ಟೆಕ್ಕಿಗಳು ಎಲೆಕ್ಟ್ರಾನಿಕ್ ಸಿಟಿಗೆ ಉಚಿತವಾಗಿ ಬಸ್‌ನಲ್ಲಿ ಸಂಚರಿಸಿ: ಮಾರ್ಗ, ವೇಳಾಪಟ್ಟಿ

ಬೆಂಗಳೂರು, ನವೆಂಬರ್ 16: ಎಲೆಕ್ಟ್ರಾನಿಕ್ ಸಿಟಿ, ರೇಷ್ಮೆ ಸಂಸ್ಥೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಈ ಮಾರ್ಗದಲ್ಲಿ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ತಾಸುಗಟ್ಟಲೇ ರಸ್ತೆಯಲ್ಲಿ ವಾಹನ ಸವಾರರು ತಾಳ್ಮೆಯಿಂದ ಕಾಯಬೇಕಿದೆ. ಆದರೆ ಈಗ ಲಕ್ಷಾಂತರ ಟೆಕ್ಕಿಗಳಿಗೆ ಸಂತಸ ನೀಡುವ ಸುದ್ದಿಯೊಂದಿದೆ. ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಇನ್ಸ್‌ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ ಬಸ್‌ಗಳಲ್ಲಿ ಉಚಿತವಾಗಿ ಅವರು ಸಂಚಾರ ನಡೆಸುವ ವ್ಯವಸ್ಥೆ ಜಾರಿಗೆ ಬಂದಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಟೌನ್ ಪ್ಲಾನಿಂಗ್ ಅಥಾರಿಟಿ (ಎಲ್ಸಿಟಾ) ಜಂಟಿಯಾಗಿ ಇಂತಹ ಪ್ರಯತ್ನವನ್ನು ಆರಂಭಿಸಿದೆ. ಈ ಘೋಷಣೆಯ ಅನ್ವಯ 2025ರ ಜನವರಿಯಲ್ಲಿ ಶಟಲ್ ಬಸ್‌ಗಳ ಸಂಖ್ಯೆಯೂ ಹೆಚ್ಚಲಿದ್ದು, ಉಚಿತವಾಗಿ ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಇನ್ಸ್‌ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ ಸಂಚಾರವನ್ನು ಆರಂಭಿಸಲಿವೆ.

Now Travel Silk Institute Metro Station To Electronics City For Free

ಎಲೆಕ್ಟ್ರಾನಿಕ್ಸ್ ಸಿಟಿ ಟೌನ್ ಪ್ಲಾನಿಂಗ್ ಅಥಾರಿಟಿ (ಎಲ್ಸಿಟಾ) ಶಟಲ್ ಬಸ್‌ಗಳನ್ನು ನಿರ್ವಹಣೆ ಮಾಡುತ್ತದೆ. ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಲು ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ಎಲೆಕ್ಟ್ರಿಕ್ ಶಟಲ್ ಬಸ್‌ಗಳನ್ನು ಓಡಿಸುತ್ತದೆ. ಈಗ ಬೆಂಗಳೂರು ನಗರದ ಬ್ಯುಸಿ ಮಾರ್ಗವಾದ ಎಲೆಕ್ಟ್ರಾನಿಕ್ ಸಿಟಿ-ರೇಷ್ಮೆ ಸಂಸ್ಥೆ ನಡುವೆ ಈ ಮಾದರಿ ಬಸ್ ಸಂಚಾರ ಪ್ರಾರಂಭಿಸಿದೆ.

