತಮ್ಮ ದುಖಃ ತೋಡಿಕೊಂಡಿದ್ದಾರೆ.

ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಟ್ವಿಟರ್‌ನಲ್ಲಿ ಹಾಸ್ಟೆಲ್‌ನಲ್ಲಿನ ಕಳಪೆ ಸ್ಥಿತಿ ಮತ್ತು ದೌರ್ಜನ್ಯವನ್ನು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸ್ಥಿತಿ ಬಗ್ಗೆ ನಾನು ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ. ಈಗ ಕ್ರಮ ಕೈಗೊಳ್ಳುವಂತೆ ಸಚಿವರ ಬಳಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

(ಮಾಹಿತಿ ಕೃಪೆ- ದಿ ನ್ಯೂಸ್ ಮಿನಿಟ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+