2021ರಿಂದ ಬೆಂಗಳೂರು-ಸ್ಯಾನ್ ಫ್ರಾನಿಸ್ಕೋ ತಡೆ ರಹಿತ ವಿಮಾನ ಸೇವೆ
ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೊ ನಡುವೆ ತಡೆ ರಹಿತ ವಿಮಾನ ಸೇವೆ 2021ರಲ್ಲಿ ಆರಂಭವಾಗಲಿದೆ. ಅಮೆರಿಕ ಮೂಲದ ಯುನೈಟೆಡ್ ಏರ್‌ಲೈನ್ಸ್ ಈ ಕುರಿತು ಘೋಷಣೆ ಮಾಡಿದೆ.
ವಿಶ್ವಮಟ್ಟದಲ್ಲಿ ವ್ಯಾಪಾರ ವಿಸ್ತರಣೆಗೆ ಯುನೈಟೆಡ್ ಏರ್‌ಲೈನ್ಸ್ ಮುಂದಾಗಿದೆ. ಭಾರತ, ಆಫ್ರಿಕಾ, ಹವಾಯಿಯ ಹಲವು ನಗರಗಳಿಗೆ ತಡೆ ರಹಿತ ವಿಮಾನ ಸೇವೆಯನ್ನು ಆರಂಭಿಸಲಿದೆ. 2020ರ ಡಿಸೆಂಬರ್‌ನಲ್ಲಿ ಚಿಕಾಗೋ-ನವದೆಹಲಿ ತಡೆ ರಹಿತ ವಿಮಾನ ಆರಂಭವಾಗಲಿದೆ.
2021ರ ಮಾರ್ಚ್‌ನಲ್ಲಿ ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೋ ತಡೆ ರಹಿತ ವಿಮಾನ ಹಾರಾಟ ಆರಂಭಿಸುವ ನಿರೀಕ್ಷೆ ಇದೆ. ಚಿಕಾಗೋದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಲ್ಲಿದ್ದು, ಅಲ್ಲಿಂದ ದೆಹಲಿಗೆ ವಿಮಾನ ಹಾರಾಟ ನಡೆಸಲಿದೆ.

2020ರ ಜೂನ್‌ನಲ್ಲಿಯೇ ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣಕ್ಕಾಗಿ ಅದನ್ನು ಮುಂದೂಡಲಾಗಿತ್ತು. ಈಗಿರುವ ಮುಂಬೈ, ನವದೆಹಲಿ ಮಾರ್ಗದ ಜೊತೆ ಎರಡು ಹೊಸ ಮಾರ್ಗದಲ್ಲಿ ವಿಮಾನಯಾನ ಸಂಸ್ಥೆ ಹಾರಾಟ ನಡೆಸಲಿದೆ.
ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೊ ನೇರ ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ಎರಡು ನಗರಗಳು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ನೇರ ವಿಮಾನ ಸೇವೆ ಆರಂಭವಾದರೆ ಅನುಕೂಲವಾಗಲಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸದ್ಯ ಭಾರದಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಮತ್ತೆ ಹಾರಾಟ ಆರಂಭವಾಗುವ ಸಾಧ್ಯತೆ ಇದೆ.












Click it and Unblock the Notifications