• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ರೋಗಲಕ್ಷಣವಿಲ್ಲದಿದ್ದರೂ ಸೋಂಕು, ಕಂಟೇನ್ಮೆಂಟ್ ಸಂಖ್ಯೆ 85

|

ಬೆಂಗಳೂರು, ಜೂನ್ 11: ಬೆಂಗಳೂರಿನಲ್ಲಿ ಅನ್ ಲಾಕ್ 1.0 ಜಾರಿಗೆ ಬರುತ್ತಿದ್ದಂತೆ ಕೊರನಾವೈರಸ್ ಸೋಂಕಿತರ ಸಂಖ್ಯೆಯೂ ಏರಿಕೆ ಕಂಡಿದೆ. ಸಾರಿಗೆ, ಸಂಪರ್ಕ, ಹೋಟೆಲ್, ಧಾರ್ಮಿಕ ಕೇಂದ್ರಗಳು ತೆರೆದಿವೆ. ಈ ನಡುವೆ ಕೊವಿಡ್ 19 ರೋಗ ಲಕ್ಷಣಗಳಿಲ್ಲದವರಿಗೂ ಸೋಂಕು ತಗುಲಿರುವುದು ಆತಂಕ ಹೆಚ್ಚಿಸಿದೆ.

   Kumaraswamy spoke about issues facing from Bengaluru Mysore highway | Oneindia Kannada

   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಕಂಟೇನ್ಮೆಂಟ್ ಜೋನ್ ಗಳ ಸಂಖ್ಯೆ ಕೂಡಾ ಏರುತ್ತಿರುವುದು ಆತಂಕಕಾರಿಯಾಗಿದೆ. ಬುಧವಾರದಂದು ಬೆಂಗಳೂರಿನಲ್ಲಿ 85 ಕಂಟೇನ್ಮೆಂಟ್ ಜೋನ್ ಗಳನ್ನು ಗುರುತಿಸಲಾಗಿದೆ.

   ಕೊರೊನಾ ಬಗ್ಗೆ ಎಚ್ಚರವಿರಲಿ, ಹೊಸದಾಗಿ ಎರಡು ರೋಗಲಕ್ಷಣ ಸೇರ್ಪಡೆ?

   ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 572ಕ್ಕೆ ಏರಿಕೆಯಾಗಿದೆ. ಒಂದೇ ದಿನ 42 ಹೊಸ ಪ್ರಕರಣ, 2 ಸಾವು ಸಂಭವಿಸಿದೆ. 42 ರಲ್ಲಿ 22 ಪ್ರಕರಣಗಳಲ್ಲಿ ಸಾಮಾನ್ಯ ಜ್ವರ, ನೆಗಡಿ, ಕೆಮ್ಮು ಎಂದು ಬಂದವರಿಗೆ ಸೋಂಕು ಇರುವುದು ಪತ್ತೆಯಾಗಿರುವುದು ಆತಂಕ ಉಂಟು ಮಾಡಿದೆ. ಒಟ್ಟು 244 ಸಕ್ರಿಯ ಪ್ರಕರಣಗಳಿದ್ದು, 298 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 21 ಮಂದಿ ಮೃತರಾಗಿದ್ದು, 1343 ಕ್ವಾರಂಟೈನ್ ನಲ್ಲಿದ್ದಾರೆ.

   ಬಿಬಿಎಂಪಿಯಿಂದ ಅಗತ್ಯ ಕ್ರಮ

   ಬಿಬಿಎಂಪಿಯಿಂದ ಅಗತ್ಯ ಕ್ರಮ

   ಮುಂಬೈ, ಚೆನ್ನೈ, ಅಹಮದಾಬಾದ್ ಸೇರಿದಂತೆ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಸೋಂಕಿತ ಸಂಖ್ಯೆ ತುಂಬಾ ಕಡಿಮೆ ಇದೆ. ಬಿಬಿಎಂಪಿ ಕೈಗೊಂಡ ಕ್ರಮಗಳು ನಗರದಲ್ಲಿ ಸೋಂಕು ಹರಡದಂತೆ ತಡೆದಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.

   ನಗರದಲ್ಲಿನ ಕೋವಿಡ್ - 19 ಸೋಂಕಿತರ ಪೈಕಿ ಶೇ 48ರಷ್ಟು ಪ್ರಕರಣ ರೋಗಿಯ ಪ್ರಾಥಮಿಕ ಸಂಪರ್ಕದಿಂದ ಬಂದಿರುವುದು. ಶೇ 15ರಷ್ಟು ಪ್ರಕರಣಗಳು ಟ್ರಾವೆಲ್ ಹಿಸ್ಟರಿಯನ್ನು ಹೊಂದಿವೆ.

