ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ ಶೇ.31ರಷ್ಟು ವಾಹನಗಳ ಸಂಖ್ಯೆ ಹೆಚ್ಚಳ!

ಬೆಂಗಳೂರು, ಡಿಸೆಂಬರ್ 28: ಸಿಲಿಕಾನ್ ಸಿಟಿಯಲ್ಲಿ ರಸ್ತೆಗಳು ಪ್ರತಿನಿತ್ಯ ವಾಹನ ದಟ್ಟಣೆಯಿಂದಲೇ ತುಂಬಿರುತ್ತದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದು ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಶೇ.31ರಷ್ಟು ಏರಿಕೆಯಾಗಿದೆ. ಆ ಮೂಲಕ ನಗರದಲ್ಲಿ ಖಾಸಗಿ ಕಾರುಗಳ ಸಂಖ್ಯೆಯು 22.86 ಲಕ್ಷಕ್ಕೆ ಏರಿಕೆಯಾದರೆ, ದ್ವಿಚಕ್ರ ವಾಹನಗಳ ಸಂಖ್ಯೆಯು 71.8 ಲಕ್ಷಕ್ಕೆ ಏರಿಕೆಯಾಗಿದೆ. ಇದಿಷ್ಟೂ ಅಲ್ಲದೇ 2.5 ಲಕ್ಷ ಕ್ಯಾಬ್ ಮತ್ತು ಟ್ಯಾಕ್ಸಿಗಳು ನಗರದಲ್ಲಿ ಸಂಚರಿಸುತ್ತಿವೆ.

ಬೆಂಗಳೂರಿನಲ್ಲಿ ಕಳೆದ ಜನವರಿಯಿಂದ ಅಕ್ಟೋಬರ್ ತಿಂಗಳವರೆಗೆ 96,945 ಖಾಸಗಿ ಕಾರುಗಳ ನೋಂದಣಿ ಮಾಡಿಸಲಾಗಿದೆ. ಈ ವರ್ಷದಲ್ಲಿ ಒಟ್ಟು ಹೊಸ ಖಾಸಗಿ ಕಾರುಗಳ ನೋಂದಣಿ ಸಂಖ್ಯೆಯು 1,23,777 ತಲುಪಿದೆ. ಅದೇ ರೀತಿ 2021ರಲ್ಲಿ 2,18,933 ದ್ವಿಚಕ್ರ ವಾಹನಗಳನ್ನು ನೋಂದಣಿ ಮಾಡಿಸಲಾಗಿತ್ತು, ಆದರೆ ಈ ಸಂಖ್ಯೆಯು 2022ರಲ್ಲಿ 3,34,292ಕ್ಕೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ವಾಹನಗಳ ನೋಂದಣಿ ಹೆಚ್ಚಳಕ್ಕೆ ಕಾರಣ ಮತ್ತು ಅದರ ಪರಿಣಾಮವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸಿಲಿಕಾನ್ ಸಿಟಿ ರಸ್ತೆಯಲ್ಲಿ ಶೇ.88ರಷ್ಟು ಖಾಸಗಿ ವಾಹನಗಳೇ!

ಸಿಲಿಕಾನ್ ಸಿಟಿ ರಸ್ತೆಯಲ್ಲಿ ಶೇ.88ರಷ್ಟು ಖಾಸಗಿ ವಾಹನಗಳೇ!

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಪೈಕಿ ಶೇ.88ರಷ್ಟು ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನಗಳೇ ಇವೆ. ನಗರದ ಸಾರಿಗೆ ಮತ್ತು ಸಾರಿಗೆಯೇತರ ವಲಯದಲ್ಲಿ ಒಟ್ಟು 1.07 ಕೋಟಿ ವಾಹನಗಳಿವೆ. ಈ ಪೈಕಿ 94.67 ಲಕ್ಷ ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನಗಳು ಸೇರಿವೆ. ಅದೇ ರೀತಿ ರಾಜ್ಯ ರಾಜಧಾನಿಯಲ್ಲಿ ಖಾಸಗಿ ವಾಹನಗಳ ಕಾರುಬಾರು ಹೆಚ್ಚಾಗುವುದಕ್ಕೆ ತಜ್ಞರು ಹಲವು ಕಾರಣಗಳನ್ನು ಕೊಟ್ಟಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಖಾಸಗಿ ವಾಹನಗಳ ಹೆಚ್ಚಳಕ್ಕೆ ಕಾರಣವೇನು?

