ಬೆಂಗಳೂರು ಕೋವಿಡ್ ಕಂಟೈನ್ಮೆಂಟ್ ಝೋನ್ ಮುಕ್ತ: ಬಿಬಿಎಂಪಿ
ಬೆಂಗಳೂರು, ಅಕ್ಟೋಬರ್ 02: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಹದೇವಪುರ ವಲಯವು ಕೊರೊನಾ ಕಂಟೈನ್ಮೆಂಟ್ ಮುಕ್ತವಾಗಿದೆ. ಈ ಮೂಲಕ ಬೆಂಗಳೂರು ಮೊದಲ ಬಾರಿಗೆ ಕೋವಿಡ್ ಕಂಟೈನ್ಮೆಂಟ್ ಮುಕ್ತವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಆರು ತಿಂಗಳಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರ ಕೋವಿಡ್ ಕಂಟೈನ್‌ಮೆಂಟ್ ವಲಯಗಳಿಂದ ಮುಕ್ತವಾಗಿದೆ. ಮಾರ್ಚ್‌ನಲ್ಲಿ ರಾಜ್ಯ ಸರ್ಕಾರವು 3ರಿಂದ 5 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಸ್ಥಳಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಿತ್ತು. ಮಾರ್ಚ್‌ನಲ್ಲಿ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳ ನಂತರ ಬೆಂಗಳೂರು ಶೂನ್ಯ ಕಂಟೈನ್‌ಮೆಂಟ್ ವಲಯ ದಾಖಲಾಗಿದ್ದು ಇದೇ ಮೊದಲು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಎ.ಎಸ್. ಬಾಲಸುಂದರ್ ಅವರು, ಇತ್ತೀಚೆಗೆ ನಗರದಲ್ಲಿ ಮೂರಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಒಂದೇ ಸ್ಥಳದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ನಗರದಲ್ಲಿ ವಿವಿಧ ವಲಯಗಳಲ್ಲಿನ ಕಂಟೈನ್‌ಮೆಂಟ್ ಸಂಖ್ಯೆ ಶೂನ್ಯಕ್ಕೆ ಇಳಿಕೆ ಆಗಿದೆ. ಪರೀಕ್ಷೆಯಲ್ಲಿ ಅಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಗಳ ಸಂಘಟಿತ ಪ್ರಯತ್ನಗಳು. , ನಿಖರವಾದ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಹಾಯ ಮಾಡಿದೆ ಎಂದು ಅವರು ಶ್ಲಾಘಿಸಿದರು.

200ಕ್ಕೂ ಹೆಚ್ಚು ಕಂಟೈನ್ಮೆಂಟ್; ರಾಜ್ಯ ಸರ್ಕಾರ ಮಾರ್ಚ್ ತಿಂಗಳಲ್ಲಿ ಯಾವುದೇ ಸ್ಥಳದಲ್ಲಿ, ಶಾಲಾ- ಕಾಲೇಜುಗಳಲ್ಲಿ, ವಸತಿ ಕಾಲೋನಿಗಳು, ಕಚೇರಿ ಸ್ಥಳಗಳು ಮತ್ತಿತರ ಕಡೆಗಳಲ್ಲಿ 3ರಿಂದ 5 ಕ್ಕಿಂತ ಹೆಚ್ಚು ಪ್ರಕರಣ ಹೊಂದಿರುವ ಸ್ಥಳವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲು ಮಾರ್ಗಸೂಚಿ ಹೊರಡಿಸಿತು. ಅದಾದ ನಂತರ ದೇಶದಲ್ಲಿ ಓಮಿಕ್ರೋನ್ ವೈರಸ್ ಪ್ರಭಾವ ಹೆಚ್ಚಾಯಿತು. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ ಹಂತ ಹಂತವಾಗಿ ಏರಿಕೆ ಆಯಿತು.
ಕೋವಿಡ್ ಪರಾಕಾಷ್ಠೆ ಹೆಚ್ಚಿದ್ದ ಸಂದರ್ಭದಲ್ಲಿ ಬಿಬಿಎಂಪಿಯು 200ಕ್ಕೂ ಹೆಚ್ಚು ಕಂಟೈನ್‌ಮೆಂಟ್ ವಲಯಗಳನ್ನು ಮಾಡಿ ಕೋವಿಡ್ ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚಿಸಿತ್ತು. ಮಹದೇವಪುರ, ಟೆಕ್ ಕಾರಿಡಾರ್ ಸುತ್ತಮುತ್ತಲಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿ ಆಗಿದ್ದವು. ಕೆಲವೇ ವಾರಗಳ ಹಿಂದೆ ಮಹದೇವಪುರದಲ್ಲಿ 15 ಕಂಟೈನ್ಮೆಂಟ್ ವಲಯ ಹೊಂದಿತ್ತು ಎಂದು ಅವರು ಹೇಳಿದರು.
ಕೋವಿಡ್ ಆಪ್ಸ್ ಸ್ಕೇಲಿಂಗ್ ಡೌನ್ ; ಇದೀಗ ಕಂಟೈನ್‌ಮೆಂಟ್ ಮುಕ್ತ ವಾತಾವರಣದೊಂದಿಗೆ ಬಿಬಿಎಂಪಿಯು ಕೋವಿಡ್ ಕಾರ್ಯಾಚರಣೆ ಮಾಡಲು ಪ್ರಾರಂಭಿಸಿದೆ. ಸದ್ಯಕ್ಕೆ ಪ್ರಕರಣ ಕಡಿಮೆ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯ ಕೈಬಿಡಲಾಗುತ್ತಿದೆ ಇದರ ಹೊರತು ಉಳಿದೆಲ್ಲ ನಿಯಂತ್ರಣ ಕ್ರಮದಡಿ ಕಾರ್ಯ ನಿರ್ವಹಣೆ ಮುಂದುವರಿಸಲಿದ್ದೇವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರೋಗಿಗಳಿಗೆ ಚಿಕಿತ್ಸೆ ನೀಡಲು ಮೀಸಲಾದ ಹಾಸಿಗೆ, ಆಸ್ಪತ್ರೆಗಳ ಮೇಲಿನ ಎಚ್ಚರಿಕೆ ಹೀಗೆ ಮುಂದುವರಿಯಲಿದೆ. ಗಂಟಲು ಮಾದರಿ ಸಂಗ್ರಹ ಇನ್ನಿತರ ಗುತ್ತಿಗೆ ಆಧಾರದ ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯದಿಂದ ಬಿಡುಗಡೆ ಮಾಡದೇ ಕರ್ತವ್ಯದಲ್ಲಿ ಮುಂದುವರಿಸಲಿದ್ದೇವೆ.
ಇನ್ನೂ ಹಬ್ಬದ ಸಂದರ್ಭಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರ ಸೂಕ್ತ ಎಚ್ಚರಿಕೆ ವಹಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿತ್ತು. ಪಾಸಿಟಿವಿಟಿ ದರ ಹೆಚ್ಚಾಗದಂತೆ ನಿಗಾ ವಹಿಸಬೇಕು. ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಅದರಂತೆ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದ್ದು, ಸದ್ಯ ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬಾಲಸುಂದರ್ ತಿಳಿಸಿದರು.












Click it and Unblock the Notifications