   ಈ ಎರಡು ಪ್ರದೇಶಗಳಲ್ಲಿ ಪರಿಸ್ಥಿತಿ ಕಷ್ಟ

   ಈ ಎರಡು ಪ್ರದೇಶಗಳಲ್ಲಿ ಪರಿಸ್ಥಿತಿ ಕಷ್ಟ

   ಒಟ್ಟು ಪ್ರಕರಣಗಳ ಶೇ 41ರಷ್ಟು ಶಿವಾಜಿನಗರದಲ್ಲಿ ಕಂಡು ಬಂದಿದ್ದರೆ, ಶೇ 22ರಷ್ಟು ಪಾದರಾಯನಪುರದಲ್ಲಿವೆ. ಎಷ್ಟೇ ಕಠಿಣ ನಿಯಮಗಳು ಬಂದರೂ ಈ ಎರಡು ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿಲ್ಲ ಎಂದು ಪಶ್ಚಿಮ ವಲಯದ ಆರೋಗ್ಯ ಅಧಿಕಾರಿ ಡಾ. ಮನೋರಂಜನ್ ಹೇಳಿದ್ದಾರೆ.

   ಒಟ್ಟಾರೆ 85 ಪ್ರದೇಶಗಳು ಕಂಟೇನ್ಮೆಂಟ್

   ಒಟ್ಟಾರೆ 85 ಪ್ರದೇಶಗಳು ಕಂಟೇನ್ಮೆಂಟ್

   85 ಕಂಟೇನ್ಮೆಂಟ್ ಪ್ರದೇಶಗಳು

   ಪಾದರಾಯನಪುರ,

   ಬೊಮ್ಮನಹಳ್ಳಿ,

   ಹೊಂಗಸಂದ್ರ,

   ಬೇಗೂರು,

   ಶಿವಾಜಿನಗರ,

   ಬಿಟಿಎಂ ಲೇಔಟ್,

   ಮಲ್ಲೇಶ್ವರ,

   ಎಚ್ ಬಿ ಆರ್ ಲೇಔಟ್,

   ಹೇರೋಹಳ್ಳಿ,

   ಮಂಗಮ್ಮನಪಾಳ್ಯ,

   ಹೂಡಿ,

   ನಾಗವಾರ,

   ಜ್ಞಾನಭಾರತಿ ನಗರ,

   ಕೆ. ಆರ್ ಮಾರುಕಟ್ಟೆ,

   ಎಸ್ ಕೆ ಗಾರ್ಡನ್(ಡಿ.ಜೆ ಹಳ್ಳಿ),

   ಲಕ್ಕಸಂದ್ರ,

   ಥಣಿಸಂದ್ರ,

   ಅಗರ,

   ಪುಟ್ಟೇನಹಳ್ಳಿ,

   ಮಾರಪ್ಪನಪಾಳ್ಯ,

   ಹಗದೂರು,

   ವರ್ತೂರು,

   ರಾಮಮೂರ್ತಿ ನಗರ,

   ಅಗ್ರಹಾರ ದಾಸರಹಳ್ಳಿ,

   ಹೊನ್ನಾರುಪೇಟೆ,

   ಮಾರತ್ ಹಳ್ಳಿ,

   ಸಿದ್ದಾಪುರ,

   ಹೊಸ ಹಳ್ಳಿ,

   ಎಚ್. ಎಸ್ ಆರ್ ಲೇ ಔಟ್,

   ಕಾಡುಗೋಡಿ,

   ಚೊಕ್ಕಸಂದ್ರ,

   ಪಾಟರಿ ಟೌನ್,

   ಸಿಂಗಸಂದ್ರ,

   ಕುಮಾರಸ್ವಾಮಿ ಲೇ ಔಟ್,

   ಕೋಡಿಗೆಹಳ್ಳಿ,

   ಗಣಪತಿ ನಗರ,

   ಬೆಳ್ಲಂದೂರು,

   ಕರಗಪ್ಪನಗರ,

   ನಾಗಾವಾರ,

   ತಿಪ್ಪಸಂದ್ರ,

   ಹನುಮಂತನಗರ,

   ಆರ್ ಟಿ ನಗರ,

   ಅಶೋಕ ನಗರ ಚಾಮರಾಜಪೇಟೆ,

   ಬಂಬೂ ಬಜಾರ್ ಬಳಿ ಸ್ಲಾಟರ್ ಹೌಸ್ ರಸ್ತೆ,

   ಹೊಸಕೆರೆ ಹಳ್ಳಿ ಬಳಿ ವೀರಭದ್ರನಗರ ಮುಂತಾದ ಪ್ರದೇಶಗಳಿವೆ

   ಮನೆಯಲ್ಲೇ ಐಸೋಲೇಷನ್ ಚಿಕಿತ್ಸೆ

   ಮನೆಯಲ್ಲೇ ಐಸೋಲೇಷನ್ ಚಿಕಿತ್ಸೆ

   ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿ ಹೆಚ್ಚಾಗುತ್ತಿರುವುದರಿಂದ ಪ್ರತ್ಯೇಕ ಐಸೋಲೇಷನ್ ವಾರ್ಡ, ಸಂಪರ್ಕಿತರ ಕ್ವಾರಂಟೈನ್ ಘಟಕ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸೋಂಕಿತರಿಗೆ ಅವರ ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡರೆ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ, ರೋಗ ಲಕ್ಷಣವಿಲ್ಲದವರಿಗೂ ಸೋಂಕು ಕಾಣಿಸಿಕೊಂಡರೂ ಒಂದು ವಾರದ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.

   English summary
   Number of Covid-19 containment zones in Bengaluru rises to 85 and number of Covid 19 cases to 572.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X