ಸಿಲಿಕಾನ್ ಸಿಟಿಯಲ್ಲಿ ಖಾಸಗಿ ವಾಹನಗಳ ಹೆಚ್ಚಳಕ್ಕೆ ಕಾರಣವೇನು?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಕೋವಿಡ್-19 ಸೋಂಕಿನ ಕಾಲದಲ್ಲಿ ಸಾರ್ವಜನಿಕ ಸಾರಿಗೆಯು ಹೆಚ್ಚು ಅಪಾಯಕಾರಿ ಎಂದು ಜನರು ತಿಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮದೇ ಆದ ಸ್ವಂತ ವಾಹನಗಳ ಖರೀದಿಗೆ ಮೊರೆ ಹೋದರು. ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ ಎಂಬ ಭಯವೇ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಅವಕಾಶ ತಪ್ಪಿ ಹೋಯ್ತು!

ಮೂಲಸೌಕರ್ಯ ಅಭಿವೃದ್ಧಿ ಅವಕಾಶ ತಪ್ಪಿ ಹೋಯ್ತು!

ಬೆಂಗಳೂರಿನಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಘೋಷಿಸಲಾದ ಲಾಕ್ ಡೌನ್ ಸಂದರ್ಭದಲ್ಲಿ ಹಲವು ಅವಕಾಶಗಳನ್ನು ಕಳೆದುಕೊಳ್ಳಲಾಯಿತು. ನಗರದ ರಸ್ತೆಗಳು ಖಾಲಿ ಖಾಲಿ ಹೊಡೆಯುತ್ತಿದ್ದ ಸಮಯದಲ್ಲಿ ಸೈಕ್ಲಿಂಗ್ ಮತ್ತು ವಾಕಿಂಗ್ ಸಲುವಾಗಿ ಬಳಕೆಯಾಗುತ್ತಿದ್ದ ರಸ್ತೆಗಳನ್ನು ಉನ್ನತೀಕರಿಸುವ ಕಾರ್ಯ ಯಶಸ್ವಿಯಾಗಲಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಿಬಿಎಂಪಿಯು ವೈಟ್ ಟ್ಯಾಪಿಂಗ್ ಸೇರಿದಂತೆ ಇತರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗವನ್ನು ನೀಡಿತು. ಆದರೆ ಈ ಅಭಿವೃದ್ಧಿ ಕಾಮಗಾರಿಗಳು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ವಿಫಲವಾದವು," ಎಂದು IISc ಸುಸ್ಥಿರ ಸಾರಿಗೆ (IST) ಲ್ಯಾಬ್ ಪ್ರಾಧ್ಯಾಪಕ ಡಾ. ಆಶಿಶ್ ವರ್ಮಾ ಹೇಳಿದರು.

ಸಿಲಿಕಾನ್ ಸಿಟಿ ಮಂದಿ ಆರೋಗ್ಯಕ್ಕೆ ಪರಿಣಾಮ

ಸಿಲಿಕಾನ್ ಸಿಟಿ ಮಂದಿ ಆರೋಗ್ಯಕ್ಕೆ ಪರಿಣಾಮ

ಸಾರ್ವಜನಿಕ ಸಾರಿಗೆ ಬಳಕೆಯ ಬದಲಿಗೆ ಪ್ರತಿಯೊಬ್ಬರು ಖಾಸಗಿ ವಾಹನಗಳನ್ನು ಬಳಸುವುದಕ್ಕೆ ಮುಂದಾದರೆ ಅದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪರಿಸರ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಖಾಸಗಿ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದಂತೆ ವಾಯು ಮಾಲಿನ್ಯ ಪ್ರಮಾಣವು ಅಧಿಕವಾಗುತ್ತದೆ, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಭಾರತ್ ಸ್ಟೇಜ್ - 4ರ ಅಡಿಯಲ್ಲಿ ಉತ್ಪಾದಿಸಿದ ಹೊಸ ವಾಹನಗಳನ್ನು ಬಳಕೆ ಮಾಡುವುದಾಗಿ ವಾದಿಸಬಹುದು. ಅದಾಗ್ಯೂ, ಕೂಡ ಟ್ರಾಫಿಕ್ ಜಾಮ್ ಹೆಚ್ಚುತ್ತದೆ, ವಾಹನ ಸಂಚಾರ ದಟ್ಟಣೆ ಹೆಚ್ಚಾಗುವುದರೊಂದಿಗೆ ಪರಿಸರದಲ್ಲಿ ಮಾಲಿನ್ಯಕಾರಕಗಳ ಬಿಡುಗಡೆ ಪ್ರಮಾಣವು ಏರಿಕೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+