ಉಚಿತ ಬಸ್ ಪ್ರಯಾಣ: ಬಿಎಂಟಿಸಿ ಜೊತೆ ಹೊಂದಾಣಿಕೆ ಮಾಡಿಕೊಂಡು ಎಲ್ಸಿಟಾ ಎಲೆಕ್ಟ್ರಾನಿಕ್ ಸಿಟಿ-ರೇಷ್ಮೆ ಸಂಸ್ಥೆ ನಡುವೆ ಉಚಿತವಾಗಿ ಮೂರು ಟ್ರಿಪ್ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುತ್ತಿದೆ. ಈ ಬಸ್ ಸೇವೆಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಹೆಚ್ಚಿನ ಬಸ್ ಸೇವೆಯನ್ನು ಒದಗಿಸಲು ಚಿಂತನೆ ನಡೆಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಬೋರ್ಡ್‌ ನಡುವೆ ಇರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲು ಎಲ್ಸಿಟಾ ಈ ಶಟಲ್ ಬಸ್ ಸೇವೆಯನ್ನು ಆರಂಭಿಸಿದೆ. ಇದರಿಂದಾಗಿ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಾದರಿಯಲ್ಲಿ ಇದು ಮೊದಲ ಸೇವೆಯಲ್ಲ. 2021ರಲ್ಲಿ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ ಕಾರ್ಯಾರಂಭ ಮಾಡಿದ ಬಳಿಕ ಎಲ್ಸಿಟಾ ಈ ಮಾದರಿ 4 ಬಸ್‌ಗಳನ್ನು ಸಿಲ್ಕ್ ಇನ್ಸ್‌ಟಿಟ್ಯೂಟ್‌ ಮೆಟ್ರೋ ನಿಲ್ದಾಣದಿಂದ ಆರಂಭಿಸಿತ್ತು. ಈ ಬಸ್‌ಗಳಲ್ಲಿ ಸದ್ಯ 150-180 ಪ್ರಯಾಣಿಕರು ಸಂಚಾರವನ್ನು ನಡೆಸುತ್ತಿದ್ದಾರೆ. ಈಗ ಬಿಎಂಟಿಸಿ ಬಸ್‌ಗಳ ಹೊರತಾಗಿಯೂ ಈ ಮಾದರಿ ಬಸ್‌ಗಳಲ್ಲಿ 300 ಪ್ರಯಾಣಿಕರು ಸಂಚಾರ ನಡೆಸುವ ನಿರೀಕ್ಷೆ ಇದೆ ಎಂದು ಎಲ್ಸಿಟಾ ಹೇಳಿದೆ.

ಈ ಎಲ್ಸಿಟಾ ಬಸ್‌ಗಳು ನಿಗದಿತ ವೇಳಾಪಟ್ಟಿಯನ್ನು ಹೊಂದಿರುತ್ತವೆ. ಸಿಲ್ಕ್‌ ಇನ್ಸ್‌ಟಿಟ್ಯೂಟ್‌ ಮೆಟ್ರೋ ನಿಲ್ದಾಣದಿಂದ 7.45, 8.45, 9.10 ಮತ್ತು 9.30ಕ್ಕೆ ಹೊರಡಲಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಈ ಬಸ್‌ಗಳು 4.45, 5.30, 6 ಗಂಟೆ ಮತ್ತು 6.20ಕ್ಕೆ ಹೊರಡಲಿವೆ. ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಬೆಳಗ್ಗೆ 8.15ಕ್ಕೆ ಸಿಲ್ಕ್‌ ಇನ್ಸ್‌ಟಿಟ್ಯೂಟ್‌ನಿಂದ ಮತ್ತು ಸಂಜೆ 5.15ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಡಲಿವೆ.

ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ನಮ್ಮ ಮಟ್ರೋ ಸಂಚಾರ ಆರಂಭವಾದರೆ ಈ ಮಾದರಿ ಬಸ್‌ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ಎಲ್ಸಿಟಾ ಅಂದಾಜಿಸಿದೆ. ಇದೇ ಮಾದರಿಯಲ್ಲಿ ಕೋನಪ್ಪನ ಅಗ್ರಹಾರ, ಇನ್ಫೋಸಿಸ್‌ ನಿಲ್ದಾಣಗಳಿಂದಲೂ 6 ಬಸ್‌ಗಳನ್ನು ಓಡಿಸಲು ಎಲ್ಸಿಟಾ ಯೋಜನೆ ರೂಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+